ಬುಕ್‌ ಆಗಿದ್ದ ವಿಮಾನ ಹತ್ತದ ಪ್ರಜ್ವಲ್: ಇವತ್ತು ಬರುತ್ತಿಲ್ಲ ಪ್ರಜ್ವಲ್‌ ರೇವಣ್ಣ, ಎಸ್‌ಐಟಿಗೆ ನಿರಾಶೆ!

ಲೈಂಗಿಕ ದೌರ್ಜನ್ಯ ಮತ್ತು ವಿಡಿಯೋ ಚಿತ್ರೀಕರಣ ಆರೋಪಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಇಂದೂ ಸಹ ಭಾರತಕ್ಕೆ ಬರುತ್ತಿಲ್ಲ ಎಂದು ತಿಳಿದುಬಂದಿದೆ.

ಪ್ರಜ್ವಲ್ ರೇವಣ್ಣ ಜರ್ಮನ್​​​​ನ ಮ್ಯೂನಿಚ್​​ನಿಂದ ಬೆಂಗಳೂರಿಗೆ ಬರಲು ಟಿಕೆಟ್ ಬುಕ್ ಆಗಿದ್ದರೂ ವಿಮಾನವನ್ನ ಹತ್ತಿಲ್ಲ ಎಂದು ತಿಳಿದುಬಂದಿದೆ. ಇವತ್ತು ಪ್ರಜ್ವಲ್‌ ಬರಬಹುದು ಎಂದು ಎಸ್​ಐಟಿ ಅಧಿಕಾರಿಗಳು ಕಾದು ಕುಳಿತಿದ್ದರು. ಆದರೆ ವಿಮಾನ ಟೆಕ್ ಆಫ್ ಆಗಿದ್ದು, ಪ್ಯಾಸೇಂಜರ್ ಲಿಸ್ಟ್​ನಲ್ಲಿ ಪ್ರಜ್ವಲ್​ ಹೆಸರಿಲ್ಲ ಎಂದು ತಿಳಿದುಬಂದಿದೆ.

ಎರಡು ದಿನಗಳಿಂದೆ ಬೆಂಗಳೂರಿಗೆ ಬರಲು ಪ್ರಜ್ವಲ್ ರೇವಣ್ಣ ಟಿಕೆಟ್ ಬುಕ್ ಮಾಡಿದ್ದರು. ಆದರೆ ಕೊನೆಕ್ಷಣದಲ್ಲಿ ಕ್ಯಾನ್ಸಲ್ ಮಾಡಿದ್ದರು, ಇಂದು ಮತ್ತೆ ಟಿಕೆಟ್ ಬುಕ್​ ಮಾಡಿದ್ದರು.‌ ಬುಕ್‌ ಆಗಿದ್ದ ವಿಮಾನ ಜರ್ಮನ್ ಕಾಲಮಾನದ ಪ್ರಕಾರ 12:20 ಅಂದರೆ ಭಾರತೀಯ ಸಮಯದಲ್ಲಿ ಮಧ್ಯಾಹ್ನ 2 ಗಂಟೆಗೆ ಹಾರಲಿರುವ ವಿಮಾನದಲ್ಲಿ ಪ್ರಯಾಣಿಸಬೇಕಿತ್ತು. ಆದರೆ ಇಂದೂ ಕೂಡ ರೇವಣ್ಣ ವಿಮಾನ ಏರಿಲ್ಲ, ಪ್ರಯಾಣಿಕರ ಲಿಸ್ಟ್​ನಲ್ಲಿ ಪ್ರಜ್ವಲ್ ಹೆಸರಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜ್ವಲ್​ ಬರಬಹುದು ಎಂದು ಎಸ್​ಐಟಿ ತಂಡ ಕೆಂಪೇಗೌಡ ವಿಮಾನ ನಿಲ್ದಾಣದಲ್ಲೇ ಬೀಡುಬಿಟ್ಟಿದೆ. ಆದರೆ ಪ್ರಜ್ವಲ್‌ ವಿಮಾನ ಹತ್ತದೇ ಅವರಿಗೆ ನಿರಾಶೆ ಮಾಡಿದ್ದಾರೆ.

More articles

Latest article

Most read