ಹುಬ್ಬಳ್ಳಿ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಚುನಾವಣೆಗೆ ಎರಡು ದಿನ ಮುನ್ನವೇ ಗೊತ್ತಿತ್ತು ಎಂದು ಬಿಜೆಪಿಯ ಮಾಜಿ ಶಾಸಕ ಸಿ.ಟಿ ರವಿ ಬಾಯಿ ಬಿಟ್ಟಿದ್ದಾರೆ.
ಈ ಕೇಸ್ ಬಗ್ಗೆ ಈಗಾಗಲೇ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟವಾಗಿ ಮಾತನಾಡಿದ್ದಾರೆ. ಮಾಜಿ ಶಾಸಕರು ಪತ್ರ ಬರೆದಿರುವ ವಿಚಾರ ನಮಗೆ ಗೊತ್ತಿಲ್ಲ. ಪ್ರಜ್ವಲ್ ರೇವಣ್ಣಗೆ ಟಿಕೆಟ್ ಕೊಟ್ಟಿರುವುದು ಜೆಡಿಎಸ್, ನಾವಲ್ಲ ಎಂದು ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಪ್ರಜ್ವಲ್ ಲೈಂಗಿಕ ಹಗರಣ ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತೆ ಎಂದೇನೂ ಇಲ್ಲ ಎಂದು ಅವರು ಅಭಿಪ್ರಾಯಪಟ್ಟರು.
NDRS, SDRF ಪರಿಹಾರದ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಅಪಪ್ರಚಾರ ಮಾಡುತ್ತಿದೆ ಎಂದ ಅವರು, ಕಾಂಗ್ರೆಸ್ ಅವಧಿಯಲ್ಲಿ 44 ಸಾವಿರ ಕೋಟಿ ಕೇಳಿದ್ದೆವು. ಅವರ ಕೊಟ್ಟಿದ್ದು ಕೇವಲ ಶೇಕಡಾ 8ರಷ್ಟು. NDA ಅವಧಿಯಲ್ಲಿ ಶೇಕಡಾ 42ರಷ್ಟು ಹಣ ಕೊಟ್ಟಿದೆ. ಕೇವಲ ರಾಜಕಾರಣಕ್ಕಾಗಿ ಅಪಪ್ರಚಾರ ಮಾಡಲಾಗ್ತಿದೆ. ರಾಹುಲ್ ಗಾಂಧಿ ಹೆಸರಿನಲ್ಲಿ ಮತ ಕೇಳಿದರೆ ಬರಲ್ಲ. ಹಾಗಾಗಿ ಪರಿಹಾರ ವಿಚಾರದಲ್ಲಿ ಅಪಪ್ರಚಾರ ಮಾಡ್ತಿದ್ದಾರೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಗ್ಯಾರಂಟಿಗಳು ಉದ್ದರಣೆಯಲ್ಲಿ ತೀರ್ಥ ಕೊಟ್ಟಂತೆ. ಅವು ವೋಟ್ ಬ್ಯಾಂಕ್ ಗೆ ಸೀಮಿತ. ಗ್ಯಾರಂಟಿಗಳು ಮಹಾವಂಚನೆ, ಕುತಂತ್ರದಿಂದ ಕೂಡಿವೆ. ಇವೆಲ್ಲವನ್ನು ಚುನಾವಣೆಗಾಗಿ ಕುತಂತ್ರದಿಂದ ಮಾಡಲಾಗಿದೆ ಎಂದ ಅವರು ಇವು ಬದುಕು ಬದಲಾಯಿಸುವ ಗ್ಯಾರಂಟಿಗಳಲ್ಲ ಎಂದರು.