Sunday, September 8, 2024

ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕುರಿತು ಫೋನ್ ಪೇ ಸಿಇಒ ಕಿರಿಕ್: PhonePe uninstall ಮಾಡ್ತಿದ್ದಾರೆ ನಾಡಿನ ಜನ

Most read

ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕುರಿತಂತೆ ರಾಜ್ಯ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ಕೋಟಾ ಮಸೂದೆಯನ್ನು ಟೀಕಿಸಿರುವ ಫೋನ್ ಪೇ ಸಿಇಒ ಸಮೀರ್ ನಿಗಮ್ ವಿರುದ್ದ ಈಗ ಕನ್ನಡಪರ ಸಂಘಟನೆಗಳು Phonepe ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, #Boycott ಅಭಿಯಾನ ಆರಂಭಿಸಿವೆ. ಈ ಅಭಿಯಾನಕ್ಕೆ ಕನ್ನಡಿಗರು ಸಹ ಸಹಮತ ನೀಡಿದ್ದು ಆಪ್ ಅನ್ನು uninstall ಮಾಡುತ್ತಿದ್ದಾರೆ.

ಖಾಸಗಿ ಕಂಪನಿಗಳಲ್ಲಿ ಎಲ್ಲಾ ನಿರ್ವಹಣಾ ಉದ್ಯೋಗಗಳಲ್ಲಿ ಶೇ. 50 ಮತ್ತು ಎಲ್ಲಾ ನಿರ್ವಹಣೆಯೇತರ ಉದ್ಯೋಗಗಳಲ್ಲಿ ಶೇ ನ70 ಸ್ಥಳೀಯರಿಗೆ ಮೀಸಲಿಡಲು ವಿರೋಧ ಮಾಡಿರುವ ಫೋನ್ ಪೇ ವಿರುದ್ಧ Boycottphonepay ಅಭಿಯಾನ ಶುರುವಾಗಿದ್ದು, ಕರ್ನಾಟಕದ ಜನರು ಕೂಡ ಫೋಲ್ ಪೇ ಆಫ್ ಅನ್ನು ಅನ್ಇನ್ಸ್ಟಾಲ್ ಮಾಡುವ ಮೂಲಕ ಅಭಿಯಾನಕ್ಕೆ ವ್ಯಾಪಾರ ಬೆಂಬಲ ನೀಡುತ್ತಿದ್ದಾರೆ.

ಈ ನಾಡಿನ ಮಕ್ಕಳಿಗೆ ಉದ್ಯೋಗ ಖಾತ್ರಿಗೆ ಹಗಲಿರುಳು ಶ್ರಮಿಸುತ್ತಿರುವ ಕನ್ನಡಿಗರಿಗೆ ಅಪಮಾನ ಮಾಡಿರುವ ಸಮೀರ್ ಅವರ ಫೋನ್ ಪೇ ಅಪ್ಲಿಕೇಷನ್ ಕನ್ನಡಿಗರು ಬಳಸಬೇಡಿ ಎಂದು ಕನ್ನಡ ಪರ ಸಂಘಟನೆಗಳು ಕರೆ ನೀಡಲಾಗಿದೆ. ಇದರೊಂದಿಗೆ ಫೋನ್ ಪೇಗೆ ಒಂದು ಸ್ಟಾರ್ ರೇಟಿಂಗ್ ನೀಡಿ uninstall ಮಾಡಲು ಕರೆಕೊಟ್ಟಿದ್ದು. ಈಗ ಕನ್ನಡಿಗರು ಫೋನ್ ಪೇ uninstall ಮಾಡುತ್ತಿರುವ ಸ್ಕ್ರೀನ್ ಶಾಟ್ಗಳನ್ನು ಸಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಆಕ್ರೋಶ ವ್ಯಕ್ತಪಿಡಿಸುತ್ತಿದ್ದಾರೆ.

