ಹೊಸದಿಲ್ಲಿ: ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ ( EVM ) ಎಣಿಕೆಯ ಜೊತೆಗೆ ವಿವಿ ಪ್ಯಾಟ್ ( VVPAT ) ಚೀಟಿಗಳನ್ನು ಕಡ್ಡಾಯವಾಗಿ ಎಣಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ದೀಪಾಂಕರ್ ದತ್ತ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ತೀರ್ಪು ನೀಡಿದ್ದರು, ಇಬ್ಬರೂ ಒಂದೇ ರೀತಿಯ ಆದರೆ ಪ್ರತ್ಯೇಕ ತೀರ್ಪು ಬರೆದಿದ್ದಾರೆ,
ಅರ್ಜಿಗಳನ್ನು ವಜಾಗೊಳಿಸಿದ್ದರೂ ಸುಪ್ರೀಂ ಕೋರ್ಟ್ ಎರಡು ಪ್ರಮುಖ ನಿರ್ದೇಶನಗಳನ್ನು ಚುನಾವಣಾ ಆಯೋಗಕ್ಕೆ ನೀಡಿದೆ. ಇವಿಎಂ ಒಳಗಿನ ಸಿಂಬಲ್ ಲೋಡಿಂಗ್ ಯೂನಿಟ್ ಗಳನ್ನು ಸೀಲ್ ಮಾಡಿ ಇಡಬೇಕು ಮತ್ತು ಕನಿಷ್ಟ 45 ದಿನಗಳವರೆಗೆ ಹಾಗೇ ಸುರಕ್ಷಿತವಾಗಿ ಇಡಬೇಕು ಎಂದು ಕೋರ್ಟ್ ಹೇಳಿದೆ.
ಅದೇ ರೀತಿ ಇವಿಎಂ ಒಳಗಿನ ಮೈಕ್ರೋಕಂಟ್ರೋಲರ್ ನ Burnt Memory ಯನ್ನು ಫಲಿತಾಂಶ ಘೋಷಣೆಯ ನಂತರ ಸೀರಿಯಲ್ ನಂಬರ್ 2 ಮತ್ತು 3 ನೇ ಅಭ್ಯರ್ಥಿಗಳ ಮನವಿಯ ಮೇರೆಗೆ ಪರಿಶೀಲನೆ ನಡೆಸಲು ಅವಕಾಶ ಕಲ್ಪಿಸಬೇಕು ಎಂದು ಆದೇಶಿಸಲಾಗಿದೆ.
ಶೇ. 100ರಷ್ಟು ವಿವಿ ಪ್ಯಾಟ್ ಗಳ ಎಣಿಕೆಗೆ ಸುಪ್ರೀಂ ಕೋರ್ಟ್ ನಕಾರ ಸೂಚಿಸಿದ್ದರೂ ಮುಂಬರುವ ದಿನಗಳಲ್ಲಿ ವಿವಿ ಪ್ಯಾಟ್ ಸ್ಲಿಪ್ ಗಳನ್ನು ಯಂತ್ರದ ಮೂಲಕ ಎಣಿಸುವ ಸಾಧ್ಯತೆಗಳ ಬಗ್ಗೆ ಪರಿಶೀಲಿಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.