ಸರ್ವಾಧಿಕಾರದ ದಿನಗಳು ಮುಗಿದಿದ್ದು, ನೂತನ ಲೋಕಸಭೆಯಲ್ಲಿ ಪ್ರತಿಪಕ್ಷಗಳ ಬಲ ವೃದ್ಧಿಯಾಗಲಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.
ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಜನರು ತಮ್ಮ ತೀರ್ಪನ್ನು ನೀಡಿದ್ದಾರೆ ಮತ್ತು ಸಂವಿಧಾನವನ್ನು ಉಳಿಸಲಾಗಿದೆ. ”ಈ ಬಾರಿ ವಿರೋಧ ಪಕ್ಷ ಪ್ರಬಲವಾಗಲಿದೆ. ನಾನು ಸಂಸತ್ತಿನಲ್ಲಿದ್ದಾಗ ನಾವು ದುರ್ಬಲರಾಗಿದ್ದೆವು. ಯಾರೂ ನಮ್ಮ ಮಾತನ್ನು ಕೇಳುತ್ತಿರಲಿಲ್ಲ ಮತ್ತು ಸರ್ವಾಧಿಕಾರವಿತ್ತು.ಆದರೆ ದೇವರಿಗೆ ಧನ್ಯವಾದಗಳು, ಸರ್ವಾಧಿಕಾರವು ಈಗ ಕೊನೆಗೊಂಡಿದೆ ಎಂದು ಅಬ್ದುಲ್ಲಾ ತಿಳಿಸಿದರು.
ಜನರು ಅಧಿಕಾರ ಹೊಂದಿದ್ದಾರೆ ಎಂಬುದನ್ನು ಈ ಲೋಕಸಭಾ ಚುನಾವಣೆಯಲ್ಲಿ ತೋರಿಸಿದ್ದಾರೆ. ಈ ಚುನಾವಣೆಗಳಲ್ಲಿ ಅದು ಸಾಬೀತಾಗಿದೆ. ಇದೊಂದು ದೊಡ್ಡ ಸಾಧನೆ. ಜನರು ಮತ ಚಲಾಯಿಸುವ ಶಕ್ತಿ ಹೊಂದಿದ್ದು, ಯಾರನ್ನು ಬೇಕಾದರೂ ಆಯ್ಕೆ ಮಾಡಬಹುದು ಅಥವಾ ಮಾಡದೇ ಇರಬಹುದು ಎಂದರು.