ಕಳೆದ ಎಲೆಕ್ಷನ್ ನಲ್ಲಿ ಕಮಲ ಪಕ್ಷಕ್ಕೆ ಕನ್ನಡಿಗರು ಚೊಂಬು ಕೊಟ್ಟು ಕಳಿಸಿದ ಮೇಲೆ, ಕಳ್ಳಬಟ್ಟಿ ಕುಡಿದ ಸಿಂಗಳಿಕನಂತೆ ಎಗರಾಡುತ್ತಿದ್ದ ಪುಂಗಿಶ್ ಕೆರೆಹಳ್ಳಿ ಎಂಬ ಮಾಜಿ ಶಿರಹಿಡುಕನು ಕಮಲ ಪಕ್ಷದ ಜೊತೆಗೆ ಮಂಗ ಮಯವಾಗಿ ಹೋಗಿದ್ದನು.
ಎಲೆಕ್ಷನ್ನಲ್ಲಿ ಸೆಗಣಿ ಪಾಲಾಗಿದ್ದ ಇವನ ಗೆಣೆಕಾರ ಸಪೋರ್ಟರ್’ಗಳು, ಯಾವ ಟೈಮಲ್ಲಿ ಬೇಕಾದರೂ ಕಾಲೆತ್ತಿಕೊಂಡು ಬಿಡಬಹುದಾದಷ್ಟು ಪುಟಗೋಸಿ ಓಟು ಪಡೆದು ಕೇಂದ್ರದಲ್ಲಿ ಅಧಿಕಾರ ಹಿಡಿದ ಈತನ ಪಿತಾಮಹ, ಇವನಂತದೇ ಹರಾಮಿ ಚರಿತ್ರೆ ಇರುವ ಚಂಗ್ಲುಗಳನ್ನೆಲ್ಲ ಅಟ್ಟಾಡಿಸಿ ಜೈಲಿಗೆ ತುಂಬುತ್ತಿರುವ ಪೊಲೀಸರು, ಫೋನ್ ಪೇ ಭಿಕ್ಷೆಗೆ ಕಾಸು ಹಾಕದ ಮಾನಸಿಕ ಕಾಯಿಲೆಯ ಸಂಘಿಗಳು, ಎಲ್ಲವನ್ನು ಯೋಚಿಸುತ್ತಾ ಕೊನೆಗೆ ಈ ಕಂಜೂಸ್ ಸಂಘಿಗಳನ್ನು ನೆಚ್ಚಿಕೊಂಡು ಎರಡು ಇಡ್ಲಿ ತಿನ್ನಲು ಕಾಸಿಲ್ಲದಂತಾಯಿತಲ್ಲ ಎಂದು ಚಿಂತೆಯಲ್ಲಿದ್ದ ಪುಂಗಿಷ್ ಕೆರೆ ಹಳ್ಳಿಗೆ ಪಟ್ಟನೆ ಒಂದು ಪ್ಲಾನ್ ಹೊಳೆಯಿತು. ಗೋಮಾತೆ ಕಾಪಾಡುತ್ತೇನೆಂದು ಹೋಗಿ ದನ ಸಾಗಿಸುತ್ತಿದ್ದ ವ್ಯಕ್ತಿ ಒಬ್ಬನ ಕೊ*ಲೆ ಕೇಸಲ್ಲಿ ತಗಲು ಹಾಕಿಕೊಂಡು ಪೊಲೀಸರಿಂದ ಕಾಲಿನ ನರ ಕಟ್ ಮಾಡಿಸಿಕೊಂಡ ಮೇಲೆ ನೆಟ್ಟಗೆ ನಡೆಯಲು ಆಗುತ್ತಿಲ್ಲ , ನಾನೇಕೆ ಗೋಮಾತೆಯ ಬದಲು ಮೇಕೆಗಳನ್ನು ರಕ್ಷಿಸಬಾರದು ಅಂತನ್ನಿಸಿತು.
