ಸೋಶಿಯಲ್ ಮೀಡಿಯಾದಲ್ಲಿ ವಿಭಿನ್ನ ವಿಡಿಯೋ ಮೂಲಕ ಹೆಸರು ಮಾಡಿದ ವಿಕ್ಕಿಪೀಡಿಯಾ ವಿಕಾಸ್ ದೀಪಾವಳಿ ಹಬ್ಬಕ್ಕೆ ಮತ್ತೊಂದು ವಿಡಿಯೋ ಹಂಚಿಕೊಂಡಿದ್ದು, ದಿವಾಳಿ ಹಾಗೂ ದೀಪಾವಳಿಗಿರುವ ವ್ಯತ್ಯಾಸವನ್ನು ಹೇಳಿದ್ದಾರೆ ಈ ಮೂಲಕ ವಿಡಿಯೋ ವೈರಲ್ ಆಗಿದೆ.
ದುನಿಯಾ ವಿಜಯ್ ಹಾಗೂ ರಮ್ಯಾ ಅಭಿನಯದ ‘ಜಾನಿ ಮೇರಾ ನಾಮ್’ ಸಿನಿಮಾದ ‘ಊರಿಗೊಬ್ಳೆ ಪದ್ಮಾವತಿ’ ಹಾಡಿನ ರಿಲೀಕ್ಸ್‌ನಿಂದ ವಿಕ್ಕಿಪೀಡಿಯಾ ವಿಕಾಸ್ ದೀಪಾವಳಿ ಪದದ ಉಚ್ಛಾರಣೆ ಬಗ್ಗೆ ತಿಳಿಸಿದ್ದಾರೆ.
ಸಾಮಾನ್ಯವಾಗಿ ದೀಪಾವಳಿ ಸಂದೇಶಗಳಲ್ಲಿ, ಎರಡು ರೀತಿ ಹೇಳುತ್ತಾರೆ, ಕೆಲವರು ದೀಪಾವಳಿ ಎನ್ನುತ್ತಾರೆ ಇನ್ನೂ ಕೆಲವರು ದಿವಾಳಿ ಎನ್ನುತ್ತಾರೆ. ಆದರೆ ಈ ಎರಡು ಪದಗಳನ್ನು ಬೇರೆ ಬೇರೆಯಾಗಿ ಉಚ್ಛರಿಸಲಾಗುತ್ತದೆ ಮತ್ತು ಅರ್ಥವು ಕೂಡ ಬೇರೆ ಬರುತ್ತದೆ. ಇದನ್ನೇ ಈಗ ವಿಕಿಪೀಡಿಯ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ.
‘ದಿವಾಳಿ’ ಅಂದರೆ ಕನ್ನಡದಲ್ಲಿ ಹಾಳಾಗುವುದು ಎಂದಾಗುತ್ತದೆ. ಹೀಗಾಗಿ ವಿಕ್ಕಿಪೀಡಿಯಾ ವಿಕಾಸ್ ‘ದಿವಾಳಿ’ ಅಲ್ಲ ಇದು ‘ ದೀಪಾವಳಿ’ ಎನ್ನುವುದನ್ನು ‘ಊರಿಗೊಬ್ಲೆ ಪದ್ಮಾವತಿ’ ಹಾಡಿನ ರಿಲೀಕ್ಸ್ ಮೂಲಕ ತಿಳಿಸಿದ್ದಾರೆ.
ಈ ವಿಡಿಯೋವನ್ನು ವಿಕ್ಕಿಪೀಡಿಯಾ ವಿಕಾಸ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಹಲವಾರು ಜನ ಮೆಚ್ಚುಗೆ ವ್ಯಕ್ತಪಡಿಸಿ, ಹಂಚಿಕೊಂಡಿದ್ದಾರೆ.
https://www.instagram.com/reel/DBqgG7ZyBwe/?igsh=cmUyMWo0bXRwdHd4