ಇಸ್ರೇಲ್ : ಪ್ರಧಾನಿ ಬೆಂಜಮಿನ್ ನೆತನ್ಯಾಹು ಲೆಬನಾನ್ನಲ್ಲಿ ಯಾವುದೇ ಕದನ ವಿರಾಮ ಒಪ್ಪಂದ ಆಗಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ಹಿಜ್ಬುಲ್ಲಾ ವಿರುದ್ಧ ಪೂರ್ಣ ಬಲದಿಂದ ಮಿಲಿಟರಿ ಕಾರ್ಯಾಚರಣೆಗಳನ್ನು ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ನಾನು ನಿಮಗೆ ತಿಳಿಸಲು ಬಯಸುತ್ತೇನೆ ಲೆಬನಾನ್ನಲ್ಲಿ ಕದನ ವಿರಾಮ ಘೋಷಣೆ ಆಗಿಲ್ಲ. ನಾವು ಹಿಜ್ಬುಲ್ಲಾವನ್ನು ಪೂರ್ಣ ಬಲದಿಂದ ಹೊಡೆಯುವುದನ್ನು ಮುಂದುವರಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಹಿಜ್ಬುಲ್ಲಾವನ್ನು ನಿಶ್ಯಸ್ತ್ರೀಕರಣಗೊಳಿಸುವುದು ಮತ್ತು ಐತಿಹಾಸಿಕ ಶಾಂತಿ ಒಪ್ಪಂದ ಸಾಧಿಸಲು ಲೆಬನಾನ್ ಸರ್ಕಾರದೊಂದಿಗೆ ನೇರ ಮಾತುಕತೆಗಳನ್ನು ಮಾಡಲು ಕ್ಯಾಬಿನೆಟ್ಗೆ ಸೂಚನೆ ನೀಡಿದ್ದೇನೆ ಎಂದು ನೆತನ್ಯಾಹು ತಿಳಿಸಿದ್ದಾರೆ.
ಲೆಬನಾನ್ ಸರ್ಕಾರದಿಂದ ಪುನರಾವರ್ತಿತ ವಿನಂತಿಗಳ ಬಂದಿರುವುದರಿಂದ ನಿನ್ನೆ ರಾತ್ರಿ ನಾನು ಎರಡು ಗುರಿಗಳನ್ನು ಸಾಧಿಸಲು ಲೆಬನಾನ್ನೊಂದಿಗೆ ನೇರ ಮಾತುಕತೆಗಳನ್ನು ಪ್ರಾರಂಭಿಸಲು ಕ್ಯಾಬಿನೆಟ್ಗೆ ಸೂಚನೆ ನೀಡಿದ್ದೇನೆ. ಮೊದಲನೆಯದಾಗಿ, ಹೆಜ್ಬುಲ್ಲಾದ ನಿಶ್ಯಸ್ತ್ರೀಕರಣ, ಎರಡನೆಯದಾಗಿ ಇಸ್ರೇಲ್ ಮತ್ತು ಲೆಬನಾನ್ ನಡುವೆ ಐತಿಹಾಸಿಕ ಶಾಂತಿ ಒಪ್ಪಂದ ಎಂದು ಅವರು ಹೇಳಿದ್ದಾರೆ.
ಮತ್ತೊಂದು ಕಡೆ ಲೆಬನಾನ್ನ ಸಹ ಕದನ ವಿರಾಮದ ಭಾಗವಾಗಿದೆ ಎಂದು ಟೆಹ್ರಾನ್ ಹೇಳಿದೆ. ಆದರೆ, ಇಸ್ರೇಲ್ ಲೆಬನಾನ್ ಮೇಲೆ ವಾಯು ದಾಳಿ ಮುಂದುವರೆಸಿದೆ. ಇದು ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ಟೆಹ್ರಾನ್ ಆರೋಪಿಸಿದೆ.
ಆದರೆ, ಈ ಆರೋಪಗಳನ್ನು ವಾಷಿಂಗ್ಟನ್ ಮತ್ತು ಇಸ್ರೇಲ್, ಕದನ ವಿರಾಮವು ಲೆಬನಾನ್ಗೆ ಅನ್ವಯಿಸುವುದಿಲ್ಲ ಎಂದು ಸಮರ್ಥಿಸಿಕೊಂಡಿವೆ. ಇದು ರಾಜತಾಂತ್ರಿಕ ಪ್ರಯತ್ನಗಳನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ ಮತ್ತು ಕದನ ವಿರಾಮವು ಹಾದಿ ತಪ್ಪುವ ಅಪಾಯವನ್ನು ಹೆಚ್ಚಿಸಿದೆ.

