ಮತ್ತೆ ಬೆಲೆ ಏರಿಕೆ ಶಾಕ್! ಪ್ರತಿ ಲೀಟರ್ ಹಾಲಿನ ದರ ರೂ. 4 ಹೆಚ್ಚಳ; ನಾಳೆಯಿಂದಲೇ ಹೊಸ ದರ ಜಾರಿ

Most read

ಬೆಂಗಳೂರು: ರಾಜ್ಯದ ಜನತೆಗೆ ಮತ್ತೆ ದರ ಏರಿಕೆ ಶಾಕ್ ನೀಡಲಾಗಿದೆ. ಬಸ್ ಮತ್ತು ವಿದ್ಯುತ್ ದರ ಏರಿಕೆ ನಂತರ ನಂದಿನಿ ಹಾಲಿನ ದರವನ್ನೂ ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ. ಹಾಲಿನ ದರ ಪ್ರತಿ ಲೀಟರ್ ಗೆ 4 ರೂಪಾಯಿ ಏರಿಸಲಾಗಿದೆ. ಹಾಲಿನ ದರ ಏರಿಕೆ ಬಗ್ಗೆ ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಲಾಗಿದೆ. ಪರಿಷ್ಕೃತ ದರ ನಾಳೆಯಿಂದಲೇ ಜಾರಿಯಾಗಲಿದೆ. ಜತೆಗೆ ಹೆಚ್ಚುವರಿಯಾಗಿ ನೀಡುತ್ತಿದ್ದ 50 ಎಂಎಲ್ ಹಾಲನ್ನು ಕಡಿತಗೊಳಿಸಲಾಗಿದೆ.

ಯಾವ ಹಾಲಿನ ದರ ಎಷ್ಟು..!?
• ಆರೆಂಜ್ ಪ್ಯಾಕೆಟ್ ಹಾಲು- 54 ರಿಂದ 58 ರೂ.
• ನೀಲಿ ಪ್ಯಾಕೆಟ್ ಹಾಲು – 44 ರಿಂದ 48ರೂ.
• ಸಮೃದ್ಧಿ ಪ್ಯಾಕೆಟ್ ಹಾಲು – 56 ರಿಂದ 60ರೂ.
• ಗ್ರೀನ್ ಸ್ಪೆಷಲ್ ಹಾಲು – 54 ರಿಂದ 58ರೂ.
• ನಾರ್ಮಲ್ ಗ್ರೀನ್ ಪ್ಯಾಕೆಟ್ – 52 ರಿಂದ 56 ರೂ.

More articles

Latest article