Saturday, July 27, 2024

ಪ್ರೊ. ಆನಂದ್ ತೇಲ್ತುಂಬ್ಡೆ ಅವರಿಗೆ ಬೆಂಗಳೂರಿಗೆ ಬರಲು ಅನುಮತಿ ನೀಡಿದ ಕೋರ್ಟ್

Most read

ಮುಂಬೈ: ದೇಶದ ದೊಡ್ಡ ವಿದ್ವಾಂಸರೂ, ಬಾಬಾಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಮೊಮ್ಮೊಗನೂ ಆಗಿರುವ ಪ್ರೊಫೆಸರ್ ಆನಂದ್ ತೇಲ್ತುಂಬ್ಡೆ (Anand Teltumbde) ಅವರಿಗೆ ಇಂದು (ಜ.31) ಒಂದು ದಿನದ ಮಟ್ಟಿಗೆ ಬೆಂಗಳೂರಿಗೆ ಪ್ರಯಾಣಿಸಲು NIA ನ್ಯಾಯಾಯಲಯವು ಅನುಮತಿ ನೀಡಿದೆ.

ಕರ್ನಾಟಕ ಸರ್ಕಾರವು ಪ್ರೊ. ಆನಂದ್ ತೇಲ್ತುಂಬ್ಡೆ ಅವರಿಗೆ ಇತ್ತೀಚೆಗೆ ಬಸವ ರಾಷ್ಟ್ರೀಯ ಪುರಸ್ಕಾರ ಪ್ರಶಸ್ತಿಯನ್ನು ಘೋಷಿಸಿದ್ದು ಪ್ರಶಸ್ತಿ ಪ್ರದಾನ ಸಮಾರಂಭವು ಜ.31ರ ಬುಧವಾರದಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ 6 ಗಂಟೆಗೆ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಲು ಬೆಂಗಳೂರಿಗೆ ಪಯಣಿಸಲು ಅನುಮತಿ ನೀಡುವಂತೆ ಡಾ.ತೇಲ್ತುಂಬ್ಡೆಯವರು NIA ನ್ಯಾಯಾಲಯದ ವ್ಯಾಪ್ತಿಯನ್ನು ದಾಟಿ ಪ್ರಯಾಣಿಸಲು ಅನುಮತಿ ಕೋರಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಅವರ ಮನವಿಯನ್ನು ಪುರಸ್ಕರಿಸಿರುವ ನ್ಯಾಯಾಲಯ ಒಂದು ದಿನದ ಮಟ್ಟಿಗೆ ಬೆಂಗಳೂರಿಗೆ ಪಯಣಿಸಲು ಪ್ರೊ.ಆನಂದ್ ತೇಲ್ತುಂಬ್ಡೆಯವರಿಗೆ ಅನುಮತಿ ನೀಡಿದೆ.

ಭೀಮಾ ಕೊರೆಗಾಂವ್ ಎಲ್ಗಾರ್ ಪರಿಷತ್ (Elgar Parishad) ಕೇಸಿನಲ್ಲಿ ಪ್ರಧಾನಿ ಮೋದಿಯವರ ಕೊಲೆ ಸಂಚಿನಲ್ಲಿ ಭಾಗಿಯಾಗಿದ್ದಾರೆ ಎಂಬ ಸುಳ್ಳು ಆರೋಪದಡಿ 2018ರಿಂದ ಸೆರೆವಾಸದಲ್ಲಿದ್ದ ಡಾ.ತೇಲ್ತುಂಬ್ಡೆಯವರು 18,ನವೆಂಬರ್ 2022ರಂದು ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ಆದರೆ ನ್ಯಾಯಾಲಯದ ಅನುಮತಿಯಿಲ್ಲದೆ ಕೋರ್ಟ್ ವ್ಯಾಪ್ತಿಯ ಹೊರಕ್ಕೆ ಹೋಗುವಂತಿಲ್ಲ ಎಂಬ ಶರತ್ತು ವಿಧಿಸಲಾಗಿದೆ.

ಪ್ರಖರ ಅಂಬೇಡ್ಕರ್ ವಾದಿ ಚಿಂತಕರೂ, ಲೇಖಕರೂ ಆಗಿರುವ ಪ್ರೊ.ಆನಂದ್ ತೇಲ್ತುಂಬ್ಡೆ ಇಂದು ಸಂಜೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಬಸವ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

More articles

Latest article