ಪಾಕ್‌ ಪರ ಬೇಹುಗಾರಿಕೆ; ಮತ್ತೊಬ್ಬ ಯೂಟ್ಯೂಬರ್‌ ಪಂಜಾಬ್‌ ನ ಜಸ್ಬೀರ್ ಸಿಂಗ್ ಬಂಧನ

ಚಂಡೀಗಢ:‌ ಪಾಕಿಸ್ತಾನ ಬೆಂಬಲಿತ ಉಗ್ರರ ವಿರುದ್ಧ ʼಆಪರೇಷನ್ ಸಿಂಧೂರ್ʼ ಕಾರ್ಯಾಚರಣೆ ನಡೆಸಿದ ನಂತರ ಭಾರತದಲ್ಲಿ ಪಾಕಿಸ್ತಾನ ಪರ ಗೂಢಚಾರಿಕೆ ನಡೆಸುತ್ತಿರುವವರ ಬಂಧನ ಮುಂದುವರೆದಿದೆ. ಈಗಾಗಲೇ ಹಲವಾರು ಪಾಕ್‌ ಪರ ಬೇಹುಗಾರಿಕೆ ನಡೆಸುತ್ತಿದ್ದವರನ್ನು ಬಂದಿಸಲಾಗಿದೆ. ಇದೇ ಆರೋಪದ ಮೇಲೆ ಇದೀಗ ಪಂಜಾಬ್‌ ನ ಮತ್ತೊಬ್ಬ ಯೂಟ್ಯೂಬರ್‌ ವೊಬ್ಬರನ್ನು ಬಂಧಿಸಲಾಗಿದೆ.

ಪಾಕ್‌ ಪರವಾಗಿ ಬೇಹುಗಾರಿಕೆ ಆರೋಪದ ಮೇಲೆ ಈ ಹಿಂದೆ ಹರಿಯಾಣ ಮೂಲಕ ಯೂ ಟ್ಯೂಬರ್ ಜ್ಯೋತಿ ಮಲ್ಹೋತ್ರಾ ಅವರನ್ನು ಬಂಧಿಸಲಾಗಿದೆ. ಇವರ ಜತೆ ಸಂಪರ್ಕದಲ್ಲಿದ್ದ ಹಿನ್ನೆಲೆಯಲ್ಲಿ ಇದೀಗ ಪಂಜಾಬ್ ನ ರೋಪರ್ ಜಿಲ್ಲೆಯ ರೂಪ್‌ ನಗರದಲ್ಲಿರುವ ಮಹ್ಲಾನ್ ಗ್ರಾಮದ ನಿವಾಸಿ ಜಸ್ಬೀರ್ ಸಿಂಗ್ ಅವರನ್ನು ಬಂಧಿಸಲಾಗಿದೆ.

ಜಸ್ಬೀರ್ ಸಿಂಗ್ ಸಿಂಗ್ “ಜಾನ್ ಮಹಲ್” ಎಂಬ ಯೂ ಟ್ಯೂಬ್ ಚಾನೆಲ್ ನಡೆಸುತ್ತಿದ್ದು, ಸಾಕಷ್ಟು ಜನಪ್ರಿಯರಾಗಿದ್ದಾರೆ. ಪಾಕಿಸ್ತಾನದ ಐ ಎಸ್‌ ಐಗೆ ಗಡಿಭಾಗದಲ್ಲಿನ ಭಾರತೀಯ ಸೇನೆಯ ಚಲನ ವಲನ ಕುರಿತ ಮಾಹಿತಿಯನ್ನು ರವಾನಿಸುತ್ತಿದ್ದ ಆರೋಪದಡಿಯಲ್ಲಿ ಬಂಧಿಸಲಾಗಿದೆ ಎಂದು ಪೊಳೀಸರು ತಿಳಿಸಿದ್ದಾರೆ.

ಜಸ್ಬೀರ್‌ ಸಿಂಗ್‌ 2020, 2021 ಹಾಗೂ 2024ರಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ. ಈತ ಪಾಕ್‌ ಐಎಸ್‌ ಐ ನ ಏಜೆಂಟ್‌ ಶಾಕೀರ್‌ ಎಂಬಾತನ ಜತೆ ಸಂಪರ್ಕದಲ್ಲಿದ್ದ. ಈತನ ಮೊಬೈಲ್‌ ನಲ್ಲಿ ಪಾಕಿಸ್ತಾನದ ಹಲವಾರು ಮೊಬೈಲ್‌ ನಂಬರ್‌ ಗಳು ಪತ್ತೆಯಾಗಿವೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಯೂಟ್ಯೂಬರ್‌ ಜ್ಯೋತಿ ಮಲ್ಹೋತ್ರಾಅವರನ್ನೂ ಪಾಕ್‌ ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಬಂಧಿಸಲಾಗಿತ್ತು. ಜ್ಯೋತಿ ಜತೆ ಜಸ್ಬೀರ್‌ ಸಿಂಗ್‌ ಕೂಡಾ ದೆಹಲಿಯಲ್ಲಿರುವ ಪಾಕಿಸ್ತಾನದ ರಾಯಭಾರಿ ಕಚೇರಿಯಲ್ಲಿ ನಡೆದ ಪಾಕಿಸ್ತಾನ್‌ ನ್ಯಾಷನಲ್‌ ಡೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎನ್ನುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

More articles

Latest article

Most read