ಪಾಕ್‌ ಮಾಧ್ಯಮಗಳಲ್ಲಿ ಸುಳ್ಳು ಮಾಹಿತಿ: ವರದಿ ಹಂಚಿಕೊಳ್ಳಲು PIB ಮನವಿ

Most read

ಬೆಂಗಳೂರು: ಪಾಕಿಸ್ತಾನದ ಸಾಮಾಜಿಕ ಮಾಧ್ಯಮಗಳು ಸಂಘಟಿತ ತಪ್ಪು ಮಾಹಿತಿ ಹರಡುವಿಕೆಯನ್ನು ಆರಂಭಿಸಿವೆ ಎಂದು ಪ್ರೆಸ ಇನ್‌ ಫರ್ಮೇಷನ್‌ ಬ್ಯೂರೋ (ಪಿಐಬಿ) ದೇಶದ ಜನರಿಗೆ ಎಚ್ಚರಿಕೆ ನೀಡಿದೆ.

ಭಾರತದ ಜನತೆಯಲ್ಲಿ ಅಪನಂಬಿಕೆ, ಆತಂಕ ಮತ್ತು ಗೊಂದಲ ಸೃಷ್ಟಿಸುವುದು ಪಾಕ್‌ ಮಾಧ್ಯಮಗಳ ಉದ್ದೇಶವಾಗಿದೆ. ಈ ರೀತಿ ಉದ್ದೇಶಪೂರ್ವಕವಾಗಿ ಹರಡುತ್ತಿರುವ ತಪ್ಪು ಮಾಹಿತಿಯ ಜಾಲದಲ್ಲಿ ಬೀಳಬೇಡಿ. ಮುಂದಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಗಳು ಇಂತಹ ಸುಳ್ಳು ಮಾಹಿತಿಗಳಿಂದಲೇ ತುಂಬಿಹೋಗುವ ಲಕ್ಷಣಗಳಿವೆ. ಆದ್ದರಿಂದ  ಯಾವುದೇ ಮಾಹಿತಿಯನ್ನು ಕೂಲಂಕಷವಾಗಿ ಪರಿಶೀಲನೆ ನಡೆಸುವುದು ಮುಖ್ಯ ಎಂದು ಪಿಐಬಿ ತಿಳಿಸಿದೆ.

ಒಂದು ವೇಳೆ ಪಾಕ್‌ ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ಕಂಡುಬಂದರೆ, ಅದರಲ್ಲೂ ಸಶಸ್ತ್ರ ಪಡೆ ಕುರಿತಾದ ಅಥವಾ ಸದ್ಯದ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಕುರಿತಂತೆ ಸುಳ್ಳು ಸುದ್ದಿ ಹರಡುವುದು ತಿಳಿದು ಬಂದರೆ  #PIBFactCheckಗೆ ರಿಪೋರ್ಟ್ ಮಾಡುವಂತೆ ಮನವಿ ಮಾಡಿಕೊಂಡಿದೆ.  ಈ ಕೆಳಗಿನ ವಾಟ್ಸ್‌ಆ್ಯಪ್ ಸಂಖ್ಯೆ, ಇಮೇಲ್ ಮೂಲಕ ಮಾಹಿತಿ ಹಂಚಿಕೊಳ್ಳಲು ಕೋರಲಾಗಿದೆ. Email: [email protected] ಅಥವಾ  91 8799711259 ನಂಬರ್‌ ಗೆ ತಿಳಿಸುವಂತೆ ಕೋರಿದೆ.

More articles

Latest article