ಚಂಡೀಗಢ: ಹಿರಿಯ ಅಧಿಕಾರಿಗಳ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡ ಹರಿಯಾಣ ರಾಜ್ಯದ ಐಪಿಎಸ್ ಅಧಿಕಾರಿ ವೈ. ಪೂರನ್ ಕುಮಾರ್ ಅವರ ಕುಟುಂಬದವರನ್ನು ಕಾಂಗ್ರೆಸ್ ಮುಖಂಡ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಇಂದು ಭೇಟಿಯಾಗಿ ಸಾಂತ್ವನ ಹೇಳಿದರು.
ರಾಹುಲ್ ಅವರು ಇಂದು ಬೆಳಿಗ್ಗೆ ಸುಮಾರು 11 ಗಂಟೆ ಸುಮಾರಿಗೆ ಪೂರನ್ ಅವರ ನಿವಾಸಕ್ಕೆ ತೆರಳಿ ಶ್ರದ್ಧಾಂಜಲಿ ಅರ್ಪಿಸಿ ಅವರ ಕುಟುಂಬದವರೊಂದಿಗೆ ಚರ್ಚಿಸಿದರು.
ಪೂರನ್ ಕುಮಾರ್ ಅವರ ಆತ್ಮಹತ್ಯೆ ಕುರಿತು ಹರಿಯಾಣ ಮಾತ್ರವಲ್ಲದೆ ಇಡೀ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಈ ವಿವಾದದ ನಡುವೆಯೇ ರಾಹುಲ್ ಗಾಂಧಿ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದಾರೆ.
2001ನೇ ಬ್ಯಾಚ್ ಐಪಿಎಸ್ ಅಧಿಕಾರಿ 52 ವರ್ಷದ ಪೂರನ್ ಕುಮಾರ್, ಅವರು ಅಕ್ಟೋಬರ್ 7 ರಂದು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಪೂರನ್ ಅವರು ತಮ್ಮ 8 ಪುಟಗಳ ಡೆತ್ ನೋಟ್ ನಲ್ಲಿ ಹರಿಯಾಣ ಡಿಜಿಪಿ ಶತ್ರುಜೀತ್ ಕಪೂರ್, ಎಸ್‌ಪಿ ನರೇಂದ್ರ ಭಜರಂಗಿಯಾ ಸೇರಿ 8 ಹಿರಿಯ ಐಪಿಎಸ್ ಅಧಿಕಾರಿಗಳ ಮೇಲೆ ಜಾತಿ ತಾರತಮ್ಯ, ಮಾನಸಿಕ ಕಿರುಕುಳ, ಸಾವರ್ಜನಿಕ ಅವಹೇಳನ ಮತ್ತು ನಿಂದನೆ ಆರೋಪ ಮಾಡಿದ್ದರು.