ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಇದರ ಪರಿಣಾಮ ದೇಶಾದ್ಯಂತ ವಿಮಾನ ಹಾಗೂ ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ. ರಾಜಸ್ಥಾನದಲ್ಲಿ 4 ರೈಲುಗಳು ರದ್ದಾಗಿವೆ. ಇದೇ ವೇಳೆ 5 ರೈಲುಗಳು ಹೊರಡುವ ಸಮಯವನ್ನು ಮರು ನಿಗದಿಪಡಿಸಲಾಗಿದೆ. ವಾಯುವ್ಯ ರೈಲ್ವೆ ಶುಕ್ರವಾರ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದು, ವಿಶೇಷವಾಗಿ ರಾಜಸ್ಥಾನದ ಗಡಿ ಪ್ರದೇಶಗಳಲ್ಲಿ ರೈಲು ರದ್ದುಗೊಂಡಿವೆ ಎಂದು ರೈಲ್ವೇ ಇಲಾಖೆ ಮಾಹಿತಿ ಹಂಚಿಕೊಂಡಿದೆ.
ರದ್ದುಗೊಂಡ ರೈಲುಗಳು:
14895 – ಜೋಧ್‌ಪುರ-ಬಾರ್ಮರ್ ಡೆಮು ಎಕ್ಸ್‌ಪ್ರೆಸ್
14896 – ಬಾರ್ಮರ್-ಜೋಧ್‌ಪುರ ಡೆಮು ಎಕ್ಸ್‌ಪ್ರೆಸ್
04880 – ಮುನಾಬಾವೊ ನಿಂದ ಬಾರ್ಮರ್
54881 – ಬಾರ್ಮರ್‌ನಿಂದ ಮುನಾಬಾವೊ
ಗಡಿ ಗ್ರಾಮವಾದ ಮುನಾಬಾವೊಗೆ ಮತ್ತು ಅಲ್ಲಿಂದ ಹೊರಡುವ ರೈಲುಗಳು ಕೂಡಾ ರದ್ದಾಗಿವೆ.
ಜಮ್ಮು, ಪಂಜಾಬ್ ಮತ್ತು ರಾಜಸ್ಥಾನದ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನವು ಡ್ರೋನ್ ಮತ್ತು ಕ್ಷಿಪಣಿ ದಾಳಿಯ ನಂತರ, ಮೇ 8ರ ಗುರುವಾರ ಸಂಜೆಯಿಂದ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ತೀವ್ರಗೊಂಡಿದೆ. ಭಾರತೀಯ ವಾಯು ರಕ್ಷಣಾ ವ್ಯವಸ್ಥೆಯು ಪಾಕಿಸ್ತಾನದ ಕ್ಷಿಪಣಿ ದಾಳಿಯನ್ನು ಯಶಸ್ವಿಯಾಗಿ ತಡೆದಿದೆ. ಆದರೂ ಪಾಕಿಸ್ತಾನ ತನ್ನ ಹಠಮಾರಿ ಧೋರಣೆಯನ್ನು ಮುಂದುವರೆಸಿದೆ.