ತಕ್ಷಣವೇ ತನ್ನ ಕೊಳೆತ ಹಲಸಿನಕಾಯಿಯಂಥ ವಾಸನೆ ಮುಖವನ್ನು ಸುಲಭ್ ಶೌಚಾಲಯದಲ್ಲಿ ಎರಡು ರೂಪಾಯಿ ಕೊಟ್ಟು ತೊಳೆದುಕೊಂಡು, ಸೀದ ಮೆಜೆಸ್ಟಿಕ್ ರೈಲ್ವೆ ಸ್ಟೇಷನ್ ಗೆ ಸೀಟ್ ಆಟೋ ಹತ್ತಿ ಕೊಂಡು ಬಂದನು. ರಾಜಸ್ಥಾನದಿಂದ ಬೆಂಗಳೂರಿಗೆ ಮೇಕೆ ಮಾಂಸ ಬರುವುದನ್ನು ಹೇಗೋ ತಿಳಿದಿದ್ದ ಪುಂಗಿಷ್ ಕೆರೆಹಳ್ಳಿಯು ಮೇಕೆ ಮಾಂಸ ತರುತ್ತಿದ್ದ ರೈಲು ಬಂದ ಕೂಡಲೇ, ಬೋಗಿಯೊಳಗೆ ಥಣ್ ಎಂದು ನೆಗೆದು ಇದು ನಾಯಿ ಮಾಂಸ ಇದು ನಾಯಿ ಮಾಂಸ ಎಂದು ತಲಾಂಗು ತದಿಗಿಡತೊಮ್ ನೃತ್ಯ ಆರಂಭಿಸಿದನು.
ಎಲ್ಲಾ ಟಿವಿ ಚಾನಲ್’ಗಳಿಗೂ ಫೋನ್ ಹೊಡೆದು ‘ ಹಲ್ಲುಉಜ್ತಾ, ಇದ್ರೆ ಹಂಗೆ ಓಡ್ ಬನ್ನಿ, ಸ್ನಾನ ಮಾಡುತ್ತಿದ್ದರೆ ಜಗ್ ಸಮೇತ ಓಡಿ ಬನ್ನಿ, ತಿಂಡಿ ತಿಂತಾ ಇದ್ರೆ ಬಿಟ್ಟು ಎದ್ದು ಓಡಿಬನ್ನಿ, ಇಲ್ಲಿ ನಾಯಿ ಮಾಂಸ ಇದೆ, ಇಲ್ಲಿ ನಾಯಿ ಮಾಂಸ ಇದೆ ‘ ಎಂದು ಅರಚಾಡಿಬಿಟ್ಟನು.
ಇವನು ಯಾಕೆ ಬೆಳ್ ಬೆಳಿಗ್ಗೆ ನಾಯಿ ಮಾಂಸ ತಿನ್ನಲು ನಮ್ಮನ್ನು ಕರೆಯುತ್ತಿದ್ದಾನೆ ಎಂದು ಗಾಬರಿ ಬಿದ್ದ ಟಿವಿ ಮಾಧ್ಯಮಗಳು, ಯಾವುದಕ್ಕೂ ಇರಲಿ ಎಂದು ಒಂದು ತಟ್ಟೆ ಒಂದು ಸ್ಪೂನ್ ಸಮೇತ ರೈಲ್ವೆ ಸ್ಟೇಷನ್ ಗೆ ಓಡೋಡಿ ಬಂದುಬಿಟ್ಟರು. ಅಲ್ಲಿ ನೋಡಿದರೆ ಇಂಗ್ಲಿಷ್ ಕೆರೆಯಲ್ಲಿ ಒಂದು ನಾಯಿ ಬಾಲದ ತರದ ಐಟಂ ಒಂದನ್ನು ಹಿಡಿದುಕೊಂಡು ನೋಡಿ ನಾಯಿ ಬಾಲ, ನೋಡಿ ನಾಯಿ ಬಾಲ ಎಂದು ಕ್ಯಾಮೆರಾ ಮೆನ್ಗಳ ಬಾಯಿ ಹತ್ತಿರವೇ ಆ ಹಸಿ ಬಾಲವನ್ನು ತಂದು ಕುಣಿದಾಡತೊಡಗಿದನು.