ಈ ಕುರಿತು ಮಾತನಾಡಿರುವ ಕರವೇ ಅಧ್ಯಕ್ಷ ನಾರಾಯಣಗೌಡ, ಕನ್ನಡಿಗರ ಉದ್ಯೋಗ ಮೀಸಲಾತಿಗೆ ವಿರೋಧ ಮಾಡಿರುವ ಸಮೀರ್ ಗೆ ಪಾಠ ಕಲಿಸೋಣ ಅದೇಗೆ ಇವರು ನಾಡಿನಲ್ಲಿ ಉದ್ಯಮ ಮಾಡ್ತಾರೆ ಎಂದು. ನಮ್ಮ ನೆಲದಲ್ಲಿ ನಮ್ಮ ಮಕ್ಕಳಿಗೆ ಉದ್ಯೋಗ ಕೊಡಿ ಎಂದು ಕೇಳಿದ್ರೆ ತಪ್ಪು ಎನ್ನುವ ಸಮೀಸ್ ಮಾತು ಸರಿಯಲ್ಲ. ಕರವೇ ಇದೀಗ ನಾಡಿನ ಜನರಿಗೆ ಕರೆ ಕೊಟ್ಟಿದೆ. ಇವರಿಗೆ ಬುದ್ದಿ ಕಲಿಸಲು ಫೋನ್ ಪೇ ಅನ್ನು ಮೊಬೈಲ್ ನಿಂದ ತೆಗೆರದು ಹಾಕಿ ಎಂದು ಕರೆ ನೀಡಿದ್ದಾರೆ.

ಈ ಅಭಿಯಾನಕ್ಕೆ ಕನ್ನಡ ಚಿತ್ರರಂಗದ ಸ್ಟಾರ್ ಡೈರೆಕ್ಟರ್ ಸಂತೋಷ್ ಆನಂದ್ ರಾಮ್ ಕೂಡ ಕೈ ಜೋಡಿಸಿದ್ದು, ಕನ್ನಡಿಗರ ಉದ್ಯೋಗ ಮೀಸಲಾತಿ ಒಪ್ಪದ ಫೋನ್ ಪೇ ನಮಗ್ಯಾಕೆ ಎಂದು ಸಂದೇಶ ನೀಡಿ ಆಪ್ ಡಿಲೀಟ್ ಮಾಡಿರುವ ಪೋಟೋವನ್ನು ತಮ್ಮ ಇನ್ಟಾಗ್ರಾಂ ಖಾತೆ ಸ್ಟೋರಿಗೆ ಹಾಕಿಕೊಂಡಿದ್ದಾರೆ ಇದನ್ನು ಅಭಿಮಾನಿಗಳು ಶೇರ್ ಮಾಡಿಕೊಂಡಿದ್ದಾರೆ.

ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಾಯ್ದೆಯ ವಿಚಾರವಾಗಿ ಅಪಸ್ವರ ಎತ್ತಿರುವ ನಾಡದ್ರೋಹಿ ಫೋನ್ ಪೆ ಮಾಲಿಕ ಸಮೀರ್ ನಿಗಮ ಗೇ ಕನ್ನಡಿಗರು ಸರಿಯಾಗಿ ಪಾಠ ಕಲಿಸೋಣ ಎಲ್ಲ ಕನ್ನಡಿಗರು ಈ ಕೂಡಲೇ ಫೋನ್ ಪೇಯನ್ನು ನಿಷ್ಕ್ರಿಯೆಗೊಳಿಸಿ ಎಂದು ಕರವೇ ಕರೆ ನೀಡಿದೆ.

