ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದಿಂದ ಪರಿಣಾಮಕಾರಿ ಕೆಲಸ: ಪ್ರಿಯಾಂಕ್ ಖರ್ಗೆ

Most read

ಬೆಂಗಳೂರು: ಅಷ್ಟಾಗಿ ಮಾಧ್ಯಮ ಸ್ನೇಹಿಯಲ್ಲದ ನನ್ನನ್ನು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ ಅವರು ಕಳೆದ ಒಂದು ಕಾಲು ವರ್ಷದ ಹಿಂದೆ ಕೆಪಿಸಿಸಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣದ ಅಧ್ಯಕ್ಷನನ್ನಾಗಿ ನೇಮಕ ಮಾಡಿದರು. ಈ ಜವಾಬ್ದಾರಿ ಹೊತ್ತಮೇಲೆ ನಾನು ಮಾಧ್ಯಮದ ಅನೇಕ ಸ್ನೇಹಿತರಿಂದ ಹಲವು ವಿಚಾರಗಳನ್ನು ಕಲಿತೆ. ಅನೇಕ ಸ್ನೇಹಿತರು ನಾವು ಎಡವಿದಾಗ ಮಾರ್ಗದರ್ಶನ ಮಾಡಿದ್ಧಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ನೆನಪಿಸಿಕೊಂಡರು.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಅವರು ಮಾತನಾಡಿದರು. ಮಾಧ್ಯಮ ವಿಭಾಗದಿಂದ ಅನೇಕ ವಿಚಾರಗಳನ್ನು ತೆಗೆದುಕೊಂಡು ಈ ಹಿಂದೆ ಇದ್ದಂತಹ ಸರ್ಕಾರದ ವೈಫಲ್ಯಗಳನ್ನು ಬಯಲಿಗೆ ಎಳೆಯಲಾಯಿತು. ಗಂಗಾಕಲ್ಯಾಣ ಅಕ್ರಮಗಳು, ಪಿಎಸ್ಐ, ಬಿಟ್ ಕಾಯಿನ್ ಅಕ್ರಮ, ಪೇಸಿಎಂ, 40 ಪರ್ಸೆಂಟ್ ಅಕ್ರಮಗಳನ್ನು ಬಯಲಿಗೆ ಎಳೆದು ಯಶಸ್ವಿಯಾಗಿದ್ದೆವು.

ನಮ್ಮಲ್ಲಿ ಅನೇಕರಿಗೆ ನಮ್ಮ ಸಾಮಾಜಿಕ ಜಾಲತಾಣ ವಿಭಾಗ ಮತ್ತು ಮಾಧ್ಯಮ ವಿಭಾಗ ಜನಾಭಿಪ್ರಾಯ ರೂಪಿಸುತ್ತಿಲ್ಲ ಎನ್ನುವ ಆರೋಪವಿತ್ತು. ಇದನ್ನು ನಾವು ಮೀರಿ ಯಶಸ್ವಿಯಾಗಿದ್ದೇವೆ. ಎಲ್ಲಾ ಜಿಲ್ಲೆಯಗಳ ಪದಾಧಿಕಾರಿಗಳು ಸೇರಿ ಒಗ್ಗೂಡಿ ಕೆಲಸ ಮಾಡಿದ ಪರಿಣಾಮ ಕೆಪಿಸಿಸಿ ಮಾಧ್ಯಮ ಮತ್ತು ಜಾಲತಾಣ ವಿಭಾಗ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿತು.

Content is king ಎನ್ನುವ ಮಾತಿನಂತೆ ಜನರಿಗೆ ಮಾಹಿತಿ ನೀಡಿದ್ದೇವೆ. ಕಾಂಗ್ರೆಸ್ ಪಕ್ಷದ ಬಗ್ಗೆ ವಿಶ್ವಾಸ ಮೂಡುವಂತೆ ಮಾಡಿದ್ದೇವೆ. 136 ಸ್ಥಾನಗಳನ್ನು ಗೆದ್ದು ಉತ್ತಮವಾಗಿ ಆಡಳಿತ ನಡೆಸುತ್ತಿದ್ದೇವೆ. ಪ್ರಸ್ತುತ ಸರ್ಕಾರದ ಉತ್ತಮ ಕೆಲಸಗಳನ್ನು ಜನರಿಗೆ ತಲುಪಿಸುವುದು ನಮ್ಮ ಮುಂದಿರುವ ಸವಾಲು. ಬಿಜೆಪಿ ಮತ್ತು ಆರ್ಎಸ್ಎಸ್ ವೈಫಲ್ಯಗಳನ್ನು ಜನರಿಗೆ ತಿಳಿಸಿ ಕಾಂಗ್ರೆಸ್ ಏಕೆ ಬೇಕು ಎಂದು ಮನವರಿಕೆ ಮಾಡಬೇಕಿದೆ ಎಂದು ಹೇಳಿದ ಅವರು ತಮಗೆ ಈ ಅವಕಾಶ ನೀಡಿದ ನಾಯಕರಿಗೆ ಧನ್ಯವಾದಗಳನ್ನು ತಿಳಿಸಿದರು.

More articles

Latest article