ಬೆಂಗಳೂರು: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ 66/11ಕೆವಿ ವೃಷಭಾವತಿ ಉಪಕೇಂದ್ರದಲ್ಲಿನ ಈ ಕೆಳಕಂಡ ಪ್ರದೇಶಗಳಲ್ಲಿ ದಿನಾಂಕ: 21.12.2024 (ಶನಿವಾರ) ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
“ಮೈಸೂರು ರಸ್ತೆ ಆರ್.ವಿ ಇಂಜಿನಿಯರಿಂಗ್ ಕಾಲೇಜು ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಬಿ.ಡಿ.ಎ ಇಂದ್ರಪ್ರಸ್ತ, ಮೆಡಾ ಗ್ರೀನ್, ಎಂ.ಬಿ.ಆರ್ ಶಾಂಗ್ರೀಲಾ, ಬಿ.ಡಿ.ಎ ವಲಗೇರಹಳ್ಳಿಯ ಎಲ್ಲಾ ಬ್ಲಾಕ್ ಗಳು, ಕೆಂಗೇರಿ, ಹರ್ಷ ಲೇ ಔಟ್, ಹೇಬಿಟೆಟ್ ಅಪಾರ್ಟ್ ಮೆಂಟ್, ಐರಾವತ ಹೋಟೆಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಕೆಂಗೇರಿ ಮೇಗಳ ಬೀದಿ ಪ್ರದೇಶ, ಅನಗಾಡಿ ಬಿಡು ಪ್ರದೇಶ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು”.