ನವದೆಹಲಿ: ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸಿದ ಆರೋಪದಡಿಯಲ್ಲಿ ಹರಿಯಾಣ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಅವರು ಮತ್ತೊಂದು ದೇಶದ್ರೋಹಿ ಕರಾಳಮುಖ ಬಯಲಾಗಿದೆ.
ಪಹಲ್ಗಾಮ್ ದುರಂತ್ಕಕೂ ಮುನ್ನ ಲಾಹೋರ್‌ಗೆ ಹೋಗಿದ್ದಾಗ ಜ್ಯೋತಿ ಅಲ್ಲಿನ ಅನಾರ್ಕಲಿ ಬಜಾರ್ ಗೆ ಹೋಗಿದ್ದಾಗ ಅವರಿಗೆ ಆರು ಮಂದಿ ಎ.ಕೆ 47 ರೈಫಲ್ ಹಿಡಿದುಕೊಂಡು ಬೆಂಗಾವಲಾಗಿದ್ದ ಮಾಹಿತಿ ಬಹಿರಂವಾಗಿದೆ. ಈ ವಿಡಿಯೊ ಇದೀಗ ಬಯಲಿಗೆ ಬಂದಿದ್ದು ಸ್ಕಾಟಿಶ್ ಯೂಟ್ಯೂಬರ್ ಕಲಮ್ ಮಿಲ್ ಎನ್ನುವರು ವಿಡಿಯೊ ಹಂಚಿಕೊಂಡಿದ್ದಾರೆ.
ಸ್ಕಾಟ್ ಲ್ಯಾಂಡ್‌ನಿಂದ ಬಂದಿದ್ದ ಕಲಮ್ ಮಿಲ್ ಅವರಿಗೆ ಅಂದು ಅನಾರ್ಕಲಿ ಬಜಾರ್‌ನಲ್ಲಿ ಜ್ಯೋತಿ ಮಲ್ಹೋತ್ರಾ ಎದುರುಬದರಾಗಿದ್ದರು. ಆಗ ಇಬ್ಬರೂ ಚರ್ಚೆಯಲ್ಲಿ ತೊಡಗಿದ್ದರು. ಆದರೆ ಜ್ಯೋತಿ ಸುತ್ತ ಎ.ಕೆ. 47 ರೈಫಲ್ ಹಿಡಿದುಕೊಂಡು ಆರು ಜನ ಬೆಂಗಾವಲಾಗೆ ಇದ್ದದ್ದು ಕಂಡು ಬಂದಿದೆ. ಈ ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.
ಎ.ಕೆ 47 ರೈಫಲ್ ಹಿಡಿದಿದ್ದವರು ಸಿವಿಲ್ ಡ್ರೆಸ್ ನಲ್ಲಿದ್ದ ಪಾಕಿಸ್ತಾನದ ಯೋಧರು ಎಂದೂ ಹೇಳಲಾಗುತ್ತಿದೆ. ಪಾಕಿಸ್ತಾನದ ಪರ ಜ್ಯೋತಿ ಮಲ್ಹೋತ್ರಾ ಬೇಹುಗಾರಿಕೆ ಮಾಡುತ್ತಿರುವ ವಿಷಯ ಪಹಲ್ಗಾಮ್ ದಾಳಿಯ ನಂತರ ಬಹಿರಂಗವಾಗಿತ್ತು. ಇದಕ್ಕೆ ಜ್ಯೋತಿ ಮಲ್ಹೋತ್ರಾಳ ಒಂದೊಂದು ವಿಡಿಯೋ ಸಹ ಪುರಾವೆ ಒದಗಿಸಿತ್ತು.
ಪ್ರಸ್ತುತ ಜ್ಯೋತಿ ಮಲ್ಹೋತ್ರಾ ಪೊಲೀಸ್ ಕಸ್ಟಡಿಯಲ್ಲಿದ್ದು ವಿಚಾರಣೆ ಎದುರಿಸುತ್ತಿದ್ದಾರೆ. ಪಾಕ್ ಪರ ಬೇಹುಗಾರಿಕೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಕಳೆದ 15 ದಿನಗಳಲ್ಲಿ ಜ್ಯೋತಿ ಸೇರಿದಂತೆ ಪಂಜಾಬ್, ಉತ್ತರ ಪ್ರದೇಶ ಮತ್ತು ಹರಿಯಾಣದಲ್ಲಿ ಒಟ್ಟು 12 ಆರೋಪಿಗಳನ್ನು ಬಂಧಿಸಲಾಗಿದೆ.