ಪುಷ್ಪ2 ಸಿನಿಮಾ ಕಪಲ್ ಸಾಂಗ್ ಓಕೆ.. ಆದರೆ ನಿರಾಸೆ ಮೂಡಿಸಿದೆ ಗೆಟಪ್..!

Most read

ಸುಕುಮಾರ್ ನಿರ್ದೇಶನದಲ್ಲಿ ಪುಷ್ಪ ಸಿನಿಮಾ ಸಿಕ್ಕಾಪಟ್ಟೆ ಹಿಟ್ ಆಗಿತ್ತು. ಅದರ ಸೀಕ್ವೆನ್ಸ್ ಗಾಗಿ ಜನ ಹುಚ್ಚೆದ್ದು ಕಾಯುತ್ತಿದ್ದಾರೆ. ಆಗಸ್ಟ್15 ಕ್ಕೆ ಸಿನಿಮಾ ತೆರೆಗೆ ಬರಲಿದೆ. ಚಿತ್ರತಂಡ ಈಗಾಗಲೇ ಒಂದೊಂದೆ ಹಾಡನ್ನು ಬಿಟ್ಟು ಮತ್ತಷ್ಟು ಕುತೂಹಲವನ್ನು ಹೆಚ್ಚಿಸಿದೆ. ಇದೀಗ ರಿಲೀಸ್ ಆಗಿರುವ ಕಪಲ್ ಸಾಂಗ್ ಎಲ್ಲರ ಗಮನ ಸೆಳೆಯುತ್ತಿದೆ. ಸಾಹಿತ್ಯ, ಸಿಂಗಿಂಗ್ ಓಕೆ ಬಟ್ ಲುಕ್ ವೈಸ್ ಬೇಸರ ಮೂಡಿಸಿದ್ದಾರೆ.

ಪುಷ್ಪ2 ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಅವರ ಲುಕ್ ನೋಡಲು ಎಲ್ಲರು ಕಾತುರದಿಂದ ಕಾಯುತ್ತಿದ್ದಾರೆ. ಕಪಲ್ ಸಾಂಗ್ ರಿಲೀಸ್ ಆಗುತ್ತೆ ಎಂದಾಗಲೇ ಎಲ್ಲರಿಗೂ ಲುಕ್ ರಿವಿಲ್ ಆಗುವ ನಿರೀಕ್ಷೆ ಇತ್ತು. ಆದರೆ ಅದೊಂದು ಬೇಸರ ಮೂಡಿಸಿದೆ. ಈ ಹಾಡಿಗೆ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ರಿಹರ್ಸಲ್ ಮಾಡಿರುವ ವಿಡಿಯೋವನ್ನೇ ಹಾಕಲಾಗಿದೆ. ಸೆಟ್ ಗೆ ಬಂದ ಡ್ರೆಸ್ ನಲ್ಲಿಯೇ ರಶ್ಮಿಕಾ, ಅಲ್ಲು ಕಾಣಿಸಿದ್ದಾರೆ. ಆ ಬೇಸರ ಹೊರತುಪಡಿಸಿದರೆ ಹಾಡಿಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ.

ದೇವಿ ಪ್ರಸಾದ್ ಸಂಗೀತ ನೀಡಿದ್ದು, ಶ್ರೇಯಾ ಘೋಷಾಲ್ ಧ್ವನಿ ನೀಡಿದ್ದಾರೆ. ಆರು ಭಾಷೆಗಳಲ್ಲಿ ಪುಷ್ಪ 2 ಕಪಲ್ ಸಾಂಗ್ ರಿಲೀಸ್ ಆಗಿದೆ. ‌ತೆಲುಗಿನಲ್ಲಿ ಆಸ್ಕರ್ ವಿಜೇತ ಚಂದ್ರಬೋಸ್ ಸಾಹಿತ್ಯ ಬರೆದರೆ ಕನ್ನಡದಲ್ಲಿ ವರದರಾಜ್ ಚಿಕ್ಕಬಳ್ಳಾಪುರ ಈ ಹಾಡಿನ ಸಾಲುಗಳನ್ನು ಬರೆದಿದ್ದಾರೆ. ಕನ್ನಡದಲ್ಲಿ ನೋಡೋಕೆ ಸಿಡಿಮದ್ದಿನಂತೆ ಇರ್ತಾನೆ ನನ್ನ ಸಾಮಿ ಅಂತ ಹಾಡು ಶುರುವಾಗುತ್ತದೆ. ಬಾಲಿವುಡ್ ನ ಖ್ಯಾತ ಡ್ಯಾನ್ಸ್ ಮಾಸ್ಟರ್‌ ಗಣೇಶ್ ಆಚಾರ್ಯ ಕೊರಿಯೋಗ್ರಫಿ ಮಾಡಿದ್ದಾರೆ. ಈ ವಿಡಿಯೋ ನೋಡಿದರೇನೆ ಸೆಟ್ ನಲ್ಲಿ ಸಿಕ್ಕಾಪಟ್ಟೆ ಎಂಜಾಯ್ ಮಾಡಿರುವುದು ಗೊತ್ತಾಗಿದೆ.

More articles

Latest article