ರಾಜಸ್ಥಾನಿ ಬ್ರೀಡ್’ನ ಕುರಿಗಳು ನಾಯಿಗಳ ತರದ್ದೇ ಬಾಲವನ್ನು ಹೊಂದಿರುತ್ತವೆ ಎಂಬ ಬೇಸಿಕ್ ಸೆನ್ಸ್ ಸಹ ಗೊತ್ತಿರದ ಟಿವಿ ಮಾಧ್ಯಮಗಳ ಆತುರಗೇಡಿ ಆಂಕರ್ ಗಳು ‘ಅದ್ಯಾರೋ ರಜಾಕ್ ಎಂಬ ಸಾಬಿಯು ಬೆಂಗಳೂರಿನ ಜನರಿಗೆ ಮೇಕೆ ಮಾಂಸ ಎಂದು ನಾಯಿ ಮಾಂಸ ತಿನ್ನಿಸುತ್ತಿದ್ದಾನೆ’ ಎಂದು ತಮ್ಮ ಹರಿದು ಹೋದ ನಾಲಿಗೆಯನ್ನು ಹೊಕ್ಕಳ ತನಕ ಇಳಿಬಿಟ್ಟು ಲೈವ್ ನಲ್ಲಿ ಲಬೋ ಲಬೋ ಎಂದು ಶುರು ಇಟ್ಟುಕೊಂಡರು.
ಆಗಷ್ಟೇ ಟಿಫಿನ್ ಮಾಡಲೆಂದು ತಿಂಡಿಯ ಬಾಕ್ಸ್ ತೆರೆದು ಮಟನ್ ಚಾಪ್ಸ್ ಪೀಸ್ ಅನ್ನು ಬಾಯಿಗೆ ಇಟ್ಟುಕೊಂಡಿದ್ದ ರೈಲ್ವೆ ಸ್ಟೇಷನ್ ವ್ಯಾಪ್ತಿಯ ಪೊಲೀಸರು ‘ ಹಾಳಾದ್ ನನ್ ಮಕ್ಕಳು ಬ್ರೇಕ್ ಫಾಸ್ಟಿಗೂ ಬೆಂಕಿ ಇಟ್ಟರು’ ಎಂದು ಬಾಕ್ಸ್ ಬಿಸಾಕಿ ದಡ ಬುಡನೆ ಎದ್ದು ರೈಲ್ವೆ ಸ್ಟೇಷನ್ ಗೆ ಬಂದು ಇಳಿದರು. ಅಲ್ಲಿ ನೋಡಿದರೆ ಪುಂಗಿಷ್ ಕೆರೆಹಳ್ಳಿ ಮತ್ತು ಟಿವಿಯವರು ರಾಜಸ್ಥಾನಿ ಬ್ರೀಡ್ ಕುರಿಯ ಬಾಲಗಳನ್ನು ಹಿಡಿದುಕೊಂಡು ರೈಲ್ವೆ ಸ್ಟೇಷನ್ ತುಂಬೆಲ್ಲ ಭರತ ನಾಟ್ಯವಾಡುತ್ತಿದ್ದರು.
ರಾಜಸ್ಥಾನದಿಂದ ನಾಯಿ ಬಲದ ತರದ ಕುರಿ ಮಾಂಸ ತರಿಸಿದ್ದ ವ್ಯಾಪಾರಿ ಇರುವ ಸತ್ಯವನ್ನು ಹೇಳಿದ ಮೇಲೆ, ಪಿತ್ತ ನೆತ್ತಿಗೇರಿದ ಪೊಲೀಸರು ಪುಂಗಿಷ್ ಕೆರೆಹಳ್ಳಿಯ ಎರಡು ಕಾಲುಗಳನ್ನು ಹಿಡಿದು ದರ ದರ ದರ ದರನೇ ಎಳೆದು ಕಾರಿಗೆ ತುಂಬಿಕೊಂಡು ಸ್ಟೇಷನ್ನಿಗೆ ತಂದು ಲಾಕಪ್ ಒಳಗೆ ತಲೆಕೆಳಗಾಗಿ ಬೀಳುವಂತೆ ಎಗರಿಸಿ ಒದ್ದರು.
