ತುಳುವರ ಭರವಸೆಯ ಅಭ್ಯರ್ಥಿ ಪದ್ಮರಾಜ್ ಆರ್.ಪೂಜಾರಿ

Most read

ಮತದಾನ ಪ್ರಜಾಪ್ರಭುತ್ವದಲ್ಲಿರುವ ಮಹಾ ಹಕ್ಕು: ಆ ಹಕ್ಕನ್ನು ಎಲ್ಲರೂ ಬಳಸುವಂತಾಗಲಿ. ಬಿಲ್ಲವರು ಯಾವುದೇ ಆಸೆ ಆಮಿಷಗಳಿಗೆ, ಬಣ್ಣದ ಮಾತುಗಳಿಗೆ ಮರುಳಾಗದೆ ಸಮರ್ಥ, ದಕ್ಷ ಅಭ್ಯರ್ಥಿಯನ್ನು ಆರಿಸುವ ದೊಡ್ಡ ಜವಾಬ್ದಾರಿಯನ್ನು ಹೊರಬೇಕಾಗಿದೆ ಸುಮಲತಾ, ಮಂಗಳೂರು.

ಲೋಕಸಭಾ ಚುನಾವಣೆ-2024, ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಚುನಾವಣೆಯ ಬಿಸಿ ದಿನದಿಂದ ದಿನಕ್ಕೆ ಏರುತ್ತಿದೆ.  ದೇವರಲ್ಲಿ ಅನನ್ಯ ಭಕ್ತಿ, ನಂಬಿಕೆಯನ್ನು ಹೊಂದಿರುವ, ಮಾನವ ಕುಲದ ಸೇವೆಯೇ ತನ್ನ ಜೀವನದ ಉದ್ದೇಶ ಎಂಬ ಆಶಾಭಾವನೆ ಹೊಂದಿರುವ ಹಾಗೂ ಸದಾ ಹಸನ್ಮುಖಿ, ಹಿರಿಯರ ಮನಸ್ಸಿಗೊಪ್ಪುವ ಕಿರಿಯರನ್ನು ಆಕರ್ಷಿಸುವ ಸರಳ ಸಜ್ಜನಿಕೆಯ ಮಾತು, ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚುವ ಮನಸ್ಸುಳ್ಳ ವ್ಯಕ್ತಿ ಪದ್ಮರಾಜ್ ಆರ್. ಪೂಜಾರಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದಾರೆ. ತನ್ನ ವಕೀಲ ವೃತ್ತಿಯ ಜೊತೆಗೆ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿಯಾಗಿ, ಗುರು ಬೆಳದಿಂಗಳು ಫೌಂಡೇಶನ್‍ನ ಮೂಲಕ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಆದರ್ಶಗಳನ್ನು ಪಾಲಿಸಿಕೊಂಡು ಧಾರ್ಮಿಕ ಕ್ಷೇತ್ರದ ಮೂಲಕ ಸಾಮಾಜಿಕ ಸುಧಾರಣೆಯನ್ನು ಮಾಡುತ್ತಿದ್ದಾರೆ.

