ರಾಯಚೂರು : ಮತಾಂಧ ಸ್ವಯಂ ಸೇವಕ ಸಂಘವು (RSS) ವಿಜಯದಶಮಿಯ ಉತ್ಸವದ ಹಿನ್ನೆಲೆಯಲ್ಲಿ ರಾಯಚೂರು ನಗರದಲ್ಲಿ ಸೋಮವಾರ ಸಂಜೆ (14/10/2024) ಆಯೋಜಿಸಿದ ಪಥಸಂಚಲನ ಕಾರ್ಯಕ್ರಮದಲ್ಲಿ, ಮುಖ್ಯ ಅತಿಥಿಯಾಗಿ ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಪ್ರೋ ಹರೀಶ್ ರಾಮಸ್ವಾಮಿ ಅವರ ಭಾಗವಹಿಸುವಿಕೆಯನ್ನು ಹಲವಾರು ಜನ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಯಾದ ರಾಯಚೂರು ವಿಶ್ವವಿದ್ಯಾಲಯದ ಕುಲಪತಿಗಳು, ಈ ರೀತಿಯ ಮತಾಂಧ ಆರ್‌ಎಸ್‌ಎಸ್ ಸಂಘಟನೆಯ ಜೊತೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದನ್ನು ಹಲವಾರು ಜನ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
“ಹರೀಶ್ ರಾಮಸ್ವಾಮಿ ಒಬ್ಬ ವ್ಯಕ್ತಿಯಾಗಿ ಯಾವ ಸಂಘಟನೆ ಜೊತೆಗೆ ಬೇಕಾದರೂ ಗುರುತಿಸಿಕೊಳ್ಳುವ ಸ್ವತಂತ್ರ ಆಯ್ಕೆ ಹೊಂದಿದ್ದಾರೆ. ಆದರೆ ಒಂದು ವಿಶ್ವವಿದ್ಯಾನಿಲಯದ ಕುಲಪತಿಯಾಗಿ ಅವರ ನಡೆ ಬೌದ್ಧಿಕ ವಲಯದಲ್ಲಿ ಅತ್ಯಂತ ಅಪಾಯಕಾರಿ ಸಂದೇಶವನ್ನು ಪಸರಿಸಿದೆ” ಎಂದು ಚಂದ್ರಕಾಂತ್ ವಡ್ಡು ಅವರು ಬೇಸರವನ್ನು ಹೊರಹಾಕಿದ್ದಾರೆ.