ಆತುರಗೇಡಿ TV ಆಂಕರ್’ಗಳ ಅರಚಾಟ ಕೇಳಿ ಏನೋ ಆಗಬಾರದು ಆಗಿದೆ ಎಂದು ಗಾಬರಿ ಬಿದ್ದ ಪೊಲೀಸ್ ಎಸಿಪಿ ಚಂದ್ರನ್ ಪುಂಗಿಷ್ ಕೆರೆ ಹಳ್ಳಿಯನ್ನು ಒದ್ದು ಕೆಡವಲಾಗಿದ್ದ ಸ್ಟೇಷನ್ನಿಗೆ ಬಂದರು. ಮೈಬಗ್ಗಿಸಿ ದುಡಿಯಲು ಒಪ್ಪದೇ ಸಮಾಜಕ್ಕೆ ಬೆಂಕಿ ಹಚ್ಚಿಕೊಂಡು ತಿರುಗುವ ಅಪಾಪೋಲಿಗಳಿಗೆ ಏನು ಮಾಡುತ್ತಾರೋ, ಅದೇ ಟ್ರೀಟ್ಮೆಂಟ್ ಅನ್ನು ಪುಂಗಿಷ್ ಕೆರೆಹಳ್ಳಿಗೂ ಕೊಟ್ಟರು. ಪೊಲೀಸರು ಮನಸೋ ಇಚ್ಛೆ ಹಿಡಿದು ಬಡಿಯುತ್ತಿದ್ದಾಗ ಕೆರೆಹಳ್ಳಿಗೆ ತಾನು ಲೈಸೆನ್ಸ್ ಪಡೆದು ದನ ಸಾಗಿಸುವವರನ್ನೂ ಹೀಗೆ ಬಡಿಯುತ್ತಿದ್ದೆನಲ್ಲ ಎಂಬುದು ನೆನಪಾಯಿತು. ಹೀಗೆ ಬಿಟ್ಟರೆ, ಆಲ್ರೆಡಿ ಶಿರಹಿಡುಕ ಕೇಸಿನಲ್ಲಿ ಪೊಲೀಸರಿಂದ ನರ ಕಟ್ ಮಾಡಿಸಿಕೊಂಡು ಒಂದು ಕಾಲು ಲ್ಯಾಪ್ಸ್ ಆಗಿದೆ, ಹಿಂಗೆ ಒದೆ ತಿಂದರೆ ಇನ್ನೊಂದು ಕಾಲು ಲ್ಯಾಪ್ಸ್ ಆಗಿ ಕಮಲ ಪಕ್ಷದ ಹೆಡ್ ಆಫೀಸ್ ಎದುರು ಪರ್ಮನೆಂಟಾಗಿ ತಿರುಪೆ ಎತ್ತಬೇಕಾಗುತ್ತದೆ ಎಂಬುದನ್ನು ನೆನೆದು ಅಳು ಬರುವಂತಾಯಿತು. ಹಲ್ಲು ಕಚ್ಚಿ, ಮುಷ್ಟಿ ಹಿಡಿದು, ಧೀ ಸಂಕಲ್ಪವನ್ನು ಮಾಡಿ, ಅಯ್ಯಯ್ಯೋ ನನ್ನ ಎದೆಯೊಳಗೆ ಹೊಟ್ಟೆನೋವು ಶುರುವಾಗಿದೆ ಎಂದು ಚೀರಾಡುತ್ತಾ ಲಾಕಪ್ಪನಿಗೆ ಇಲ್ಲಿಂದ ಅಲ್ಲಿಗೆ ಅಲ್ಲಿಂದ ಇಲ್ಲಿಗೆ ಪಲ್ಟಿ ಹೊಡೆಯಲಾರಂಭಿಸಿದನು.
