ಬೆಂಗಳೂರು: ಫಲಿತಾಂಶ ಸುಧಾರಣೆ ದೃಷ್ಟಿಯಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಅಧ್ಯಯನ ರಜಾ ಅವಧಿಯನ್ನು ರದ್ದುಗೊಳಿಸಿದೆ. ಬದಲಾಗಿ ಕಾಲೇಜಿನಲ್ಲೇ ಅಧ್ಯಯನ ನಡೆಸಬೇಕಿದೆ. ಈ ಕ್ರಮದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಾಗಲಿದೆ ಎಂದು ಶಿಕ್ಷಣ ಇಲಾಖೆ ನಿರೀಕ್ಷಿಸಿದೆ. ಈ ನಿರ್ಧಾರ ಕುರಿತು ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಕಾಲೇಜಿನಲ್ಲಿಯೇ ಮುಖ್ಯ ಪರೀಕ್ಷೆಗೆ ತಯಾರಿ ಮಾಡಬೇಕು. ಉಪನ್ಯಾಸಕರ ಸಮ್ಮುಖದಲ್ಲಿ ಕ್ಲಾಸ್ ರೂಮ್ ನಲ್ಲಿಯೇ ವಿದ್ಯಾರ್ಥಿಗಳು ಓದಿಕೊಳ್ಳಬೇಕಿದೆ.
ಇದುವರೆಗೂ ಪ್ರತಿ ವರ್ಷ ಪಠ್ಯಕ್ರಮ ಪೂರ್ಣಗೊಂಡು, ಪೂರ್ವ ಸಿದ್ಧತಾ ಪರೀಕ್ಷೆ ಮುಗಿದ ಬಳಿಕ ಒಂದು ತಿಂಗಳ ಕಾಲ ವಿದ್ಯಾರ್ಥಿಗಳಿಗೆ ಸ್ಟಡಿ ಹಾಲಿಡೇ ನೀಡಲಾಗುತ್ತಿತ್ತು. ಫೆಬ್ರವರಿ 26 ವರೆಗೆ ಎಲ್ಲಾ ಕಾಲೇಜುಗಳಲ್ಲಿ ಅಧ್ಯಯನ ನಡೆಯಲಿದೆ. ಸ್ಟಡಿ ಹಾಲಿಡೇ ನೀಡಿದರೆ ವಿದ್ಯಾರ್ಥಿಗಳು ಹೆಚ್ಚು ಓದುವುದಿಲ್ಲ ಎಂದು ಇಲಾಖೆ ತೀರ್ಮಾನಸಿದೆ.

