ಗೆಳತಿ ಅವಿವಾ ಬೇಗ್‌ ಜತೆ ನಿಶ್ಚಿತಾರ್ಥ ಮಾಡಿಕೊಂಡ ಪ್ರಿಯಾಂಕಾ ಗಾಂಧಿ ಪುತ್ರ ರೈಹಾನ್ ವಾದ್ರಾ; ಮದುವೆ ಯಾವಾಗ?

Most read

ನವದೆಹಲಿ: ಕಾಂಗ್ರೆಸ್ ವರಿಷ್ಠೆ, ಲೋಕಸಭಾ ಸದಸ್ಯೆ ಪ್ರಿಯಾಂಕಾ ಗಾಂಧಿ ಅವರ ಪುತ್ರ ರೈಹಾನ್ ವಾದ್ರಾ ಮದುವೆಯ ದಿನಗಳು ಹತ್ತಿರವಾಗುತ್ತಿವೆ. 25 ವರ್ಷದ ರೈಹಾನ್‌ ತಮ್ಮ ಏಳು ವರ್ಷಗಳ ಗೆಳತಿ ಅವಿವಾ ಬೇಗ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ದೆಹಲಿ ಮೂಲದ ಮಾಧ್ಯಮಗಳು ವರದಿ ಮಾಡಿವೆ. ಇವರ ವಿವಾಹಕ್ಕೆ ಎರಡೂ ಕುಟುಂಬದವರು ಒಪ್ಪಿಗೆ ಸೂಚಿಸಿದ್ದಾರೆ.

ರೈಹಾನ್ ವಾದ್ರಾ ಓರ್ವ ದೃಶ್ಯ ಕಲಾವಿದರಾಗಿ ದೇಶ ವಿದೇಶಗಳಲ್ಲಿ ಗಮನ ಸೆಳೆದಿದ್ದಾರೆ. ತಮ್ಮ 10ನೇ ವಯಸ್ಸಿನಿಂದಲೂ ಕ್ಯಾಮೆರಾ ಹಿಡಿದು  ಜಗತ್ತನ್ನು ಸೆರೆಹಿಡಿಯುತ್ತಿದ್ದಾರೆ. ವನ್ಯಜೀವಿ, ರಸ್ತೆ, ವಾಣಿಜ್ಯ ಛಾಯಾಗ್ರಹಣದಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಮುಂಬೈನ ಕೊಲಾಬಾದಲ್ಲಿರುವ ಎಪಿಆರ್‌ಇ ಆರ್ಟ್ ಹೌಸ್‌ ನಲ್ಲಿ ರೈಹಾನ್‌ ಜೀವನ ಚರಿತ್ರೆಯ ಜಾಲತಾಣ ರೈಹಾನ್‌ ವಿವರ ನೀಡುತ್ತದೆ.  

2021ರಲ್ಲಿ ರೈಹಾನ್‌ ತಮ್ಮ ಚಿತ್ರಗಳ ಮೊದಲ ಪ್ರದರ್ಶನ ನೀಡಿದ್ದರು. 2017 ರಲ್ಲಿ ಕ್ರಿಕೆಟ್‌ ಆಡುವಾಗ ಇವರ ಕಣ್ಣಿಗೆ ಗಾಯವಾಗಿತ್ತು.  ಆ ಸಂದರ್ಭದಲ್ಲಿ ಕಪ್ಪು ಬಿಳುಪು ಚಿತ್ರಗಳನ್ನು ಸೆರೆ ಹಿಡಿಯಲು ಆರಂಭಿಸಿದ್ದಾಗಿ ಅವರು ಹೇಳಿಕೊಂಡಿದ್ದರು.

ಅಮ್ಮ ಪ್ರಿಯಾಂಕಾ ಗಾಂಧಿ ಅವರ ಪ್ರೋತ್ಸಾಹದಿಂದಾಗಿ ಬಾಲ್ಯದಲ್ಲಿಯೇ ರೈಹಾನ್‌ ಛಾಯಾಗ್ರಹಣದ ಹವ್ಯಾಸ ಬೆಳೆಸಿಕೊಂಡಿದ್ದರು. ಅವರ ತಾತ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರೂ ಛಾಯಾಗ್ರಹಣದ ಪ್ರೇಮಿಯಾಗಿದ್ದರು ಮತ್ತು ಚಿತ್ರಗಳನ್ನು ಕ್ಯಾಮೆರಾ ಲೆನ್ಸ್‌ ಗಳಲ್ಲಿ ಸೆರ ಹಿಡಿಯುತ್ತಿದ್ದರು


ದೆಹಲಿ ನಿವಾಸಿಯಾಗಿರುವ ಅವಿವಾ ಬೇಗ್ ಕೂಡ ಛಾಯಾಗ್ರಾಹಕಿ ಮತ್ತು ನಿರ್ಮಾಪಕಿಯಾಗಿದ್ದು, ಇವರ ವಿವಾಹಕ್ಕೆ ಎರಡೂ ಕುಟುಂಬದವರು ಒಪ್ಪಿಗೆ ಸೂಚಿಸಿದ್ದಾರೆ.

More articles

Latest article