ಆಫ್ಘಾನಿಸ್ತಾನದ ಮೇಲೆ ವೈಮಾನಿಕ ದಾಳಿ ನಡೆಸಿದ ಪಾಕಿಸ್ತಾನ; ಮೂವರು ಕ್ರಿಕೆಟಿಗರು ಸೇರಿ 8 ಮಂದಿ ಸಾವು

Most read

ಕಾಬೂಲ್‌:  ಆಫ್ಘಾನಿಸ್ತಾನದ ಜತೆಗಿನ  ನಡುವಿನ ಕದನ ವಿರಾಮ ಉಲ್ಲಂಘಿಸಿರುವ ಪಾಕಿಸ್ತಾನ ತಡರಾತ್ರಿ ನಡೆಸಿದ ಮೈಮಾನಿಕ ದಾಳಿಯಲ್ಲಿ ಅಫ್ಘಾನಿಸ್ತಾನದ ಮೂವರು ಕ್ರಿಕೆಟಿಗರು ಹಾಗೂ ಐವರು ನಾಗರಿಕರು ಮೃತಪಟ್ಟಿದ್ದಾರೆ. ಈ ದುರಂತವನ್ನು ಅಫ್ಘಾನಿಸ್ತಾನದ ಕ್ರಿಕೆಟ್‌ ಮಂಡಳಿ ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಹಂಚಿಕೊಂಡಿದ್ದು, ತನ್ನ ಕ್ರಿಕೆಟ್‌ ಆಟಗಾರರು ಮೃತಪಟ್ಟಿರುವುದನ್ನ ಖಚಿತಪಡಿಸಿದೆ.  ಪಾಕ್‌ ದಾಳಿಗೆ ಮೃತಪಟ್ಟ ಕ್ರಿಕೆಟಿಗರನ್ನು ಕಬೀ‌ರ್, ಸಿಬ್ಬತುಲ್ಲಾ ಮತ್ತು ಹರೂನ್ ಎಂದು ಗುರುತಿಸಲಾಗಿದೆ.

ಈ ದುರಂತದ ನಂತರ  ಅಫ್ಘಾನಿಸ್ತಾನವು ಪಾಕಿಸ್ತಾನದೊಂದಿಗೆ ನವೆಂಬರ್‌ ನಲ್ಲಿ ನಿಗದಿಯಾಗಿದ್ದ ಮೂರು ರಾಷ್ಟ್ರಗಳ ಟಿ-20 ಸರಣಿಯನ್ನೇ ರದ್ದುಗೊಳಿಸಿದೆ.

ಇತರ 7 ಮಂದಿ ನಾಗರೀಕರು ಗಾಯಗೊಂಡಿದ್ದಾರೆ. ಸೌಹಾರ್ದ ಪಂದ್ಯದಲ್ಲಿ ಭಾಗವಹಿಸಲು ಅಫ್ಘಾನ್‌ ಕ್ಲಬ್‌ ಮಟ್ಟದ ಯುವ ಆಟಗಾರರು ಪಾಕಿಸ್ತಾನ ಗಡಿಯಲ್ಲಿರುವ ಪೂರ್ವ ಪಕ್ತಿಕಾ ಪ್ರಾಂತ್ಯದ ಉರ್ಗುನ್‌ ನಿಂದ ಶರಾನಾಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ದಾಳಿ ನಡೆದಿದ್ದು, ಮೂವರು ಕ್ರಿಕೆಟಿಗರು ಹಾಗೂ ಇನ್ನೂ ಕೆಲವರು ಗಾಯಗೊಂಡಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದೆ.

ಪಾಕ್‌ ನ  ದಾಳಿ ವಿರುದ್ಧ ಅಫ್ಘಾನಿಸ್ತಾನ ಕ್ರಿಕೆಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕಿದ್ದಾರೆ.


