ಐರೋಪ್ಯ ಬಾಹ್ಯಾಕಾಶ ಸಂಸ್ಥೆಯ ಪ್ರೊಬಾ-3 ಉಡ್ಡಯನ

Most read

ಶ್ರೀಹರಿಕೋಟಾ: ಪ್ರೋಬಾ-3 ಯೋಜನೆಯ ಬಾಹ್ಯಾಕಾಶ ನೌಕೆಗಳನ್ನು ಹೊತ್ತ ಇಸ್ರೊದ ಪಿಎಸ್‌ ಎಲ್‌ ವಿ ರಾಕೆಟ್‌ ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರದಿಂದ ಇಂದು ಗಗನಕ್ಕೆ ಚಿಮ್ಮಿದೆ. ಇದು ಇಸ್ರೊದ ವಾಣಿಜ್ಯ ಕಾರ್ಯಾಚರಣೆಯ ಐರೋಪ್ಯ ಬಾಹ್ಯಾಕಾಶ ಸಂಸ್ಥೆಯ ಭಾಗವಾಗಿದೆ. ಈ ಸಂಬಂಧ ಇಸ್ರೊ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದು, ಪಿಎಸ್‌ ಎಲ್‌ ವಿಸಿ-59 ರಾಕೆಟ್‌ ನಭಕ್ಕೆ ಯಶಸ್ವಿಯಾಗಿ ಚಿಮ್ಮಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಯ ಜತೆ ಕೈ ಜೋಡಿಸಿರುವುದಕ್ಕೆ ಹೆಮ್ಮೆಯ ವಿಷಯ ಎಂದು ಇಸ್ರೊ ತಿಳಿಸಿದೆ.

ವಿಶ್ವದ ಮೊದಲ ಉಪಕ್ರಮ ಎಂದು ಹೆಸರಿಸಲಾದ ಪ್ರೋಬಾ-3 ಮಿಷನ್‌ ನಲ್ಲಿ ಕರೋನಾಗ್ರಾಫ್ (‌310 ಕೆಜಿ) ಮತ್ತು ಅಲಕ್ಟನ್‌ (240 ಕೆಜಿ)  ಎಂಬ ಎರಡು ಬಾಹ್ಯಾಕಾಶ ನೌಕೆಗಳನ್ನು ಒಟ್ಟಿಗೆ ಉಡಾವಣೆ ಮಾಡಲಾಗುತ್ತಿದೆ. ಇವು ಆರಂಭಿಕ ಕಕ್ಷೆಯನ್ನು ತಲುಪಿದ ನಂತರ  ಎರಡೂ ಉಪಗ್ರಹಗಳು 150 ಮೀಟರ್‌ ಅಂತರದಲ್ಲಿ ಒಟ್ಟಿಗೆ ಹಾರುತ್ತವೆ.

ಪ್ರಯೋಜ ನ ಏನು?

ಈ ಉಪಗ್ರಹಗಳ ಸಹಾಯದಿಂದ ಕೃತಕ ಸೂರ್ಯಗ್ರಹಣ ಸೃಷ್ಟಿಸಿ ಸೂರ್ಯನ ಕರೋನಾ ಅಧ್ಯಯನ ಮಾಡಲು ಬಾಹ್ಯಕಾಶ ವಿಜ್ಞಾನಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಬಾಹ್ಯಾಕಾಶ ನೌಕೆಗಳ ನಿಖರ ಚಲನೆ ಮತ್ತು ಸೂರ್ಯನ ಹೊರಗಿನ ವಾತಾವರಣ ಅಧ್ಯಯನ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ಇಸ್ರೊ ಹೇಳಿದೆ.

More articles

Latest article