Thursday, September 19, 2024

OTTಗೆ ಕಾಲಿಟ್ಟ ರಾಜ್ ಬಿ ಶೆಟ್ಟಿ ನಟನೆಯ “ಟೋಬಿ”

Most read

ಈ ವರ್ಷ ತೆರೆಕಂಡ ಅನೇಕ ಸಿನಿಮಾಗಳಲ್ಲಿ ಪ್ರೇಕ್ಷಕರಿಂದ ಅಪಾರ ಪ್ರಶಂಸೆಗೆ ಗಿಟ್ಟಿಸಿಕೊಂಡಿದ್ದ ಟೋಬಿ ಚಿತ್ರ OTTಗೆ ಕಾಲಿಟ್ಟಿದೆ. ರಾಜ್ ಬಿ ಶೆಟ್ಟಿ ಬರೆದು, ನಟಿಸಿದ ಟೋಬಿ ಮೆಚ್ಚುಗೆಯನ್ನು ಪಡೆದಿತ್ತು.

ಥಿಯೇಟರ್ ನಲ್ಲಿ ಗೆದ್ದ ಟೋಬಿಯನ್ನು ಒಟಿಟಿಯಲ್ಲಿ ರಿಲೀಸ್ ಆಗುತ್ತಿದ್ದು, ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಟೋಬಿ ಚಿತ್ರ ಇದೇ ಡಿಸೆಂಬರ್ 22 ಕ್ಕೆ ಪ್ರಖ್ಯಾತ ಸೋನಿ ಲಿವ್ ಒಟಿಟಿ ಪ್ಲಾಟ್ಪಾರಂ ನಲ್ಲಿ ಬಿಡುಗಡೆಗೊಳ್ಳಲಿದೆ.

ಟೋಬಿ ಚಿತ್ರವನ್ನು ಲೈಟರ್ ಬುದ್ಧ ಫಿಲ್ಮ್ಸ್, ಅಗಸ್ತ್ಯ ಫಿಲ್ಮ್ಸ್, ಕಾಫಿ ಗ್ಯಾಂಗ್ ಸ್ಟುಡಿಯೋಸ್ ಮತ್ತು ಸ್ಮೂತ್ ಸೈಲರ್ಸ್ ಸಿನಿ ಸಂಸ್ಥೆಗಳು ಜಂಟಿಯಾಗಿ ನಿರ್ಮಾಣ ಮಾಡಿದೆ.

ದಯಾನಂದ್ ಟಿಕೆ ಅವರ ಕಥೆ ಇದ್ದು, ರಾಜ್ ಬಿ ಶೆಟ್ಟಿ ಸಂಭಾಷಣೆ ಬರೆದು ನಟಿಸಿದ್ದಾರೆ. ಚಿತ್ರಕ್ಕೆ ಬಾಸಿಲ್ ಅಲ್ಚಾಲಕ್ಕಲ್ ನಿರ್ದೇಶನವಿದ್ದು, ಪ್ರವೀಣ್ ಶ್ರೀಯಾನ್ ಛಾಯಗ್ರಹಣ ಮತ್ತು ಮಿಥುನ್ ಮುಕುಂದನ್ ಸಂಗೀತ ನೀಡಿದ್ದಾರೆ.

ಪುನೀತ್ ರಾಜ್ ಕುಮಾರ್ ಅವರ ಜೇಮ್ಸ್ ನಂತರದಲ್ಲಿ ಇದೇ ಎರಡನೇ ಸಿನಿಮಾ ಸೋನಿ ಲಿವ್ ನಲ್ಲಿ ಕನ್ನಡದ ಸಿನಿಮಾ ತೆರೆಕಾಣುತ್ತಿದೆ.

More articles

Latest article