ಪೊಲೀಸರು ಮತ್ತೊಮ್ಮೆ ಅವನ ಕಾಲಿಡಿದು ದರದರನೇ ಆಸ್ಪತ್ರೆಗೆ ಎಳೆದೊಯ್ದು, ‘ಇವನಿಗೆ ಎದೆ ಒಳಗೆ ಹೊಟ್ಟೆ ನೋಯ್ತಾ ಇದೆಯಂತೆ, ಸ್ವಲ್ಪ ಪೋಸ್ಟ್ ಮೊರ್ಟೆಮ್ ಮಾಡಿ ಚೆಕ್ ಮಾಡಿ’ ಎಂದು ಡಾಕ್ಟರನ್ನು ವಿನಂತಿಸಿದರು. ಪೋಸ್ಟ್ ಮಾರ್ಟಂ ಮಾಡ್ತಾರಂತೆ ಅನ್ನುವ ಸುದ್ದಿ ತಿಳಿದದ್ದೇ ತಡ ತನ್ನ ನರ ಕಟ್ಟಾದ ಕಾಲಿನಲ್ಲಿ ಟಂಗನೆ ಎದ್ದು ಕುಳಿತ ಪುಂಗಿಷ್ ಕೆರೆಹಳ್ಳಿ ‘ ಐ ಯಾಮ್ ಪರ್ಫೆಕ್ಟ್ಲಿ ಆಲ್ ರೈಟ್ ನೌ, ಲೆಟ್ಸ್ ಗೋ ಬ್ಯಾಕ್ ಟು ಪೊಲೀಸ್ ಸ್ಟೇಷನ್’ ಎಂದು ಪೊಲೀಸರ ಕಾಲಿಗೆ ಅಂಗಾತ ಬಿದ್ದುಬಿಟ್ಟನು. ಮತ್ತೆ ಅವನ ಕಾಲು ಹಿಡಿದು ದರದರನೇ ಪೋಲಿಸ್ ಸ್ಟೇಷನ್ ಗೆ ಎಳೆದುಕೊಂಡು ಬಂದ ಪೊಲೀಸರು ಪೌರಕಾರ್ಮಿಕರು ಬೆಳಿಗ್ಗೆ ಹೊತ್ತು ಲಾರಿ ಒಳಗೆ, ಹಸಿಕಸ, ಒಣಕಸದ ಕವರ್ ಎಸೆಯುವಂತೆ ಲಾಕಪ್ ಒಳಗೆ ಕಸದಂತೆ ಎತ್ತಿ ಬಿಸಾಡಿದರು. ಪುಂಗಿಷ್ ಕೆರೆಹಳ್ಳಿಯು ಪೋಸ್ಟ್ ಮಾರ್ಟಂ ಆಗುವುದರಿಂದ ಕೂದಲೆಳೆಯಲ್ಲಿ ಬಚಾವಾಗಿಬಿಟ್ಟೆ ಎಂದು ಲಾಕಪ್ ಒಳಗೆ ಅಂಗಾತ ಮಲಗಿಬಿಟ್ಟನು.
ಇದೊಂದು ಕಡೆ ನಡೆಯುತ್ತಿರುವಾಗ, ಇನ್ನೊಂದು ಕಡೆಯಲ್ಲಿ ತನ್ನದೇ ಕಮಲ ಪಕ್ಷದವರಿಂದ ಗಂಟಲಿಗೆ ಗಡಾರಿ ಹೆಟ್ಟಿಸಿಕೊಂಡು ಎಲೆಕ್ಷನ್ನಿಗೆ ಟಿಕೆಟ್ ಸಹ ಇಲ್ಲದೆ ಚರಂಡಿಪಾಲಾದ ದುಃಖದಲ್ಲಿ ಪುಟ್ಟಗೌರಿ ಸೀರಿಯಲ್ ನಾಯಕಿಯಂತೆ ಮುಳಮುಳನೆ ಅಳುತ್ತಾ ‘ ಮಾನವ ಮೂಳೆ ಮಾಂಸದ ತಡಿಕೆ, ಅದಕ್ಕೆ ಬಿದ್ದೆ ದೊಡ್ಡಮೋರಿ ಒಳಿಕೆ’ ಎಂದು ವಿಲಾಪಿಸುತ್ತಾ ಕುಳಿತಿದ್ದ ಪ್ರತಾಪ ತಿಮ್ಮನು