Monday, May 20, 2024

ರಾಹುಲ್ ಗಾಂಧಿಗೆ ಟ್ರಕ್ ಗಟ್ಟಲೆ ಹಣ ಕೊಟ್ಟಿದ್ದಾರೆ: ಅದಾನಿ,‌ ಅಂಬಾನಿ ವಿರುದ್ಧವೇ ತಿರುಗಿ ಬಿದ್ದ ಮೋದಿ

Most read

ವಾರಂಗಲ್ (ಆಂಧ್ರಪ್ರದೇಶ): ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ಪ್ರಧಾನ ಮಂತ್ರಿ‌ ನರೇಂದ್ರ ತನ್ನ ಆಪ್ತಮಿತ್ರ ಉದ್ಯಮಿಗಳಾದ ಮುಖೇಶ್ ಅಂಬಾನಿ, ಗೌತಮ್ ಅದಾನಿ‌ ವಿರುದ್ಧ ತಿರುಗಿಬಿದ್ದಿದ್ದಾರೆ.

“ಚುನಾವಣೆ ಘೋಷಣೆಯಾಗುತ್ತಿದ್ದಂತೆ ಈ ಜನರು (ಕಾಂಗ್ರೆಸ್) ಅಂಬಾನಿ, ಅದಾನಿ ನಿಂದಿಸುವುದನ್ನು ಬಿಟ್ಟಿದ್ದಾರೆ. ತೆಲಂಗಾಣದ ಈ‌ ನೆಲದ ಮೇಲೆ ನಿಂತು ನಾನು ಪ್ರಶ್ನಿಸುತ್ತಿದ್ದೇನೆ. ಶೆಹಜಾದಾ (ರಾಹುಲ್ ಗಾಂಧಿ) ಅದಾನಿ, ಅಂಬಾನಿಯಿಂದ ಎಷ್ಟು ವಸೂಲಿ‌ ಮಾಡಿದ್ದಾರೆ‌‌‌ ಎಂಬುದನ್ನು ಹೇಳಲಿ. ಟೆಂಪೋ ಲೋಡ್ ಗಳ ನೋಟುಗಳು ಕಾಂಗ್ರೆಸ್ ತಲುಪಿಲ್ಲವೇ? ಇದ್ದಕ್ಕಿದ್ದಂತೆ ಅಂಬಾನಿ-ಅದಾನಿ ನಿಂದನೆಯನ್ನು ಅವರು ನಿಲ್ಲಿಸುವಂತಾಗಲು ಇವರ ನಡುವೆ (ರಾಹುಲ್ ಗಾಂಧಿ ಮತ್ತು ಅಂಬಾನಿ-ಅದಾನಿ) ಯಾವ ಒಪ್ಪಂದ ಆಗಿದೆ?” ಎಂದು‌ ಪ್ರಧಾನಿ‌ ಮೋದಿ ಪ್ರಶ್ನಿಸಿದ್ದರು.

ಕಳೆದ ಚುನಾವಣೆಯಿಂದ ಹಿಡಿದು ಈ‌ ಚುನಾವಣೆವರೆಗೆ ರಾಹುಲ್ ಗಾಂಧಿ ಅದಾನಿ,‌ ಅಂಬಾನಿಗಳ ವಿರುದ್ಧ ಮಾತಾಡುತ್ತಲೇ ಬಂದಿದ್ದಾರೆ. ಮೋದಿ‌ ತನ್ನ‌ ಆಪ್ತ ಉದ್ಯಮಿಗಳು ಕೊಡುತ್ತಿರುವ ಹಣವನ್ನು ನಾನು‌ ಈ‌ ದೇಶದ ಬಡಜನರಿಗೆ ಕೊಡುತ್ತೇನೆ ಎಂದು ರಾಹುಲ್ ಪದೇ ಪದೇ ಹೇಳುತ್ತಲೇ ಬಂದಿದ್ದಾರೆ.

ಆದರೂ ಮೋದಿ ಈ ಹೇಳಿಕೆಯನ್ನು ಯಾಕೆ ಕೊಟ್ಟಿರಬಹುದು ಎಂಬ‌ ಜಿಜ್ಞಾಸೆ ರಾಜಕೀಯ ವಲಯದಲ್ಲಿ ಆರಂಭಗೊಂಡಿದೆ. ಸ್ವತಃ ಬಿಜೆಪಿ ನಾಯಕರುಗಳೇ ಮೋದಿ ಹೇಳಿಕೆಯಿಂದ ಶಾಕ್ ಆಗಿದ್ದಾರೆ.‌ ಮೋದಿ ಮತ್ತು ಅದಾನಿ-ಅಂಬಾನಿಗಳ ನಡುವಿನ ಸಂಬಂಧ ಹಳಸಿರಬಹುದೇ? ಈ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷಿಸಿದಷ್ಟು ಅದಾನಿ, ಅಂಬಾನಿಗಳು ಸಹಾಯ‌ ಮಾಡಿಲ್ಲವೇ ಎಂಬ ಪ್ರಶ್ನೆಗಳು ಉದ್ಭವಿಸಿದೆ.

More articles

Latest article