ಗೋಮಾಂಸ ತಿನ್ನುವ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಶಿವನ ಚಿತ್ರ ತರುವುದನ್ನು ಸಹಿಸಲ್ಲ: ರಾಜಸ್ಥಾನ ಬಿಜೆಪಿ ಮುಖ್ಯಸ್ಥನಿಂದ ವಿವಾದಾತ್ಮಕ ಹೇಳಿಕೆ

Most read

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸುವ ಬರದಲ್ಲಿ ರಾಜಸ್ಥಾನದ ಬಿಜೆಪಿ ಮುಖ್ಯಸ್ಥ ಸಿಪಿ ಜೋಶಿ, “ಗೋಮಾಂಸ ಸೇವಿಸುವವರು” ಸಂಸತ್ತಿನಲ್ಲಿ ಶಿವನ ಚಿತ್ರವನ್ನು ತೋರಿಸುವುದನ್ನು ಸಹಿಸಲ್ಲ ಎಂದು ಹೇಳುವ ಮೂಲಕ ವಿವಾದ ಹುಟ್ಟುಹಾಕಿದ್ದಾರೆ. ಈಗ ಈ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಬುಧವಾರ ದೌಸಾದಲ್ಲಿ ನಡೆದ ಪಕ್ಷದ ಸಭೆಯಲ್ಲಿ ಜೋಶಿ, “ಭಾರತ-ಚೀನಾ ಅಂತರಾಷ್ಟ್ರೀಯ ಗಡಿ ವಿವಾದ ಉಂಟಾಗಿದ್ದು, ರಾಹುಲ್ ಗಾಂಧಿ ಚೀನಾ ರಾಯಭಾರಿ ಜೊತೆ ಕುಳಿತಿ ಮಜ ಮಾಡುತ್ತಿದ್ದಾರೆ. ಗೋಮಾಂಸ ಸೇವಿಸುವವರು ಸಂಸತ್ತಿಗೆ ಶಿವನ ಚಿತ್ರವನ್ನು ತರುತ್ತಾರೆ, ಇದನ್ನು ಸಹಿಸಲಾಗುವುದಿಲ್ಲ” ಎಂದು ಜೋಶಿ ಹೇಳಿದರು.

ಯಾರಾದರೂ ಹಿಂದೂಗಳನ್ನು ಭಯೋತ್ಪಾದಕರು ಎಂದು ಕರೆದರೆ, ಅವರನ್ನು ಹಿಂಸಾತ್ಮಕ ಎಂದು ಕರೆದರೆ ಮತ್ತು ರಾಮಮಂದಿರವನ್ನು ವಿರೋಧಿಸಿದರೆ ನಾವು ಮೌನವಾಗಿರುತ್ತೇವೆಯೇ? ಅಧ್ಯಕ್ಷ ದ್ರೌಪದಿ ಮುರ್ಮು ಅವರ ಚರ್ಮದ ಬಣ್ಣದ ಬಗ್ಗೆ ಅಣಕಿಸುವವರು ನೋಡಿ ನಾವು ಮೂಕ ಪ್ರೇಕ್ಷಕರಾಗಿ ಉಳಿಯಲು ಸಾಧ್ಯವೇ?,” ಎಂದು ಕಿಡಿಕಾರಿದ್ದಾರೆ.

18ನೇ ಲೋಕಸಭೆಯ ಅಧಿವೇಶನದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಇಸ್ಲಾಂ ಮತ್ತು ಸಿಖ್ ಧರ್ಮದ ಉದಾಹರಣೆಯನ್ನು ನೀಡಿದ ರಾಹುಲ್ ಗಾಂಧಿ, ಎಲ್ಲಾ ಧರ್ಮಗಳು ಧೈರ್ಯದ ಬಗ್ಗೆ ಮಾತನಾಡುತ್ತವೆ ಮತ್ತು ನಿರ್ಭಯವಾಗಿರಬೇಕು ಎಂದು ಒತ್ತಿಹೇಳುತ್ತವೆ ಎಂದು ಹೇಳಿದರು. ವಿರೋಧ ಪಕ್ಷದಲ್ಲಿರುವುದಕ್ಕೆ ಸಂತೋಷ ಮತ್ತು ಹೆಮ್ಮೆ ಇದೆ ಎಂದ ಅವರು, ನಮಗೆ ಅಧಿಕಾರಕ್ಕಿಂತ ಮಿಗಿಲಾದದ್ದು ಸತ್ಯ.

ಸ್ಪೀಕರ್ ಓಂ ಬಿರ್ಲಾ ಅವರು ಶಿವನ ಚಿತ್ರವನ್ನು ತೋರಿಸದಂತೆ ಗಾಂಧಿಯನ್ನು ನಿಷೇಧಿಸಿದ್ದರೂ, ನೀವು ಚಿತ್ರವನ್ನು ನೋಡಿದರೆ ಹಿಂದೂಗಳು ಎಂದಿಗೂ ಭಯ ಮತ್ತು ದ್ವೇಷವನ್ನು ಹರಡಲು ಸಾಧ್ಯವಿಲ್ಲ, ಆದರೆ ಬಿಜೆಪಿ 24/7 ಭಯ ಮತ್ತು ದ್ವೇಷವನ್ನು ಹರಡುತ್ತದೆ ಎಂದು ವಾದಿಸಿದರು.

More articles

Latest article