Thursday, March 26, 2026

ದೇಶದ ಸಿಎಂಗಳ ಜೊತೆ ವರ್ಚ್ಯುವಲ್‌ ಸಭೆ ನಡೆಸಲಿರುವ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ : ಪಶ್ಚಿಮ ಏಷ್ಯಾ ಸಂಘರ್ಷದ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಮುಖ್ಯಮಂತ್ರಿಗಳೊಂದಿಗೆ ವರ್ಚುವಲ್ ಸಭೆ ನಡೆಸಲಿದ್ದಾರೆ. ಚುನಾವಣೆಗೆ ಸಜ್ಜಾಗಿರುವ ರಾಜ್ಯಗಳ ಸಿಎಂಗಳ ಜೊತೆ ಸಂವಾದದಲ್ಲಿ ಭಾಗವಹಿಸುವ ಸಾಧ್ಯತೆ ಕಡಿಮೆ ಇದೆ ಎನ್ನಲಾಗಿದೆ.

ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ,  ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಬಗ್ಗೆ ಎಚ್ಚರಿಕೆಯ ಹಾಗೂ ದೃಢವಾದ ಧ್ವನಿಯನ್ನು  ಹೊಂದಲಾಗಿದೆ. ಯುದ್ಧವು  ಜಾಗತಿಕ ಇಂಧನ ಬಿಕ್ಕಟ್ಟಿಗೆ ಕಾರಣವಾಗಿದೆ. ಇದರ ಪರಿಣಾಮಗಳು ದೀರ್ಘಕಾಲದವರೆಗೆ ಮುಂದುವರಿಯಬಹುದು. ಇದೇ  ಪರಿಸ್ಥಿತಿ ಮುಂದುವರಿದರೆ ಅನಿವಾರ್ಯ ಪರಿಣಾಮಗಳನ್ನು ಎದುರಿಸಬೇಕಾಗಬಹುದು ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ.  

ಸಂಘರ್ಷವನ್ನು ಪರಿಹರಿಸಲು ಹಾಗೂ ಉದ್ವಿಘ್ನತೆ ಶಮನಗೊಳಿಸಲು ರಾಜತಾಂತ್ರಿಕತೆ  ಬಹಳ ಮುಖ್ಯ. ಸಂಘರ್ಷದಿಂದ ತೊಂದರೆಗೊಳಗಾಗಿರುವ  ರೈತರನ್ನು ರಕ್ಷಿಸುವುದು ಮತ್ತು ಬಡ ಮತ್ತು ವಲಸೆ ಕಾರ್ಮಿಕರಿಗೆ ಅಗತ್ಯ ವಸ್ತುಗಳು ಸಿಗುವಂತೆ ಮಾಡುವುದು ಮುಖ್ಯ ಉದ್ದೇಶ ಎಂದರು.

ಇಂಧನ ಪೂರೈಕೆ ಸರಪಳಿಗಳು, ರಸಗೊಬ್ಬರಗಳು ಮತ್ತು ಹಣದುಬ್ಬರದಂತಹ ಕಠಿಣ ಕ್ಷೇತ್ರಗಳನ್ನು ನಿರ್ವಹಿಸಲು ಕೇಂದ್ರ ಸರ್ಕಾರವು ಕೋವಿಡ್ ಸಮಯದಲ್ಲಿ ಕೈಗೊಳ್ಳಲಾಗಿದ್ದ ಪ್ರತಿಕ್ರಿಯೆಯ ಮಾದರಿಯಲ್ಲಿ ಏಳು ಸಬಲೀಕೃತ ಗುಂಪುಗಳನ್ನು ಸ್ಥಾಪಿಸಿದೆ. ಅಲ್ಲದೇ  ಇಂಧನ ಮೂಲವನ್ನು ವೈವಿಧ್ಯಗೊಳಿಸುತ್ತಿದೆ. ಕಚ್ಚಾ ತೈಲ ಮತ್ತು ಅನಿಲಕ್ಕಾಗಿ ಹೊಸ ಮಾರುಕಟ್ಟೆಗಳನ್ನು ಬಳಸಿಕೊಳ್ಳುತ್ತಿದೆ ಮತ್ತು ಅಗತ್ಯ ಪೂರೈಕೆಗಳ ನಿರಂತರ ಹರಿವಿಗೆ ಶ್ರಮಿಸುತ್ತಿದೆ ಎಂದು ನರೇಂದ್ರ ಮೋದಿ ತಿಳಿಸಿದರು. 

ಹಾಗೆಯೇ,  ದೇಶದೊಳಗೆ ಉದ್ಬವಗೊಂಡಿರುವ ಬಿಕ್ಕಟ್ಟನ್ನು ಪರಿಸಹರಿಸುವ ಸಲುವಾಗಿ  ಎಲ್ಲಾ  ರಾಜ್ಯಗಳಿಂದ ಸಹಕಾರ  ಕೋರಿರುವ ಮೋದಿ,  ಸಂಘಟಿತ “ಟೀಮ್ ಇಂಡಿಯಾ” ವಿಧಾನಕ್ಕೆ  ಮೊರೆ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆ ದೇಶದ ಹಲವು ಮುಖ್ಯಮಂತ್ರಿಗಳೊಂದಿಗೆ ವಿಡೀಯೋ ಕಾನ್ಫೆರೆನ್ಸ ಮೂಲಕ ಸಭೆ ನಡೆಸಲಿದ್ದಾರೆ.  ಭಾರತದ ದೇಶದ ಮೇಲೆ ಆಗುತ್ತಿರುವ ಪರಿಣಾಮವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಆದರೂ,  ಸಂಭಾವ್ಯ ಅಡೆತಡೆಗಳಿಗೆ ನಾಗರಿಕರು ಸಿದ್ಧರಾಗಿರಬೇಕು ಎಂದರು. 

More articles

Latest article

Most read