ಹೆಚ್ಚುವರಿ ಡಿಸಿಎಂ ಮಾಡುವುದರಿಂದ ಎಲ್ಲಾ ಆಗುತ್ತೆ ಅನ್ನೋದಾದ್ರೆ ಇಡೀ ಸಂಪುಟ ಡಿಸಿಎಂ ಆಗಲಿ: ಪ್ರಿಯಾಂಕ್​ ಖರ್ಗೆ ಕಿಡಿ

Most read

ಹೆಚ್ಚುವರಿ ಡಿಸಿಎಂ ಮಾಡುವುದರಿಂದ ಎಲ್ಲಾ ಆಗುತ್ತೆ ಅನ್ನೋದಾದ್ರೆ ಸಿಎಂ ಬಿಟ್ಟು‌ ಇಡೀ ಕ್ಯಾಬಿನೆಟ್ ಡಿಸಿಎಂ ಆಗಲಿ ಅಂದ್ರೆ ಆಗುತ್ತಾ? ಎಂದು ಸಚಿವ ಪ್ರಿಯಾಂಕ್​ ಖರ್ಗೆ ಪ್ರಶ್ನಿಸಿದರು.

ವಿಧಾನಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೂರು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಸಚಿವ ರಾಜಣ್ಣ ಅವರ ವೈಯಕ್ತಿಕ ವಿಚಾರ. ಎಲ್ಲರಿಗೂ ಕೇಳೋಕೆ‌ ಹಕ್ಕಿದೆ. ಹೈಕಮಾಂಡ್ ಬಳಿ ಹೋಗಿ ಕೇಳಲಿ, ಯಾರು ಬೇಡ ಅನ್ನಲ್ಲ ಎಂದು ಹೇಳಿದ್ದಾರೆ.

ಡಿಸಿಎಂ ಮಾಡುವುದರಿಂದಲೇ ಎಲ್ಲಾ ಆಗುತ್ತೆ ಅನ್ನೋ ಆಗಿದ್ರೆ ಮುಖ್ಯಮಂತ್ರಿ ಬಿಟ್ಟು‌ ಇಡೀ ಕ್ಯಾಬಿನೆಟ್ ಡಿಸಿಎಂ ಆಗಲಿ ಅಂದ್ರೆ ಆಗುತ್ತಾ? ನಮ್ಮ‌ ಕೆಲಸ ಏನು ಅದನ್ನ ಮಾಡಬೇಕು ಅಲ್ವ? ಒಬ್ಬ ಸಿಎಂರನ್ನು ಬಿಟ್ಟು ಮಿಕ್ಕವರೆಲ್ಲ ಉಪ ಮುಖ್ಯಮಂತ್ರಿಗಳಾಗಲಿ, ಆಗ ಎಲ್ಲ ಸಮುದಾಯಗಳಿಗೆ ಪ್ರಾತಿನಿಧ್ಯ ಸಿಕ್ಕಂತಾಗುತ್ತದೆ ಎಂದು ಎಂದು ಹೇಳಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷೆಯಂತೆ ಸೀಟುಗಳು ಬಂದಿಲ್ಲ. ನಾಲ್ಕೈದು ಸ್ಥಾನ ಕಡಿಮೆ ಬಂದಿವೆ. ಚುನಾವಣೆಯಲ್ಲಿ ಜವಾಬ್ದಾರಿ ವಹಿಸಿಕೊಂಡಿದ್ದ ಸಚಿವರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅವಶ್ಯಕತೆಯಿದೆ. ಎಷ್ಟು ಸಚಿವರು ತಮಗೆ ನೀಡಿದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಇದನ್ನು ಮೊದಲು ಮಾಡಿ ನಂತರ ಸಿಎಂ ಹುದ್ದೆನೂ‌ ಕೇಳಿ, ಯಾರು ಬೇಡ ಅಂದೋರು ಎಂದು ಅಸಮಾಧಾನ ಹೊರಹಾಕಿದರು.

More articles

Latest article