ಭೂತಾರಾಧನೆಯ ಮೇಲೆ ಆದಷ್ಟು ಒಳ್ಳೆಯ ಕೆಲಸಗಳು ಭಾರತದ ಯಾವ ಜಾನಪದ ಪ್ರಕಾರಗಳಲ್ಲೂ ಆಗಿಲ್ಲ- ಡಾ. ಪುರುಷೋತ್ತಮ ಬಿಳಿಮಲೆ

ಉಲ್ಲಾಕುಳು : ಆರಾಧನೆ ಅನನ್ಯತೆ ಕೃತಿ ಲೋಕಾರ್ಪಣೆ

ಮಂಗಳೂರು, ಮಾ. 18 : ದಕ್ಷಿಣ ಏಶ್ಯಾದಲ್ಲಿ ಯಾವುದಾದರೊಂದು ಜಾನಪದ ಪ್ರಕಾರದ ಬಗ್ಗೆ ಅತ್ಯದ್ಭುತವಾದ ಕೆಲಸ ಆಗಿದ್ದೇ ಆದರೆ  ಅದು ಆಗಿರುವುದು  ಭೂತಾರಾಧನೆ ಮೇಲೆ. ತುಳುನಾಡಿನ ಭೂತಾರಾಧನೆಯ ಮೇಲೆ ಬಂದಂತಹ ಒಳ್ಳೆಯ ಪುಸ್ತಕಗಳು ಭಾರತದ ಯಾವ ಭಾಷೆಯಲ್ಲೂ ಬಂದಿಲ್ಲ. ಆ ಒಂದು ವಿದ್ವತ್‌ ಪರಂಪರೆಯ ಸಾಕ್ಷಿಯಾಗಿ ಮತ್ತು ಆ ವಿದ್ವತ್‌ ಪರಂಪರೆಯ ಮುಂದುವರಿಕೆಯಾಗಿ ಉಲ್ಲಾಕುಳು ಪುಸ್ತಕ ಇವತ್ತು ಪ್ರಕಟವಾಗಿದೆ  ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ ಹೇಳಿದರು.

ಆದಿ ಕುಕ್ಕೆಯಿಂದ ಕುಂಬ್ಳೆಯ ಅಂತ್ಯ ಪುತ್ತಿಗೆಯವರೆಗೆ ವ್ಯಾಪಿಸಿ ಆರಾಧನೆಯಾಗುತ್ತಿರುವ ಉಲ್ಲಾಕುಳು ಆರಾಧನೆಯನ್ನು ಕೇಂದ್ರೀಕರಿಸಿ ಡಾ. ಪೂವಪ್ಪ  ಕಣಿಯೂರು ನಡೆಸಿದ ಅಧ್ಯಯನ ಗ್ರಂಥ ಉಲ್ಲಾಕುಳು : ಆರಾಧನೆ ಅನನ್ಯತೆ ಕೃತಿ ಬಿಡುಗಡೆ ಮಾಡಿ ಅವರು ಮಾತಾಡುತ್ತಿದ್ದರು.

ಮುಂದುವರೆದು ಓದಿನ ವಿಸ್ತಾರವನ್ನು ಉಳಿಸಿಕೊಳ್ಳುತ್ತಾ. ನಾವು ಬರೆದದ್ದರ ಬಗ್ಗೆ ನಾವೇ ಅಸಮಾಧಾನಗೊಳ್ಳುತ್ತಾ, ವಿರಚನೆಗೊಳ್ಳುತ್ತಾ, ಪರಿಷ್ಕರಿಸಿಕೊಳ್ಳುತ್ತಾ ನಮ್ಮ ಬರವಣಿಗೆಗಳನ್ನು ನಾವೇ ಓದುವ ಹಾಗೆ ಮಾಡುವುದು ; ನಾವು ಬರೆದದ್ದಕ್ಕೆ ನಾವೇ ಪ್ರೇಕ್ಷಕರಾಗುತ್ತಾ, ನಾವೇ ಕಿವಿಗೊಡುತ್ತಾ ಅದನ್ನು ಪರಿಷ್ಕೃತ ಗೊಳಿಸುತ್ತಾ ಅದನ್ನು ಮುಂದಕ್ಕೆ ತೆಗೆದುಕೊಂಡು ಹೋಗುವಂತಹ ಕೆಲಸ ಮಾಡುವ ಅಕಾಡೆಮಿಕ್ ಪ್ರವೃತ್ತಿ ನಮ್ಮೆಲ್ಲರನ್ನು ಎಲ್ಲ ಕಾಲಕ್ಕೂ ಜೀವಂತ ಉಳಿಸಿಕೊಳ್ಳುವ ಒಂದು ಕೆಲಸವಾಗಿದೆ. ಈ ನಿಟ್ಟಿನಲ್ಲಿ ಪೂವಪ್ಪರು 20 ವರ್ಷಗಳ ಕಾಲ ಕಾದು ಆಳವಾದ ಅಧ್ಯಯನ ನಡೆಸಿ ಈ ಸಂಶೋಧನಾ ಗ್ರಂಥವನ್ನು  ಪ್ರಕಟಿಸಿರುವುದು  ಅವರ ಕೆಲಸದ ಮಹತ್ವವನ್ನು ಹೇಳುತ್ತದೆ ಎಂದು ಅಭಿಪ್ರಾಯ ಪಟ್ಟರು.