ಆತುರಗೇಡಿ ಆಂಕರ್ ಗಳ ಹಾರಾಟ ಚೀರಾಟವನ್ನು ಟಿವಿಯಲ್ಲಿ ಕಂಡು, ಎಲ ಎಲ, ಬೋರ್ಡಿಗೆ ಇಲ್ಲದಂತೆ ವಾಶೌಟ್ ಆಗಿರುವ ನನಗೆ ಲೈಮ್ ಲೈಟಿಗೆ ಬರಲು ಪುಂಗೀಶ್ ಕೆರೆಹಳ್ಳಿಯ ಈ ಕೇಸ್ ಅನ್ನು ದೇವರೇ ನನಗೆ ಕೊಟ್ಟಿದ್ದಾನೆ’ ಎಂದು ಫೋನ್ ತೆಗೆದು ಬೆಂಗಳೂರು ಎಸಿಪಿ ಚಂದ್ರನ್ ಅವರಿಗೆ ‘ ನನ್ನ ಪೊಜಿಶನ್ ಪ್ರಿಯಕರ ಕೆರೆಹಳ್ಳಿಗೆ ಸ್ಟೇಷನಲ್ಲಿ ಬೆತ್ತಲು ಮಾಡಿ ಜುಂಬಾ ಡ್ಯಾನ್ಸ್ ಮಾಡಿಸಿದ್ದೀರಿ. ಫೋಟೋ ವಿಡಿಯೋ ಕೂಡ ತೆಗೆದಿದ್ದೀರಿ, ಬೇಜಾರಾದಾಗ ನೋಡಿಕೊಳ್ಳಲು ನನಗೆ ಅವೆರಡು ಬೇಕು, ಬರ್ತಾ ಇದೀನಿ ಅವನ್ನು ರೆಡಿ ಇಟ್ಟುಕೊಳ್ಳಿ’ ಎಂದು ಚಾಲೆಂಜ್ ಟ್ವೀಟ್ ಮಾಡಿದನು.
ಟ್ವೀಟ್ ಓದಿದ ಎಸಿಪಿ ಚಂದ್ರನ್ ‘ ಚಾಲೆಂಜ್ ಮಾಡಿದ ಸ್ಟಾರ್ ಅನ್ನೇ ಬಿಟ್ಟಿಲ್ಲ, ಇವನ್ಯಾವ ಪುಟಗೋಸಿ, ಲಾಠಿಗಳಿಗೆ ಎಮ್ ಟಿ ಆರ್ ಮಸಾಲೆ ಪುಡಿ ಹಚ್ಚಿ ರೆಡಿ ಇಟ್ಟುಕೊಳ್ಳಿ ಎಂದು ತಮ್ಮ ಪೊಲೀಸ್ ಸಿಬ್ಬಂದಿಗೆ ಹೇಳಿದರು. ರಾಜಕೀಯದಲ್ಲಿ ಸರ್ವನಾಶವಾದ ದುಃಖದಲ್ಲಿ ಸಾಯಿಬಾಬನಂತೆ ಕೂದಲು ಬಿಟ್ಟುಕೊಂಡು ಅದಕ್ಕೊಂದು ಹೇರ್ ಕ್ಲಿಪ್ ಸಿಗಿಸಿಕೊಂಡು ಥೇಟ್ ಟಾರ್ಜನ್ ನಂತೆ ಇದ್ದ ಪ್ರತಾಪ ತಿಮ್ಮ. ತಾನೇ ಎದೆ ತಟ್ಟಿಕೊಂಡು ನಾನು ಮಾಡ್ದೆ, ನಾನು ಮಾಡ್ದೆ ಎಂದು ಪುಂಗುತ್ತಿದ್ದ ಮೈಸೂರು ಹೈವೇನಲ್ಲಿ ಎರಡು ಕಡೆ ಒಂದಕ್ಕೆರಡು ಡಬಲ್ ಟೋಲ್ ದುಡ್ಡು ಕೊಟ್ಟು ಬರೆ ಹಾಕಿಸಿಕೊಂಡು ಬೆಂಗಳೂರು ತಲುಪಿದನು. ಎಸಿಪಿ ಚಂದ್ರನ್ ತಂಡ ಪ್ರತಾಪನಿಗೆ ಮತಾಪಿನ ರುಚಿ ತೋರಿಸಲು