ಪಾಕಿಸ್ತಾನದ ವಾಯುದಾಳಿಯನ್ನು ಅಫ್ಘನ್‌ ಖ್ಯಾತ ಕ್ರಿಕೆಟ್‌ ಆಟಗಾರ ರಶೀದ್‌ ಖಾನ್‌ ತೀವ್ರವಾಗಿ ಖಂಡಿಸಿದ್ದು, ಆಟಗಾರರು ಮತ್ತು ನಾಗರಿಕರ ಸಾವು ನನಗೆ ತೀವ್ರ ದುಃಖ ಉಂಟುಮಾಡಿದೆ.  ಜಾಗತಿಕ ಮಟ್ಟದಲ್ಲಿ ತಮ್ಮ ರಾಷ್ಟ್ರವನ್ನ ಪ್ರತಿನಿಧಿಸುವ ಕನಸು ಕಂಡಿದ್ದ ಮಹತ್ವಾಕಾಂಕ್ಷಿ ಯುವ ಕ್ರಿಕೆಟಿಗರ ಪ್ರಾಣವನ್ನು ಬಲಿ ತೆಗೆದುಕೊಂಡಿರುವುದು ಖಂಡನೀಯ. ಇದು ಪಾಕಿಸ್ತಾನದ ಅನೈತಿಕ ಮತ್ತು ಅನಾಗರಿಕ ದಾಳಿಗೆ ದ್ಯೋತಕವಾಗಿದೆ.  ಈ ನಿಟ್ಟಿನಲ್ಲಿ ಪಾಕಿಸ್ತಾನ ವಿರುದ್ಧದ ಮುಂಬರುವ ಪಂದ್ಯಗಳನ್ನು ರದ್ದುಗೊಳಿಸಿರುವ ಎಸಿಬಿ ನಿರ್ಧಾರವನ್ನ ನಾನು ಸ್ವಾಗತಿಸುತ್ತೇನೆ ಎಂದಿದ್ದಾರೆ.

ಅಫ್ಘಾನಿಸ್ತಾನ  ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರು ಭಾರತಕ್ಕೆ ಭೇಟಿ ನೀಡಿದ ಬೆನ್ನಲ್ಲೇ ಪಾಕಿಸ್ತಾನ ಕಾಬೂಲ್ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ಈ ದಾಳಿಗೆ ಪ್ರತಿಯಾಗಿ ಅಫ್ಘಾನಿಸ್ತಾನ ಡುರಾಂಡ್ ಲೈನ್ ಬಾರ್ಡರ್‌ ನಲ್ಲಿ 12 ಪಾಕಿಸ್ತಾನ ಸೈನಿಕರನ್ನು ಬಲಿ ತೆಗೆದುಕೊಂಡಿತ್ತು. ಇದೀಗ ಪಾಕ್ ಸೇನೆಯು ಗಡಿ ಭಾಗದಲ್ಲಿ ದಾಳಿ ನಡೆಸಿ ಅಫ್ಘಾನಿಸ್ತಾನದ ಮೂವರು ಕ್ರಿಕೆಟಿಗರನ್ನು ಹತ್ಯೆ ಮಾಡಿದೆ.

ಈ ಮಧ್ಯೆ ಪಾಕಿಸ್ತಾನದಿಂದ 14 ಲಕ್ಷಕ್ಕೂ ಹೆಚ್ಚಿನ ಆಫ್ಘನ್ ನಿರಾಶ್ರಿತರನ್ನು ಹಿಂದಕ್ಕೆ ಕಳುಹಿಸಲಾಗಿದೆ ಎಂದು ಪಾಕ್‌ ಹೇಳಿಕೊಂಡಿದೆ. ಇನ್ನೂ ಪಾಕ್‌ ನಲ್ಲಿ ಉಳಿದಿಕೊಂಡಿರುವ ನಿರಾಶ್ರಿತರನ್ನೂ ಆಫ್ಘನ್‌ ಗೆ ಕಳುಹಿಸಲಾಗುವುದು ಎಂದು ತಿಳಿಸಿದೆ.

More articles

Latest article