ಬೆಂಗಳೂರು: ಬೆಂಗಳೂರಿನ ಹಲವು ಕ್ಷೇತ್ರಗಳು ಬೇರೆ ಕ್ಷೇತ್ರಗಳಲ್ಲಿ ಹಂಚಿಕೆಯಾಗಿದೆ. ಇದರಿಂದ ಕೆಲ ಕ್ಷೇತ್ರಗಳು ನಿರ್ಲಕ್ಷ್ಯಕ್ಕೆ ಒಳಗಾಗಿ ಅಭಿವೃದ್ಧಿ ಕುಂಟಿತವಾಗುವ ಸಾಧ್ಯತೆ ಇದೆ. ಹೀಗಾಗಿ ಟೀಂ ಬೆಂಗಳೂರು ಮಾಡುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸುವುದು ನನ್ನ ಪ್ರಣಾಳಿಕೆ ಅಂದುಕೊಳ್ಳಿ. ಇದರಿಂದ ಮುಂದೆ ಬೆಂಗಳೂರಿನಲ್ಲಿ ತ್ರಿಬಲ್ ಇಂಜಿನ್ ಸರ್ಕಾರ ಬರಲಿದೆ ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರೊ.ರಾಜೀವ್ ಗೌಡ ಹೇಳಿದರು.
ಅವರು, ಪ್ರಚಾರ ಸಭೆಯನ್ನು ಉದ್ದೇಶಸಿ ಮಾತನಾಡಿ, ಬೆಂಗಳೂರಿನಲ್ಲಿ ಜನ ನಾನಾ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅದೆಲ್ಲವನ್ನೂ ಲಿಸ್ಟ್ ಮಾಡಿಕೊಂಡು ಸರಿಪಡಿಸಲು ಏನೇನು ಕ್ರಮ ಎನ್ನುವ ಕುರಿತು ಪ್ರಣಾಳಿಕೆ ರೂಪದಲ್ಲಿ ಇಟ್ಟಿದ್ದೇನೆ. ಬೆಂಗಳೂರು ಅಭಿವೃದ್ಧಿ ನನ್ನ ಕನಸು ಎಂದರು.
ಉದ್ಯೋಗಕ್ಕಾಗಿ ಹೋದರೆ ಕೆಲಸದ ಅನುಭವ ಕೇಳುತ್ತಾರೆ. ಅದನ್ನ ನಾವು ತರಬೇತಿ ಮೂಲಕ ಕೊಡುತ್ತೇವೆ. ಲಕ್ಷ ಕಾಲೇಜು ವಿದ್ಯಾರ್ಥಿಗಳಿಗೆ ಖಾಸಗಿ, ಸರ್ಕಾರಿ ಸಂಸ್ಥೆಗಳಲ್ಲಿ ಕೊಡ್ತೇವೆ. ಇದರ ಮೂಲಕ ನಗರ ಉದ್ಯೋಗ ಗ್ಯಾರೆಂಟಿ ಕೊಡುತ್ತೇವೆ. ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿಗೆ ವಿಶೇಷ ಅನುದಾನಕ್ಕೆ ಒತ್ತಾಯ ಮಾಡುತ್ತೇವೆ. ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಇದೆ. ೪೦ ವರ್ಷಗಳಲ್ಲಿ ಇಂತಹ ಪರಿಸ್ಥಿತಿ ಬಂದಿರಲಿಲ್ಲ. ಕೆರೆ, ಕಾಲುವೆಗಳ ಪುನರುಜ್ಜೀವನ ಆಗಬೇಕು. ಟ್ಯಾಂಕರ್ ಮಾಫಿಯಾ ತಡೆಯಬೇಕಿದೆ. ಕೆರೆಗಳನ್ನ ನಾವು ಕಾಪಾಡಬೇಕಿದೆ. ಮಳೆ ನೀರು ಸಂಗ್ರಹ ಅಭಿಯಾನ ಶುರುಮಾಡಬೇಕು. ಮಳೆನೀರು ಕೊಯ್ಲು ಪ್ರಾರಂಭಮಾಡಬೇಕು. ಗ್ರೌಂಡ್ ವಾಟರ್ ರೀಚಾರ್ಜ್ ಮಾಡಬೇಕು ಎಂದು ಪ್ರೊ.ರಾಜೀವ್ ಗೌಡ ಬೆಂಗಳೂರಿನ ಸಮಸ್ಯೆಯನ್ನು ನೋಟ್ ಮಾಡಿ ತಿಳಿಸಿದ್ದಾರೆ.