ಕನ್ನಡದಲ್ಲಿ ಇವತ್ತು ಪುಸ್ತಕ ಪ್ರಕಟವಾಗುವಷ್ಟು ಚೆಂದ ಭಾರತದ ಯಾವ ಭಾಷೆಯಲ್ಲೂ ಆಗುವುದಿಲ್ಲ. ಬಹಳ ಸುಂದರವಾಗಿ ಮೂಡಿಬಂದ ಉಳ್ಳಾಕುಲು ಕೃತಿ ನೋಡಿದರೆ ಅದು ಗೊತ್ತಾಗುತ್ತದೆ ಎಂದು ಶ್ಲಾಘಿಸಿದರು.

ದಕ್ಷಿಣ ಏಶ್ಯಾದಲ್ಲಿ ಯಾವುದಾದರೊಂದು ಜಾನಪದ ಪ್ರಕಾರದ ಬಗ್ಗೆ ಅತ್ಯದ್ಭುತವಾದ ಕೆಲಸ ಆಗಿದ್ದಿದ್ದರೆ ಅದು ಭೂತಾರಾಧನೆ. ತುಳುನಾಡಿನ ಭೂತಾರಾಧನೆಯ ಮೇಲೆ ಬಂದಂತಹ ಒಳ್ಳೆಯ ಪುಸ್ತಗಳು ಭಾರತದ ಯಾವ ಭಾಷೆಯಲ್ಲೂ ಬಂದಿಲ್ಲ. ಆ ಒಂದು ವಿದ್ವತ್‌ ಪರಂಪರೆಯ ಸಾಕ್ಷಿಯಾಗಿ ಮತ್ತು ಆ ವಿದ್ವತ್‌ ಪರಂಪರೆಯ ಮುಂದುವರಿಕೆಯಾಗಿ ಈ ಪುಸ್ತಕ ಇವತ್ತು ಪ್ರಕಟವಾಗಿದೆ ಎಂದರು.

ಡಾ. ಚಿನ್ನಪ್ಪ ಗೌಡ

ಭೂತಾರಾಧನೆಯ ಕುರಿತಾದ ಈ ವರೆಗಿನ ಅಧ್ಯಯನಗಳು ಸರ್ವೆ ಮಾದರಿಯಲ್ಲಿದ್ದು ಈ ಅಧ್ಯಯನವು ಆ ಮಾದರಿಯಲ್ಲಿ ಸಾಗದೆ ಸೂಕ್ಷ್ಮ ಅವಲೋಕನದ ಹಾದಿಯಲ್ಲಿ ಸಾಗಿದೆ. ಉಳ್ಳಾಕುಲು ಪುಸ್ತಕ ಬರೇ ದೈವಾರಾಧನೆ ಮಾತ್ರವಲ್ಲ ಒಂದು ಪ್ರಾದೇಶಿಕ ಅಧ್ಯಯನದ ಅಸ್ತಿತ್ವವನ್ನು ಸೇರಿಸಿಕೊಂಡು  ಪ್ರಕಟ ಆಗಿರುವುದರಿಂದ ಈ ವರೆಗೆ ಬಂದಿರುವ ಭೂತಾರಾಧನೆಯ ಪುಸ್ತಕಗಳಿಂದ ಇದು ಭಿನ್ನವಾಗಿದೆ ಮತ್ತು ಮುಂದಿನ ಸಂಶೋಧನೆಯ ಹಾದಿಗೆ ಒಳನೋಟಗಳನ್ನು ಕೊಡುತ್ತದೆ ಎಂದರು.

