ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಇರುವ ಅಭಿಮಾನಿಗಳೇನು ಕಡಿಮೆ ಇಲ್ಲ. ದೊಡ್ಡದಾದ ಅಭಿಮಾನಿ ಬಳಗವನ್ನು ಹೊಂದಿರುವ ನಟ ದರ್ಶನ್, ವರ್ಷಕ್ಕೆ ಎರಡು ಸಿನಿಮಾ ಮಾಡಿ ರಂಜಿಸುತ್ತಾ ಇರುತ್ತಾರೆ. ಇವತ್ತು ಅಕ್ಷಯ ತೃತೀಯ. ಐಶ್ವರ್ಯಾ, ಸಂಪತ್ತು ವೃದ್ದಿಯಾಗುವಂತ ಸಮಯ. ಈ ಸುಸಂದರ್ಭದಲ್ಲಿ ದರ್ಶನ್ ತನ್ನ ಸೆಲೆಬ್ರೆಟಿಗಳ ಸಂತಸವನ್ನು ದುಪ್ಪಟ್ಟು ಮಾಡಿದ್ದಾರೆ.
ದರ್ಶನ್ ಸಿನಿಮಾಗಳು ಎಂದರೇನೆ ಇನ್ನಿಲ್ಲದ ಖುಷಿ. ಹಬ್ಬ ಹಬ್ಬ ಮಾಡಿ ಬಿಡುತ್ತಾರೆ ಫ್ಯಾನ್ಸ್. ಡೆವಿಲ್ ಸಿನಿಮಾ ಮೇಲೂ ಅಷ್ಟೇ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆ ನಿರೀಕ್ಷೆ ಇದೀಗ ಮೇಕಿಂಗ್ ವಿಡಿಯೋ ನೋಡಿದ ಮೇಲೆ ಫಿಲ್ ಆಗಿದೆ ಅಂತಾನೇ ಹೇಳಬಹುದು. ಈಗಾಗಲೇ ಟೈಟಲ್ ಟೀಸರ್ ನಲ್ಲಿ ದರ್ಶನ್ ಅವರ ಲುಕ್ ಅನ್ನು ನೋಡಲಾಗಿತ್ತು. ಇದೀಗ ಡೆವಿಲ್ ಸೆಟ್ ನಲ್ಲಿ ಅವರ ಇನ್ನಷ್ಟು ಲುಕ್ ರಿವಿಲ್ ಆಗಿದೆ. ಇದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.
ನಟ ದರ್ಶನ್ ಈಗಾಗಲೇ ಫಿಟ್ನೆಸ್ ಕೂಡ ಮೆಂಟೈನ್ ಮಾಡಿದ್ದಾರೆ. ಹೇಳಿ ಕೇಳಿ ದರ್ಶನ್ ಗಿರುವುದು ಮಾಸ್ ಆಡಿಯನ್ಸ್ ಜಾಸ್ತಿ. ಅದಕ್ಕೆ ತಕ್ಕಂತೆ ಇದೀಗ ಮಾಸ್ ಲುಕ್ ರಿವಿಲ್ ಆಗಿದೆ. ಮೇಕಿಂಗ್ ನೋಡಿದ ಅಭಿಮಾನಿಗಳು ಕಮೆಂಟ್ ಬಾಕ್ಸ್ ತುಂಬಿಸುತ್ತಿದ್ದಾರೆ. ಬಾಸ್ ಗೆ ಜೈಕಾರ ಹಾಕುತ್ತಿದ್ದಾರೆ. ಬೆಂಕಿ ಕೆಂಮಟ್ ಪಾಸ್ ಮಾಡುತ್ತಿದ್ದಾರೆ. ದಾಖಲೆಗಳು ಉಡೀಸ್ ಆಗೋದು ಗ್ಯಾರಂಟಿ ಅಂತಿದ್ದಾರೆ.
ಡೆವಿಲ್ ಸಿನಿಮಾಗೆ ಮಿಲನಾ ಪ್ರಕಾಶ್ (ಪ್ರಕಾಶ್ ವೀರ್) ಆಕ್ಷನ್ ಕಟ್ ಹೇಳಿದ್ದಾರೆ. ಈ ಮೊದಲು ಪ್ರಕಾಶ್ ವೀರ್ ‘ತಾರಕ್’ ಸಿನಿಮಾವನ್ನು ದರ್ಶನ್ ಜೊತೆಗೆ ಮಾಡಿದ್ದರು. ಈಗ ಅವರ ಅಭಿಮಾನಿಗಳಿಗೆ ‘ಡೆವಿಲ್’ನಂತಹ ಮಾಸ್ ಸಿನಿಮಾ ಕೊಡ್ತಾ ಇದ್ದಾರೆ.
https://www.instagram.com/reel/C6xkwL-ICSr/?igsh=MTAydTV3dGNreDE4OA==