ಎಂಟಿಆರ್ ಮಸಾಲೆ ಪುಡಿ ಹಚ್ಚಿದ ಲಾಟಿ ಹಿಡಿದು ಚಂದ್ರನ್ ಆಫೀಸ್ ಒಳಗೆ ಕಾಯುತ್ತಿದ್ದರು. ಅಷ್ಟರಲ್ಲಿ ಹೇಗೋ ಮಾಡಿ ಬೇಲ್ ಪಡೆದು ಸ್ಟೇಷನ್ ನಿಂದ ಹೊರ ಬಂದಿದ್ದ ಪುಂಗಿಷ್ ಕೆರೆಹಳ್ಳಿಯು ಪ್ರತಾಪನನ್ನು ನೋಡಿ ಎರಡು ಕಾಲಲ್ಲಿ ಕುಂಟುತ್ತ ಓಡಿ ಬಂದು, ಅಣ್ಣ ಹೋಗಬೇಡಣ್ಣ, ಎಸಿಪಿ ಚಂದ್ರನ್ ಸರಿ ಇಲ್ಲ ಅಣ್ಣ, ಎದೆ ನೋವು ಅಂದ್ರೆ ಪೋಸ್ಟ್ ಮಾರ್ಟಮ್ ಮಾಡಿಸ್ತೀನಿ ಅಂತ ಹೇಳ್ತಾರಣ್ಣ, ಎಲೆಕ್ಷನ್ ನಲ್ಲಿ ನೆಲಕಚ್ಚಿ ಅರ್ಧಜೀವ ಹೋಗಿದೆ, ಪೊಲೀಸರ ತಂಟೆಗೆ ಹೋದರೆ ಪೂರ್ತಿ ತೆಗೆದು ಬಿಡ್ತಾರೆ.. ಇಲ್ಲೇ ನಮ್ಮ ಆತರಗೇಡಿ ಟಿವಿ ಚಾನೆಲ್ ಗಳ ಮುಂದೆ ತೊಡೆ ತಟ್ಟಿ ಎರಡು ಡೈಲಾಗ್ ಹೊಡೆದು ಮನೆಗೆ ಹೋಗಿ ಮಲ್ಕೊಂಬಿಡೋಣ, ಎಂದು ಎಚ್ಚರಿಸಿದನು.
ಪ್ರತಾಪನಿಗೂ ಈ ಪ್ಲಾನ್ ಅದ್ಬುತವಾಗಿದೆ ಎಂದು ಅನಿಸಿ ಟಿವಿ ಚಾನೆಲ್ಗಳ ಮುಂದೆ ಕುಯ್ಯೋ ಮರೋ ಎಂದು ನಾಲ್ಕು ಡೈಲಾಗ್ ಹೊಡೆದು, ಎಲ್ಲಾ ಬಿಟ್ಟು ಈ ಶಿರಹಿಡುಕನಿಗೆ ಸಪೋರ್ಟ್ ಮಾಡುವಂತ ದುರ್ಗತಿ ಬಂತಲ್ಲ ನನಗೆ ಎಂದು ಅಳುತ್ತಾ ಕಣ್ಣು ಒರೆಸಿಕೊಂಡು, ವಾಪಸ್ ಮೈಸೂರಿಗೆ ಹೋಗಲು ಇನ್ನೂ ಎರಡು ಟೋಲ್ ಗಳಿಗೆ ಒಂದಕ್ಕೆರಡು ದುಡ್ಡು ಕಟ್ಟಿ ಬರೆ ಹಾಕಿಸಿಕೊಳ್ಳಬೇಕಲ್ಲ ಎಂಬುದನ್ನು ನೆನೆದು ಬೆಚ್ಚಿ ಹಣೆ ಚುಚ್ಚಿಕೊಂಡು ಮೈಸೂರಿನ ಕಡೆಗೆ ಕಾರು ತಿರುಗಿಸಿದನು. ಇಲ್ಲಿಗೆ ಪುಂಗಿಶ್ ಕೆರೆಹಳ್ಳಿಯ ನಾಯಿ ಮಾಂಸದ ಅಡ್ವೆಂಚರ್ ಬಕ್ಕಾ ಬೋರಲು ಬಿದ್ದು ಕಾಲೆತ್ತಿಕೊಂಡಿತು.
- ಮಂಜು ಚಿಂತಾಮಣಿ