ಪ್ರಣೀತಾ ಸುಭಾಷ್ ಹಾಗೂ ಕಂಗನಾ ನಡುವೆ ಜಾಸ್ತಿ ವ್ಯತ್ಯಾಸವೇನು ಇಲ್ಲ. ಬಿಜೆಪಿ ಹಾಗೂ ಮೋದಿ ಬಗ್ಗೆ ಯಾವಾಗಲೂ ಹೊಗಳಿಕೆಯ ಮಾತುಗಳನ್ನು ಆಡುತ್ತಲೆ ಇರುತ್ತಾರೆ. ಇದೇ ವಿಚಾರಕ್ಕೆ ಪ್ರಣೀತಾ ಹಲವು ಬಾರಿ ಟ್ರೋಲ್ ಗೆ ಗುರಿಯಾಗಿದ್ದಾರೆ. ಇದೀಗ ಅಬ್ ಕೀ ಬಾರ್ 400 ಪಾರ್ ಅನ್ನೋ ಸ್ಟೇಟಸ್ ಹಾಕಿ ನಗೆಪಾಟಲಿಗೆ ಈಡಾಗಿದ್ದಾರೆ.
ನಿನ್ನೆಯಷ್ಟೆ ಲೋಕಸಭಾ ಚುನಾವಣೆಯ ಫಲಿತಾಂಶ ಹೊರ ಬಿದ್ದಿದೆ. ಬಿಜೆಪಿ 300 ಕ್ಷೇತ್ರಗಳನ್ನು ಮುಟ್ಟುವುದಕ್ಕೇನೆ ತಿಣುಕಾಡಿದೆ. ಅಂತದ್ರಲ್ಲಿ ಪ್ರಣೀತಾ ಸುಭಾಷ್ ಈ ರೀತಿಯ ಸ್ಟೇಟ್ಮೆಂಟ್ ಹಾಕಿರುವುದು ಹಲವರಿಗೆ ಶಾಕಿಂಗ್ ಎನಿಸಿದೆ. ಟ್ರೋಲರ್ಸ್ ಅಂತು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಪ್ರಣೀತಾ ಸುಭಾಶ್ ಅವರ ಸ್ಟೇಟ್ಮೆಂಟ್ ಸ್ಕ್ರೀನ್ ಶಾಟ್ ತೆಗೆದು ಲೇವಡಿ ಮಾಡುತ್ತಿದ್ದಾರೆ.
ಮುನ್ನೂರರ ಗಡಿಯನ್ನು ದಾಟಿಲ್ಲ ಬಿಜೆಪಿ, ನೀವೂ ನೋಡಿದರೆ 400 ಲೆಕ್ಕಾಚಾರ ಹಾಕಿದ್ದೀರಲ್ಲ. ಭವಿಷ್ಯದಲ್ಲೂ ಹೀಗೆಯೇ ಕನಸು ಕಾಣುತ್ತೀರಿ. ಅಬ್ ಕಿ ಬಾರ್ ಭಾರತ್ ಪಾರ್ ಎಂದು ಪ್ರಣೀತಾ ಅವರಿಗೆ ಸೋಷಿಯಲ್ ಮೀಡಿಯಾ ಫಾಲೋವರ್ಸ್ ಕಾಲೆಳೆದಿದ್ದಾರೆ.
ನಿನ್ನೆ ಬಂದ ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿಗೆ ಬಂದಿರುವುದು ಸರಳ ಬಹುಮತವಷ್ಟೇ. ಅಧಿಕಾರ ಹಿಡಿಯಬಹುದು, ಮೋದಿ ಹ್ಯಾಟ್ರಿಕ್ ಗೆಲುವನ್ನು ಸಂಭ್ರಮಿಸಬಹುದು. ಆದರೆ ತುಂಬಾ ಖುಷಿ ಪಡುವಂತ ಫಲಿತಾಂಶವೇನು ಅಲ್ಲ. ಇಂಡಿಯಾ ಮೈತ್ರಿಕೂಟವೇ 229 ಕ್ಷೇತ್ರಗಳನ್ನು ಪಡೆದು ಬಿಜೆಪಿಯ ಸನಿಹಕ್ಕೆ ಬಂದಿದೆ. ಆದರೆ ಪ್ರಣೀತಾ ಸುಭಾಷ್ ಅವರು ಬಿಜೆಪಿ ಮೇಲೆ ಇರುವ ತಮ್ಮ ಶ್ರದ್ಧೆ ಭಕ್ತಿಯಿಂದಾಗಿ ಫಲಿತಾಂಶವನ್ನು ಸರಿಯಾಗಿ ಗಮನ ಹರಿಸದೆ ಪೋಸ್ಟ್ ಮಾಡಿದ್ದರು ಎಮಿಸುತ್ತದೆ ಎಂದು ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.