ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಹಿನ್ನೆಲೆ ಪರೀಕ್ಷೆಯ ಹಿಂದಿನ ದಿನ ರದ್ದಾಗಿದ್ದ ಯುಜಿಸಿ- ನೆಟ್ ಅನ್ನು ಮತ್ತೆ ನಡೆಸುವುದಾಗಿ ಪ್ರಕಟಿಸಿ ಅದರ ಹೊಸ ದಿನಾಂಕವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಪ್ರಟಿಸಿದೆ. ಹೌದು, ಹೊಸ ವೇಳಾಪಟ್ಟಿ ಪ್ರಕಾರ ಆಗಸ್ಟ್ 21 ರಿಂದ ಸೆಪ್ಟೆಂಬರ್ 4 ರ ನಡುವೆ ಪರೀಕ್ಷೆ ನಡೆಯಲಿದೆ.
ಜೊಯಿಂಟ್ ಸಿಎಸ್ಐಆರ್ ಯುಜಿಜಿಸಿ ನೆಟ್ ಪರೀಕ್ಷೆಯನ್ನು ಜುಲೈ 25ರಿಂದ ಜುಲೈ 27ರವರೆಗೆ ಹಾಗೂ ಎನ್ಸಿಇಟಿ ಪರೀಕ್ಷೆಯನ್ನು ಜುಲೈ 10 ರಂದು ನಡೆಸಲಾಗುವುದು ಎಂದು NTA ತಿಳಿಸಿದೆ.
ಪರೀಕ್ಷೆಯಲ್ಲಿ ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ಮೂರು ಪರೀಕ್ಷೆಗಳನ್ನು ಕಂಪ್ಯೂಟರ್ ಆಧಾರದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಈ ಹಿಂದೆ ರದ್ದುಗೊಂಡು ಯುಜಿಸಿ ನೆಟ್ ಪರೀಕ್ಷೆ ಓಎಮ್ಆರ್ ಶೀಟ್- ಆಫ್ಲೈನ್ ನಲ್ಲಿ ನಡೆಸಲಾಗಿತ್ತು. ಈ ಬಾರಿ ಪರೀಕ್ಷೆ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಶೈಲಿನಲ್ಲಿ ನಡೆಯಲಿದೆ.
ಅಖಿಲ ಭಾರತ ಆಯುಷ್ ಸ್ನಾತಕೋತ್ತರ ಪ್ರವೇಶ ಪರೀಕ್ಷೆ – 2024 (AIAPGET) ವೇಳಾಪಟ್ಟಿ ಪ್ರಕಾರ ಜುಲೈ 6 ರಂದು ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಆಯಾ ಅಭ್ಯರ್ಥಿಗಳು NTAಯ ಅಧಿಕೃತ ವೆಬ್ಸೈಟ್ www.nta.ac ಗೆ ಭೇಟಿ ನೀಡಬಹುದು. ಎನ್‌ಟಿಎ ಪರೀಕ್ಷೆಗಳ ಕುರಿತು ಹೆಚ್ಚಿನ ಸ್ಪಷ್ಟೀಕರಣಕ್ಕಾಗಿ, ಅಭ್ಯರ್ಥಿಗಳು 011-40759000 ಅಥವಾ ಆಯಾ ಇ-ಮೇಲ್ ಮೂಲಕ ಸಂಪರ್ಕಿಸಬಹುದು ಎಂಧು ತಿಳಿಸಿದೆ.