ಜನಾರ್ದನ ಪೂಜಾರಿಯವರೊಂದಿಗೆ

ಬಾಲ್ಯದಿಂದಲೇ ಪ್ರತಿಭಾವಂತರಾದ ಪದ್ಮರಾಜ್ ಕಾನೂನು ಪದವೀಧರರಾಗಿದ್ದು 1995 ರಲ್ಲಿ ಕೇಂದ್ರದ ಮಾಜಿ ವಿತ್ತ ಸಚಿವ ಬಿ. ಜನಾರ್ಧನ ಪೂಜಾರಿಯವರಂತಹ ಪ್ರಾಮಾಣಿಕ ರಾಜಕಾರಣಿಯ ಶಿಷ್ಯನಾಗಿ ವಕೀಲ ವೃತ್ತಿ ಆರಂಭಿಸಿ, ತದನಂತರ ಬಲ್ಲಾಳ್‍ಬಾಗ್‍ನಲ್ಲಿ ತನ್ನ ಸ್ವಂತ ಕಚೇರಿ ತೆರೆದು ಕಾನೂನು ಸೇವೆ ಮಾಡುತ್ತಿದ್ದರೆ, ಇವರ ಅಣ್ಣ ಪುರುಷೋತ್ತಮ್ ಎ. ಜೆ, ಆಸ್ಪತ್ರೆಯಲ್ಲಿ ಪ್ರಖ್ಯಾತ ಹೃದಯ ತಜ್ಞರಾಗಿದ್ದಾರೆ. ಪದ್ಮರಾಜ್‍ರವರು ಗುರು ಬೆಳದಿಂಗಳು ಎಂಬ ಸಂಸ್ಥೆಯ ಮೂಲಕ ಶಿಕ್ಷಣ, ಆರೋಗ್ಯ ಮತ್ತು ಆಸಕ್ತಿ ಎಂಬ ಮೂರು ಧ್ಯೇಯಗಳೊಂದಿಗೆ ಯೋಜನೆಗಳನ್ನು ರೂಪಿಸಿ ಬಡಜನರ ಮನಸ್ಸನ್ನು ತನ್ನ ಸೇವೆಯಿಂದ ಗೆದ್ದು ಕೊಂಡಿದ್ದಾರೆ. ಹಲವಾರು ಸಮಾಜಮುಖಿ ಹೋರಾಟಗಳಲ್ಲಿ ಹಾಗೂ ವಿದ್ಯೆ, ಉದ್ಯೋಗ, ಸಂಪರ್ಕ ಎಂಬ ಧ್ಯೇಯದೊಂದಿಗೆ ಸಮಾಜಸೇವೆಯಲ್ಲಿ ತೊಡಗಿಸಿ ಕೊಂಡಿರುವ ರಾಜ್ಯೋತ್ಸವ ಪುರಸ್ಕೃತ ಯುವವಾಹಿನಿಯ ಕೇಂದ್ರ ಸಮಿತಿಯ ಗೌರವ ಸಲಹೆಗಾರರಾಗಿದ್ದಾರೆ. ಹತ್ತು ಹಲವು ಸಂಘ-ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ. ಇವರ ಮುಂದಿನ ಯೋಜನೆಗಳು ಕೂಡಾ ಆಶಾದಾಯಕವಾಗಿದ್ದು, ಯುವ ಜನರಿಗೆ ಉದ್ಯೋಗದ ಸೃಷ್ಟಿಯ ಜೊತೆಗೆ ಹಲವಾರು ಸಮಾಜಮುಖಿ ಕೆಲಸಗಳು ಅನುಷ್ಠಾನ ವಾಗಬೇಕಾದರೆ ನಾಗರಿಕರು ನೀಡುವ ಮತದಾನವೇ ಶ್ರೀ ರಕ್ಷೆಯಾಗುತ್ತದೆ.

ಸುರತ್ಕಲ್‌ ಪ್ರಚಾರ ಸಭೆಯಲ್ಲಿ ಜನರು

ಬದಲಾವಣೆ ಜಗದ ನಿಯಮ. ಯುವ ಜನಾಂಗದ ಮತ ನಿರ್ಣಾಯಕ ಪಾತ್ರವನ್ನು ಒಳಗೊಂಡಿದೆ ಎಂಬುದು ಸತ್ಯ. ನಮ್ಮಲ್ಲಿ ಸಂಘಟಿತ ಶಕ್ತಿಯಿದ್ದರೆ, ಇಚ್ಛಾಶಕ್ತಿ ಇದ್ದು, ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಮನಸ್ಸಿದ್ದರೆ ಎಲ್ಲವೂ ಸಾಧ್ಯ: ಮತದಾನ ಪ್ರಜಾಪ್ರಭುತ್ವದಲ್ಲಿರುವ ಮಹಾ ಹಕ್ಕು: ಆ ಹಕ್ಕನ್ನು ಎಲ್ಲರೂ ಬಳಸುವಂತಾಗಲಿ: ಬಿಲ್ಲವರು ಯಾವುದೇ ಆಸೆ ಆಮಿಷಗಳಿಗೆ, ಬಣ್ಣದ ಮಾತುಗಳಿಗೆ ಮರುಳಾಗದೆ ಸಮರ್ಥ, ದಕ್ಷ ಅಭ್ಯರ್ಥಿಯನ್ನು ಆರಿಸುವ ದೊಡ್ಡ ಜವಾಬ್ದಾರಿಯನ್ನು ಹೊರಬೇಕಾಗಿದೆ.. ಮನವರಿಕೆ, ತಿಳುವಳಿಕೆ ಮತ್ತು ಜವಾಬ್ದಾಯಿಂದ ಮತದಾನವಾದರೆ ಭರವಸೆಗಳನ್ನೆಲ್ಲಾ ಇಡೇರಿಸುವ ಕನಸು ಹೊತ್ತ ಪದ್ಮರಾಜ್ ಇನ್ನಷ್ಟು ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಆಶೀರ್ವದಿಸೋಣ.

ಸುಮಲತಾ, ಮಂಗಳೂರು
ಗೃಹಿಣಿ

ಇದನ್ನೂ ಓದಿ- ಅತ್ಯುತ್ತಮ ಸಂಸದೀಯ ಪಟು ಜಯಪ್ರಕಾಶ್ ಹೆಗ್ಡೆ

More articles

Latest article