ಬೆಂಗಳೂರು; ಬಿಬಿಎಂಪಿಯ 110 ಹಳ್ಳಿಯ ವ್ಯಾಪ್ತಿಗೆ ಕಾವೇರಿ ಕುಡಿಯುವ ನೀರು ಸರಬರಾಜು ಮಾಡುವ ಸಲುವಾಗಿ ಜಿ.ಕೆ.ವಿ.ಕೆ ಆವರಣದಲ್ಲಿ ಜಲರೇಚಕ ಯಂತ್ರಗಾರದಿಂದ ಅಮೃತ್ ಕೊಳವೆ ಮಾರ್ಗಕ್ಕೆ ಜೋಡಣೆ ಕೆಲಸಗಳನ್ನು ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಅ.19ರಂದು ಬೆಳಗ್ಗೆ 9ರಿಂದ ಸಂಜೆ 7 ರವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ಕಾವೇರಿ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ಜಲಮಂಡಳಿ ತಿಳಿಸಿದೆ.
ಕಾವೇರಿ ಕುಡಿಯುವ ನೀರಿನ ಸರಬರಾಜು ವ್ಯತ್ಯಯವಾಗಲಿರುವ ಪ್ರದೇಶಗಳು: ರಾಜು ಕಾಲೋನಿ, ಸರ್ವೋದಯ ನಗರ, ಇಬ್ರಾಯಿಂ ಸ್ಟ್ರೀಟ್-1 ರಿಂದ 9 ನೇ ರಸ್ತೆ, ನೋಬೆಲ್ ಸ್ಕೂಲ್ -1 ಮತ್ತು 2 ನೇ ಅಡ್ಡ ರಸ್ತೆ, ನೂರ್ ಲೇಔಟ್, ಶಾಂಪುರ ರೈಲ್ವೇ ಗೇಟ್-1 ಮತ್ತು 2 ನೇ ಅಡ್ಡ ರಸ್ತೆ, ವೈಯಾಲಿಕಾವಲ್ ಲೇಔಟ್-1 ರಿಂದ 9 ನೇ ಮುಖ್ಯ ರಸ್ತೆ, ಸಂದ್ಯಗಪ್ಪ ಲೇಔಟ್ -1 ರಿಂದ 3ನೇ ಅಡ್ಡ ರಸ್ತೆ, ವೀರಣ್ಣ ಪಾಳ್ಯ, ನಾರಾಯಣಸ್ವಾಮಿ ಲೇಔಟ್, ರೈಲ್ವೇ ಗೇಟ್, ವೈಯಾಲಿಕಾವಲ್ ಲೇಔಟ್-10 ರಿಂದ 16 ನೇ ಅಡ್ಡ ರಸ್ತೆ, ಪ್ರಕೃತಿ ಲೇಔಟ್ , ಗುಂಡುತೋಪು, ಆಯಿಲ್ ಮಿಲ್ ರಸ್ತೆ (1 ರಿಂದ 15 ನೇ ಅಡ್ಡ ರಸ್ತೆ ಕೆಳಭಾಗ )16ರಿಂದ 18 ನೇ ಅಡ್ಡ ರಸ್ತೆ (1 ರಿಂದ 15 ನೆ ಅಡ್ಡ ರಸ್ತೆ ಮೇಲ್ಬಾಗ) 3ನೇ ಬ್ಲಾಕ್ ಸರ್ವೀಸ್ ರಸ್ತೆ, ಹೆಚ್.ಆರ್.ಬಿ.ಅರ್ ಲೇಔಟ್, ಆರ್.ಎಸ್ ಪಾಳ್ಯ, ಸದಾಶಿವ ದೇವಸ್ಥಾನ ರಸ್ತೆ, ಸತ್ಯ ಮೂರ್ತಿ ರಸ್ತೆ, ಆಯಿಲ್ ಮಿಲ್ ರಸ್ತೆ, ಕೆ.ಹೆಚ್.ಬಿ ಕ್ವಾಟ್ರರ್ಸ್, ಗುರುಮೂರ್ತಿ ರಸ್ತೆ, ಮತ್ತು ಸುತ್ತಮುತ್ತಲಿನ ಪ್ರದೇಶಗಳು.
ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸಲು ಹಾಗೂ ಅಗತ್ಯವಿರುವ ನೀರನ್ನು ಶೇಖರಿಸಿಟ್ಟುಕೊಳ್ಳುವಂತೆ ಜಲಮಂಡಳಿ ಅಧ್ಯಕ್ಷರಾದ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ತಿಳಿಸಿದ್ದಾರೆ.