ವಿಮಾನದಲ್ಲಿ ತಾಂತ್ರಿಕ ದೋಷ; ಮೋದಿ ಪ್ರಯಣ ವಿಳಂಬ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಜಾರ್ಖಂಡ್‌ ನಿಂದ ಪ್ರಯಾಣಿಸಬೇಕಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದರಿಂದ ಅವರ ಪ್ರಯಾಣ ಸುಮಾರು ಎರಡು ಗಂಟೆ ತಡವಾಗಿದೆ ಎಂದು ತಿಳಿದು ಬಂದಿದೆ.

ಪ್ರಧಾನಿ ಮೋದಿ ಅವರು ಪ್ರಯಾಣಿಸಬೇಕಿದ್ದ ಭಾರತೀಯ ವಾಯುಪಡೆಯ ವಿಮಾನ ದಿಯೋಘರ್‌ ವಿಮಾನ ನಿಲ್ದಾಣದಲ್ಲಿ ಈ ದೋಷ ಕಂಡು ಬಂದಿದ್ದರಿಂದ ವಿಳಂಬವಾಗಿದೆ. ನಂತರ ಅವರು ಮತ್ತೊಂದು ವಿಶೇಷ ವಿಮಾನದಲ್ಲಿ ದೆಹಲಿಗೆ  ಪ್ರಯಾಣಿಸಿದರು ಎಂದು ಅವರ ಕಚೇರಿ ತಿಳಿಸಿದೆ.

ಅವರು ಬಿಹಾರದ ಜಮೂಯಿ ಎಂಬಲ್ಲಿ ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಬೃಹತ್‌ ಸಮಾರಂಭವೊಂದರಲ್ಲಿ ಭಾಗವಹಿಸಿ ಮಾತನಾಡಿದ್ದರು. ನಂತರ ಅವರು ದೆಹಲಿಗೆ ಹಿಂತಿರುಗಲು ದಿಯೋಘರ್‌ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.

More articles

Latest article

Most read