ಯಾವ ಆಧಾರದಲ್ಲಿ ಕದನ ವಿರಾಮ: ಸಚಿವ ದಿನೇಶ್ ಗುಂಡೂರಾವ್ ಪ್ರಶ್ನೆ

ಬೆಂಗಳೂರು: ಭಾರತೀಯ ಸೇನೆಯಿಂದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ನಡೆಯುತ್ತಿದ್ದಾಗಲೇ ಯಾವ ಆಧಾರದಲ್ಲಿ ಕದನ ವಿರಾಮ ಒಪ್ಪಿಕೊಳ್ಳಲಾಗಿದೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿಯವರು ಸ್ಪಷ್ಟಪಡಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಆಗ್ರಹಿಸಿದರು.

ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಉಗ್ರರನ್ನು ಮಣ್ಣುಪಾಲು ಮಾಡುವವರೆಗೂ ಬಿಡುವುದಿಲ್ಲ ಎಂದು ಮೋದಿ ಹೇಳಿದ್ದರು. ಅವರು ಬಹು ದೊಡ್ಡ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ನಿರೀಕ್ಷೆ ಮಾಡಿದ್ದೆವು. ದಾಳಿ ನಿಲ್ಲಿಸುವಂತೆ ಪಾಕಿಸ್ತಾನ ಅಂಗಲಾಚಿತು ಎಂದೂ ಮೋದಿ ಹೇಳಿದ್ದಾರೆ. ಆದರೆ, ಏನು ನಡೆದಿದೆ ಎಂದು ಯಾರಿಗೂ ತಿಳಿದಿಲ್ಲ ಎಂದರು.

ನೂರಾರು ಉಗ್ರರನ್ನು ಸಾಯಿಸಿದ್ದೇವೆ ಎಂದೂ ಮೋದಿ ಹೇಳುತ್ತಾರೆ. ಎಷ್ಟು ಉಗ್ರರು ಸತ್ತಿದ್ದಾರೆಂದು ಯಾರಿಗೆ ತಿಳಿದಿದೆ? ಪುಲ್ವಾಮಾ ದಾಳಿ ಮಾಡಿದವರನ್ನು ಇನ್ನೂ ಬಂಧಿಸಿಲ್ಲ. ಪಹಲ್ಗಾಮ್ ಘಟನೆಗೆ ಕಾರಣರಾದವರು ಏನಾದರು? ಬಿಜೆಪಿಯವರು ಪ್ರತಿಯೊಂದು ವಿಷಯವನ್ನೂ ರಾಜಕೀಯಕ್ಕೆ ಬಳಸಿಕೊಳ್ಳುತ್ತಾರೆ ಎಂದೂ ಅವರು ಟೀಕಿಸಿದರು.

More articles

Latest article

Most read