ಬೆಂಗಳೂರು: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ 220/66/11ಕೆವಿ ಎಸ್.ಆರ್.ಎಸ್ ಪೀಣ್ಯ ಉಪಕೇಂದ್ರದಲ್ಲಿನ ಈ ಕೆಳಕಂಡ ಪ್ರದೇಶಗಳಲ್ಲಿ 21.12.2024 (ಶನಿವಾರ) ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3.30 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
“ಪೀಣ್ಯ 10 ನೇ ಮುಖ್ಯ ರಸ್ತೆ, 11ನೇ ಮುಖ್ಯ ರಸ್ತೆ, ಉಡುಪಿ ಹೋಟೆಲ್ ಸುತ್ತಮುತ್ತ, ಆರ್ ಪಾಲಿಟೆಕ್ನಿಕ್ ರಸ್ತೆ, ಲಕ್ಷ್ಮಿ ದೇವಿ ನಗರ, ಲಗ್ಗೆರೆ ಹಳೆ ಗ್ರಾಮ, ಲವಕುಶನಗರ, ರಾಜೀವ್ ಗಾಂಧಿ ನಗರ, ಚೌಡೇಶ್ವರಿ ನಗರ 6ನೇ, 7ನೇ, 8ನೇ, 9ನೇ ಕ್ರಾಸ್, 1ನೇ ಹಂತ ಪಿಐಎ 7ನೇ ಕ್ರಾಸ್, 1ನೇ ಹಂತ ಪಿಯುಎ, ಟಿಸಿಎಸ್ ಕ್ರಾಸ್ ರಸ್ತೆ ಬಳಿ, ಇಸ್ರೋ 1ನೇ, 2ನೇ ಕ್ರಾಸ್, 1ನೇ ಹಂತದ ಪಿಐಎ ಏರಿಯಾ ಮತ್ತು ಯಶ್ವತ್ಥಪುರ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು”.
ನೆಲಗೇದರನಹಳ್ಲಿ ಉಪಕೇಂದ್ರ: ದಿನಾಂಕ: 21.12.2024 (ಶನಿವಾರ) ರಂದು ಬೆಳಗ್ಗೆ 10 ರಿಂದ ಸಂಜೆ 5:30 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
“ನೆಲಗೇದರನಹಳ್ಳಿ, ಹೆಚ್ ಎಂಟಿ ಲೇಔಟ್, ಶಿವಪುರ ಟಿ ಲೇಔಟ್, ಗೃಹಲಕ್ಷ್ಮಿ ಲೇಔಟ್, ಶಿವಪುರ ಬೆಳ್ಮಾರ್ ಲೇಔಟ್, ವಿನಾಯಕನಗರ, 8ನೇ ಮೈಲ್ ರಸ್ತೆ, ಜಾಲಹಳ್ಳಿ ಕ್ರಾಸ್, ಶೋಭಾ ಅಪಾರ್ಟ್ ಮೇಂಟ್, ಅಮರಾವತಿ ಲೇಔಟ್, ಕರ್ನಾಟಕ ಆಂಟಿಬಯೋಟಿಕ್ಸ್ ಪ್ರೈವೆಟ್ ಲಿಮಿಟೆಡ್, ಕೆಮ್ಮಪ್ಪಯ್ಯ ಗಾರ್ಡನ್ ನಗರ,ಕೆಮ್ಮಪ್ಪಯ್ಯ ಟೈಪ್ ತಿಗಳರಪಾಳ್ಯ ಮುಖ್ಯ ರಸ್ತೆ, ಪರ್ಲ್ ರಸ್ತೆ, ಮಾರುತಿ ಕೈಗಾರಿಕಾ ಎಸ್ಟೇಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು”.