ಕೋಲಾರ: ಕಳೆದ ನಾಲ್ಕೈದು ದಿನಗಳಿಂದ ಶಾಸಕ ಕೊತ್ತೂರು ಮಂಜುನಾಥ್ ರ ಆಪರೇಷನ್ ಸಿಂಧೂರ ಬಗ್ಗೆ ನಡೆಯುತ್ತಿರುವ ವಿಭಿನ್ನ ಮಾತುಗಳ ಕುರಿತು ಶಾಸಕ ಕೊತ್ತೂರು ಮಂಜುನಾಥ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಕೋಲಾರದಲ್ಲಿ ಸುದ್ಧಿಗಾರರೊಂದಿಗೆ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ಕೊತ್ತೂರು ಮಂಜುನಾಥ್ ನನ್ನ ವಿರುದ್ಧ ಮಾತನಾಡಿದವರ ಬಗ್ಗೆ ಸಮಯ ಬಂದಾಗ ಮಾತನಾಡುತ್ತೇನೆ ಎಂದರಲ್ಲದೇ ನಾನು ಯಾರನ್ನು ನಂಬಿ ಜೀವನ ಮಾಡ್ತಿಲ್ಲ. ನನ್ನನ್ನು ನಂಬಿ ನಾನು ಜೀವನ ಮಾಡ್ತಿದ್ದೇನೆ. ಇರೋದನ್ನ ಇದ್ದಂಗೆ ಮಾತಾಡೋದು ನನ್ನ ಹವ್ಯಾಸ. ಅಲ್ಲದೆ ಮುಜುಗರ ಆಗುವ ರೀತಿ ನಾನು ತಪ್ಪು ಮಾಡಿಲ್ಲ.
ನಾನು ಯಾರತ್ರನು ಸಾಲ ಮಾಡಿಲ್ಲ, ಯಾರ ಮನೆಗೂ ಹೋಗಿಲ್ಲ. ಯಾರ ಹಣವನ್ನೂ ಹೊಡೆದಿಲ್ಲ. ನಮ್ಮ ನಾಯಕರಾದ ರಾಹುಲ್ ಗಾಂಧಿರವರು ಮಾತನಾಡಿದ್ದು ನಾನು ಸಮಯ ಬಂದಾಗ ಪ್ರತಿಕ್ರಿಯಿಸುತ್ತೇನೆ ಎಂದಿದ್ದಾರೆ.