ಕಾಂಗ್ರೆಸ್ ದ್ವೇಷ ಹರಡುವ ಕಾರ್ಖಾನೆ: ಪ್ರಧಾನಿ ಮೋದಿ

Most read

ಕಾಂಗ್ರೆಸ್ ಪಕ್ಷವು ಬೇಜವಾಬ್ದಾರಿ ಧೋರಣೆ ಹೊಂದಿರೋದು ಮಾತ್ರವಲ್ಲ ದ್ವೇಷವನ್ನು ಹರಡುವ ಕಾರ್ಖಾನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಮಹಾರಾಷ್ಟ್ರ ರಾಜ್ಯದಲ್ಲಿ ಸುಮಾರು 7,600 ಕೋಟಿ ರೂ. ಮೌಲ್ಯದ ವಿವಿಧ ಅಭಿವೃದ್ದಿ ಯೋಜನೆಗಳನ್ನು ಉದ್ಘಾಟಿಸಿ ವರ್ಚ್ಯುವಲ್ ಮೂಲಕ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ಪಕ್ಷವು ಹಿಂದೂಗಳನ್ನು ವಿಭಜಿಸುತ್ತಿರೋದು ಮಾತ್ರವಲ್ಲ, ವಿವಿಧ ಸಮುದಾಯಗಳ ನಡುವೆ ಪ್ರತ್ಯೇಕತೆಯ ವಿಷ ಬೀಜ ಬಿತ್ತುತ್ತಿದೆ ಎಂದು ಆರೋಪ ಮಾಡಿದ್ದಾರೆ.

ಹರ್ಯಾಣ ರಾಜ್ಯದಲ್ಲಿ ಬಿಜೆಪಿ ಗೆಲುವು ದೇಶದ ಜನರ ಮನಸ್ಥಿತಿಯನ್ನು ಬಿಂಬಿಸುತ್ತದೆ‌ ನಮ್ಮ ಸರ್ಕಾರ ನೀತಿ ನಿರೂಪಣೆಗಳ ಮೇಲೆ ಜನರಿಗೆ ಇರುವ ನಂಬಿಕೆಯನ್ನು ಈ ಫಲಿತಾಂಶ ನಿರೂಪಿಸುತ್ತಿದೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ಇಡೀ ವ್ಯವಸ್ಥೆಯು ಹರ್ಯಾಣ ರಾಜ್ಯದಲ್ಲಿ ಜನರನ್ನು ದಾರಿ ತಪ್ಪಿಸಲು, ಸುಳ್ಳು ಮಾಹಿತಿ ಹರಡಲು ಬಳಸಿಕೊಂಡಿತು. ದಲಿತರ ಮನದಲ್ಲಿ ಸುಳ್ಳು ಬಿತ್ತಲು ಕಾಂಗ್ರೆಸ್ ಯತ್ನಿಸಿತು ಎಂದು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಗೆ ದಿನಗಣನೆ ಆರಂಭವಾಗಿರುವ ಹೊತ್ತಲ್ಲೇ ಈ ಭಾಷಣ ಮಾಡಿದ್ದಾರೆ.

ಕಾಂಗ್ರೆಸ್ ಪಕ್ಷವು ಯುವಕರು ಹಾಗೂ ರೈತರಲ್ಲೂ ಹಲವು ತಪ್ಪು ಮಾಹಿತಿ ಹರಡಿತ್ತು. ಆದರೆ, ಬಿಜೆಪಿಯ ಸಾಧನೆಗಳು ಹಾಗೂ ಅಭಿವೃದ್ದಿ ಪರವಾದ ನಿಲುವು ಮತದಾರರನ್ನು ಮತ್ತೆ ಆಕರ್ಷಿಸಿತು ಎಂದು ಹೇಳಿದ್ದಾರೆ.

More articles

Latest article