ಬೆಂಗಳೂರು: ಜೆಡಿಎಸ್ ಚನ್ನಪಟ್ಟಣದಲ್ಲಿ ಸೋತಿರುವುದಕ್ಕೆ ಪಕ್ಷ ಗೊಂದಲದ ಗೂಡಾಗಿದೆ ಎಂದು ವ್ಯಾಖ್ಯಾನ ಮಾಡುವುದು ತಪ್ಪು ಎಂದು ಪಕ್ಷದ ಮುಖಂಡ, ಶಾಸಕ ಹೆಚ್. ಡಿ. ರೇವಣ್ಣ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಕಾಂಗ್ರೆಸ್ ಪಕ್ಷ ಮಹಾರಾಷ್ಟ್ರದಲ್ಲಿ ದಯನೀಯ ಸೋಲು ಕಂಡಿಲ್ಲವೇ ಎಂದು ಪ್ರಶ್ನಿಸಿದರು. ನಿಖಿಲ್ ನನ್ನು ಕುಮಾರಸ್ವಾಮಿ ಬಲಿಪಶು ಮಾಡಿದ್ದಾರೆಂಬ ಮಾತಿಗೆ ಅರ್ಥವೇ ಇಲ್ಲ, ಅನಿವಾರ್ಯವಾಗಿ ಅವನನ್ನು ಸ್ಪರ್ಧೆಗೆ ಇಳಿಸಬೇಕಾಯಿತು ಎಂದು ಕುಮಾರಸ್ವಾಮಿ ಅವರೇ ಹೇಳಿದ್ದಾರೆ. ಕೇವಲ 15 ದಿನ ಪ್ರಚಾರ ಮಾಡಿಯೂ ನಿಖಿಲ್ 85,000 ವೋಟು ಪಡೆದಿದ್ದು, ಅದು ಸಾಧನೆಯಲ್ಲವೇ ಎಂದರು. ನಾನು ನಿಖಿಲ್ ಭಾಷಣಗಳನ್ನು ಕೇಳಿದ್ದೇನೆ, ಉತ್ತಮ ಸಂಸದೀಯ ಪಟುವಿನ ರೀತಿ ಮಾತಾಡುತ್ತಾನೆ. ಸೋಲಿನಿಂದ ಅವನು ಧೃತಿಗೆಟ್ಟಿಲ್ಲ, ಚುನಾವಣೆಯಲ್ಲಿ ಸೋಲು ಗೆಲುವು ಮುಖ್ಯ ಅಲ್ಲ . ಭವಿಷ್ಯದಲ್ಲಿ ಆತನಿಗೆ ಉಜ್ವಲ ಭವಿಷ್ಯವಿದೆ ಮತ್ತು ರಾಜ್ಯ ಮಟ್ಟದ ನಾಯಕನಾಗಿ ಬೆಳೆಯುವ ಎಲ್ಲ ಲಕ್ಷಣಗಳಿವೆ ಎಂದು ರೇವಣ್ಣ ಹೇಳಿದರು