ಕೃತಿ ಪರಿಚಯವನ್ನು  ಹಿರಿಯ ಜಾನಪದ ವಿದ್ವಾಂಸ ಡಾ. ಚಿನ್ನಪ್ಪ ಗೌಡರು ಮಾಡಿದರು. ಒಂದು ಸಂಶೋಧನೆಯಲ್ಲಿ ಸಂಶೋಧನೆ ಆಗು ಮಾಡಿದ ಪರಿಸರ ಬಹಳ ಮುಖ್ಯ. ಸುಳ್ಯದ ಸಾಹಿತ್ಯ, ಸುಳ್ಯದ ಜಾನಪದ, ಸುಳ್ಯದ ಆರಾಧನೆ ಯ ಹಾಗೆ ಈ ಸಂಶೋಧನೆ ಕೂಡಾ ಸುಳ್ಯಕ್ಕೆ ಮಿತಿಗೊಂಡಿದೆ. ಒಟ್ಟು ಕರ್ನಾಟಕ, ಒಟ್ಟು ಕನ್ನಡ, ಒಟ್ಟು ಜಾನಪದ ಎಂದು ಹೇಳುವ ಬದಲು ಒಂದು ಪ್ರದೇಶಕ್ಕೆ  ಸಂಬಂಧ ಪಟ್ಟ ಹಾಗೆ ತನ್ನ ಅಧ್ಯಯನವನ್ನು ಕೇಂದ್ರೀಕರಿಸಿ ನೋಡುವುದರಿಂದ ಬಹಳ ಸೂಕ್ಷ್ಮವಾಗಿ ನೋಡಲು ಸಾಧ್ಯವಾಗುತ್ತದೆ ಎನ್ನುವುದಕ್ಕೆ ಪೂವಪ್ಪರ ಅಧ್ಯಯನ ಸಾಕ್ಷಿ ಎಂದರು.

ಈ ಅಧ್ಯಯನವು ಮುಖ್ಯವಾಗಿ ಉಲ್ಲಾಕುಳುಗಳ ಐತಿಹಾಸಿಕತೆ, ಪ್ರಾದೇಶಿಕತೆ ಮತ್ತು ಆರಾಧನಾ ಸ್ವರೂಪವನ್ನು ಕೇಂದ್ರೀಕರಿಸಿದೆ. ಇಲ್ಲಿ ಪ್ರಧಾನವಾಗಿ ಆಯ್ದುಕೊಂಡದ್ದು ಮೌಖಿಕ ಆಕರಗಳನ್ನು. ಜನರ ಇತಿಹಾಸ ಒಂದು ಪ್ರಬಲವಾದ ಶಕ್ತಿ ಎಂದರು.

ಒಂದು ಅತ್ಯುತ್ತಮ ಸಂಶೋಧನೆ ಅಂದರೆ ಎಲ್ಲವನ್ನೂ ತಾನೇ ಹೇಳಿಬಿಡುವುದಲ್ಲ. ಅದು ಸಂಶೋಧನೆಯನ್ನು ಮುಂದುವರಿಸಲು ಸೂಚಿಸುತ್ತದೆ. ಈ ನಿಟ್ಟಿನಲ್ಲಿ ಪೂವಪ್ಪರ ಸಂಶೋಧನೆಯ ಫಲಿತಗಳು ಮುಂದೊಂದು ದಿನ ಅಪ್ರಸ್ತುತವಾಗಬಹುದು. ಆದರೆ ಇಲ್ಲಿಯ ಮಾಹಿತಿಗಳು ಎಂದೂ ಅಪ್ರಸ್ತುತವಾಗಲಾರವು ಎಂದು ಅಭಿಪ್ರಾಯ ಪಟ್ಟರು.

ಲೇಖಕ ಡಾ. ಪೂವಪ್ಪ ಕಣಿಯೂರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಇದೇ ಹೊತ್ತು  ಪೂವಪ್ಪರ ಭವಿಷ್ಯಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟ ಮುಗರೋಡಿ ಲಕ್ಷ್ಮೀಶ ದಂಪತಿಗಳನ್ನು ಸನ್ಮಾನಿಸಲಾಯಿತು.

ಆಕೃತಿ ಪ್ರಕಾಶನದ ಕಲ್ಲೂರು ನಾಗೇಶ್‌ ಕಾರ್ಯಕ್ರಮ ನಿರ್ವಹಿಸಿದರು. ಪ್ರಕಾಶ್ಚಂದ್ರ ಶಿಶಿಲ ವಂದನಾರ್ಪಣೆ ಮಾಡಿದರು.

ತರಂಗಿಣಿ ಪ್ರಕಾಶನ ಸುಳ್ಯ ಮತ್ತು ಆಕೃತಿ ಆಶಯ ಪಬ್ಲಿಕೇಶನ್‌ ಮಂಗಳೂರು ಇದರ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.

More articles

Latest article

Most read