ಬೆಂಗಳೂರು: ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಅಧಿಕಾರಿಗಳು ಗೊಡೌನ್ ಒಂದರ ಮೇಲೆ ದಾಳಿ ನಡೆಸಿ61.82 ಲಕ್ಷ ರೂ. ಮೌಲ್ಯದ ನಿಷೇಧಿತ ತಂಬಾಕು/ನಿಕೋಟಿನ್ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ.
ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕನಕಪುರ ಮುಖ್ಯ ರಸ್ತೆಯಲ್ಲಿರುವ ಗೊಡೌನ್ ನಲ್ಲಿ ನಿಷೇಧಿತ ತಂಬಾಕು, ನಿಕೋಟಿನ್ ಒಳಗೊಂಡ ಪದಾರ್ಥಗಳನ್ನು ಅಕ್ರಮವಾಗಿ ಸಂಗ್ರಹ ಮಾಡಿಕೊಂಡು ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಪೊಲೀಸರಿಗೆ ಲಭಿಸಿತ್ತು. ಈ ಮಾಹಿತಿ ಆಧರಿಸಿ ಮಹಿಳಾ ಪೊಲೀಸರು ಮೇಲೆ ದಾಳಿ ಮಾಡಿ ಇಬ್ಬರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಅವರ ಬಳಿ ಯಾವುದೇ ಪರವಾನಿಗಿ ಇರಲಿಲ್ಲ ಎನ್ನುವುದು ತಿಳಿದು ಬಂದಿದೆ.
ಗಣೇಶ್ 701 ಟೊಬ್ಯಾಕೊ ಪಾಕೆಟ್ ಗಳಿರುವ 155 ಚೀಲಗಳು, ಕೂಲ್ ಲಿಪ್ ಟೊಬ್ಯಾಕೊ ಇರುವ 160 ಚೀಲಗಳು, ಎಸ್.ಜಿ.ಟಿ-1 ಟೊಬ್ಯಾಕೊ ಇರುವ 60 ಬಾಕ್ಸ್ ಗಳು ಹಾಗೂ ಸ್ವಾಗತ್ ಪಾನ್ ಮಸಾಲಾ ಇರುವ 60 ಬಾಕ್ಸ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ದ್ದುಜೊತೆಗೆ, ತಂಬಾಕು/ನಿಕೋಟಿನ್ ಪದಾರ್ಥಗಳ ಸಾಗಣೆಗೆ ಬಳಸಲಾಗುತ್ತಿದ್ದ ಒಂದು ಗೂಡ್ಸ್ ವಾಹನವನ್ನೂ ವಶಪಡಿಸಿಕೊಳ್ಳಲಾಗಿದೆ.