ಪುಷ್ಪ-2 ಚಿತ್ರ ಬಿಡಗಡೆಗೆ ಮತ್ತೆ ಹೊಸ ದಿನಾಂಕ ಘೋಷಣೆ

ಬಹು ನಿರೀಕ್ಷಿತ ಪುಷ್ಪ ೨ ಚಿತ್ರ ಬರುವ ಡಿಸೆಂಬರ್‌ ೫ ರಂದು ತೆರೆಕಾಣಲಿದೆ ಎಂದು ನಾಯಕ ಅಲ್ಲು ಅರ್ಜುನ್‌ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಅಲ್ಲು ಅರ್ಜುನ್‌ ಮತ್ತು ರಶ್ಮಿಕಾ ಮಂದಣ್ಣ ನಾಯಕ-ನಾಯಕಿಯಾಗಿ ಅಭಿನಯಿಸಿರುವ ಪುಷ್ಪ ೨ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಡಿಸೆಂಬರ್‌ ೬ ಎಂದು ಮೊದಲು ಹೇಳಿತ್ತು. ಅದಕ್ಕೂ ಮೊದಲು ಈ ವರ್ಷದ ಆಗಸ್ಟ್‌ ೧೫ ಎಂದು ಸಹ ಘೋಷಿಸಲಾಗಿತ್ತು. ಆ ನಂತರದಲ್ಲಿ ಹಲವಾರು ಬಾರಿ ರೀಲಿಸ್‌ ದಿನಾಂಕವನ್ನು ಬದಲಾಯಿಸುತ್ತ ಬಂದಿತ್ತು. ಆದರೆ ಈಗ ಡಿಸೆಂಬರ್‌ ೫ ಕ್ಕೆ ಅಂದರೆ ಒಂದು ದಿನ ಮುಂಚಿತವಾಗಿಯೇ ಬಿಡುಗಡೆಯ ದಿನಾಂಕ ಘೋಷಿಸಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ.

ಅಲ್ಲು ಅರ್ಜುನ್‌ ಸಿಗರೇಟ್‌, ಗನ್‌ ಹಿಡದು ನಿಂತಿರುವ ಪೋಸ್ಟರ್‌ ಹಂಚಿಕೊಳ್ಳುವ ಮೂಲಕ ಚಿತ್ರ ಬಿಡುಗಡೆಯ ದಿನಾಂಕವನ್ನು ಬಹಿರಂಗ ಪಡಿಸಿದ್ದಾರೆ.

ನಿರ್ದೇಶಕ ಸುಕುಮಾರ್ ಆಯಕ್ಷನ್‌ ಕಟ್‌ ಹೇಳಿರುವ ಪುಷ್ಪ 2ʼ ತೆಲುಗು, ತಮಿಳು, ಹಿಂದಿ, ಕನ್ನಡ, ಮಲಯಾಳಂ, ಬೆಂಗಾಲಿ ಭಾಷೆಗಳಲ್ಲಿ ಸೇರಿದಂತೆ ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ.

More articles

Latest article

Most read