ಆನ್​ಲೈನ್ ಬೆಟ್ಟಿಂಗ್​; ಒಂದೇ ಕುಟುಂಬದ ಮೂವರು ಆತ್ಮಹತ್ಯೆ

Most read

ಮೈಸೂರು: ಐಪಿಎಲ್​  ಹಾಗೂ ಆನ್​ಲೈನ್ ಬೆಟ್ಟಿಂಗ್​ ದಂಧೆಗೆ ಮೈಸೂರು ತಾಲೂಕಿನ ಹಂಚ್ಯಾ ಗ್ರಾಮದ ಒಂದೇ ಕುಟುಂಬದ ಮೂವರು ಬಲಿಯಾಗಿದ್ದಾರೆ.  ಜೋಬಿ ಆಂಥೋನಿ ಹಾಗೂ ಜೋಷಿ ಆಂಥೋನಿ ಸಹೋದರರು ಹಾಗೂ ಜೋಬಿ ಪತ್ನಿ ಶರ್ಮೀಳಾ ಮೃತರು.

ಆನ್​ಲೈನ್ ಬೆಟ್ಟಿಂಗ್ ಗೆ ಅಪಾರ ಸಾಲ ಮಾಡಲು ನನ್ನ ತಮ್ಮ ಜೋಬಿ ಆಂಥೋನಿ ಮತ್ತು ಆತನ ಪತ್ನಿ ಶರ್ಮಿಳಾ ಆಲಿಯಾಸಿ ಸ್ವಾತಿ ಕಾರಣರಾಗಿದ್ದು, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ವಿಡಿಯೋ ಮಾಡಿ ನಿನ್ನೆ ಸೋಮವಾರ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ., ಜೋಬಿ, ಆತನ ಪತ್ನಿ ಶರ್ಮಿಳಾ ಮೋಸದಿಂದ ಊರ  ತುಂಬ ಸಾಲ ಮಾಡಿ ಮೋಸ ಮಾಡಿದ್ದಾರೆ. ತಮ್ಮ ಹಾಗೂ ಆತನ ಹೆಂಡತಿ ಮೋಸದಿಂದ ನಮ್ಮ ಮತ್ತೊಬ್ಬ ಸಹೋದರಿ ಮೂಲಕವೂ ಸಾಲ ಮಾಡಿಸಿದ್ದಾರೆ. ನನ್ನ ತಂಗಿಗೆ ಗಂಡ ಇಲ್ಲ, ಆಕೆಗೆ ಮೋಸ ಮಾಡಿದ್ದಾರೆ ಎಂದು ಹೇಳಿದ್ದಾನೆ.

ನನ್ನ ಸಾವಿಗೆ ತಮ್ಮ ಜೋಬಿ ಆಂಥೋನಿ ಮತ್ತು ಆತನ ಪತ್ನಿ ಶರ್ಮಿಳಾ ಕಾರಣರಾಗಿದ್ದು, ಅವರಿಗೆ ಶಿಕ್ಷೆ ಕೊಡಿಸಿ ಎಂದು ವಿಡಿಯೋದಲ್ಲಿ ಹೇಳಿ ನೇಣಿಗೆ ಶರಣಾಗಿದ್ದ.

ಸಹೋದರನ  ಸಾವಿನ ವಿಚಾರ ತಿಳಿದು ತಮ್ಮ ಜೋಬಿ ಆಂಥೋನಿ ಹಾಗೂ ಈತನ ಪತ್ನಿ ಶರ್ಮಿಳಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೋಬಿ ಹಾಗೂ ಶರ್ಮಿಳಾ ಐಪಿಎಲ್ ಹಾಗೂ ಆನ್ ಲೈನ್ ಗೇಮ್​ನಲ್ಲಿ ಲಕ್ಷಾಂತರ ಸಾಲ ಮಾಡಿಕೊಂಡಿದ್ದರು. ಇಂದು ಜೋಬಿ ಹಾಗೂ ಶರ್ಮಿಳಾ ವಿಜಯನಗರದ ಕ್ರೀಡಾ ಮೈದಾನದ ಬಳಿ ನೇಣಿಗೆ ಶರಣಾಗಿದ್ದಾರೆ.

More articles

Latest article