ಮನಾನು ಯಾವಾಗಲು ಸ್ವದೇಶಿ ವಸ್ತುಗಳನ್ನು ಜನರಿಗೆ ಬಳಸುವಂತೆ ಹೇಳುತ್ತೇನೆ. ಆದರೆ ಫೋನ್ ಪೇ ಬೆಳೆಯಲು ನಮ್ಮ ಕರ್ನಾಟಕದ್ದೇ ಮೇಲುಗೈ. ನೀವು ಕಂಪನಿ ಆರಂಭಿಸಲು ನಮ್ಮ ಜಾಗ ಬೇಕು, ಹಣ ಗಳಿಸಲು ನಮ್ಮ ಜಾಗ ಬೇಕು ಆದರೆ ಕೆಲಸಕ್ಕೆ ನಮ್ಮ ಕನ್ನಡಿಗರು ಬೇಡ ಎಂಧರೆ ನೀವು ನಮಗೆ ಬೇಡ ಗುಡ್ ಬೈ ಎಂದು ಎಂಡಿ ಹಿಲಿಯಾಸ್ ಎಂಬುವವರು ಆಪ್ ಡಿಲೀಟ್ ಮಾಡಿದ್ದಾರೆ.

ಮೊದಲು ಫೋನ್ ಪೇ ಅಪ್ಲಿಕೇಷನ್ ಅಲ್ಲಿ ಅಕೌಂಟ್ ಡಿ ಆಕ್ಟಿವೇಟ್ ಮಾಡಿ ಆಮೇಲೆ ಪ್ಲೇ ಸ್ಟೋರ್ ಅಲ್ಲಿ 1* ರೇಟಿಂಗ್ ಕೊಟ್ಟು ಅನ್ ಇನ್ಸ್ಟಾಲ್ ಮಾಡಿ ಎಂದು ಮನು ಸಿಆರ್ ಎಂಬುವವರು ಕರೆ ನೀಡಿದ್ದಾರೆ.

ನಾನು ನನ್ನ ಮೊಬೈಲ್ ಇಂದ @PhonePe ಕಿತ್ತು ಹಾಕಿದೆ ಈಗ ನಿಮ್ಮ ಸರದಿ ಎಂದು ಗುರುದೇವ್ ನಾರಾಯಣಕುಮಾರ್ ಟ್ವೀಟ್ ಮಾಡಿದ್ದಾರೆ.

‘ನನಗೆ ಈಗ 46 ವರ್ಷ ವಯಸ್ಸು. 15ಕ್ಕೂ ಹೆಚ್ಚು ವರ್ಷಗಳ ಕಾಲ ಯಾವುದೇ ರಾಜ್ಯದಲ್ಲಿ ವಾಸಿಸಲಿಲ್ಲ. ನನ್ನ ತಂದೆ ಭಾರತೀಯ ನೌಕಾಪಡೆಯಲ್ಲಿ ಕೆಲಸ ಮಾಡುತ್ತಿದ್ದರು. ದೇಶದಾದ್ಯಂತ ಅವರನ್ನು ವರ್ಗಾವಣೆ ಮಾಡಲಾಗಿದೆ. ಅವರ ಮಕ್ಕಳು ಕರ್ನಾಟಕದಲ್ಲಿ ಉದ್ಯೋಗಕ್ಕೆ ಅರ್ಹರಲ್ಲವೇ? ನಾನು ಕಂಪನಿಗಳನ್ನು ಹುಟ್ಟು ಹಾಕಿದ್ದೇನೆ, ಭಾರತದಾದ್ಯಂತ 25000ಕ್ಕೂ ಅಧಿಕ ಉದ್ಯೋಗಗಳನ್ನು ಸೃಷ್ಟಿಸಿದ್ದೇನೆ. ನನ್ನ ಮಕ್ಕಳು ತಮ್ಮ ತವರು ನಗರದಲ್ಲಿ ಉದ್ಯೋಗಕ್ಕೆ ಅರ್ಹರಲ್ಲವೇ? ಎಂದು ಸಮೀರ್ ನಿಗಮ್ ತಮ್ಮ ಪೋಸ್ಟ್ ನಲ್ಲಿ ಪ್ರಶ್ನಿಸಿದ್ದಾರೆ.

More articles

Latest article