Sunday, September 8, 2024

ಹೂಡಿಕೆದಾರರಿಗೆ ಗುಡ್‌ ನ್ಯೂಸ್‌: ಏಂಜೆಲ್ ತೆರಿಗೆ ರದ್ದುಗೊಳಿಸಿದ ಕೇಂದ್ರ, ನಿರ್ಮಲಾ ಸೀತಾರಾಮನ್ ಘೋಷಣೆ

Most read

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಬಜೆಟ್ ಮಂಡನೆ ಮಾಡುತ್ತಿದ್ದು, ಈ ವೇಳೆ ಸಣ್ಣ ಕಂಪನಿಗಳು ಮತ್ತು ಸ್ಟಾರ್ಟ್‌ಅಪ್‌ಗಳಿಗೆ ಹೂಡಿಗೆ ಮಾಡುವ ಹೂಡಿಕೆದಾರರಿಗೆ ಶುಭ ಸುದ್ದಿ ನೀಡಿದ್ದಾರೆ.

ಹೌದು, ಎಲ್ಲಾ ಹೂಡಿಕೆದಾರರಿಗೆ ಏಂಜೆಲ್ ಟ್ಯಾಕ್ಸ್ ರದ್ದುಗೊಳಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಘೋಷಿಸಿದ್ದಾರೆ. ಲೋಕಸಭೆಯಲ್ಲಿ 2024-25ರ ಬಜೆಟ್ ಮಂಡನೆ ಸಂದರ್ಭದಲ್ಲಿ ಈ ಘೋಷಣೆ ಮಾಡಲಾಗಿದೆ.

ಸಣ್ಣ ಕಂಪನಿಗಳು ಮತ್ತು ಸ್ಟಾರ್ಟ್‌ಅಪ್‌ಗಳಿಗೆ ನಿರಂತರ ಹಣದ ಅವಶ್ಯಕತೆ ಇರುತ್ತದೆ. ಈ ಅಗತ್ಯಗಳನ್ನು ವಿವಿಧ ಮೂಲಗಳ ಮೂಲಕ ಪೂರೈಸಬಹುದು. ಅವರಲ್ಲಿ ಒಬ್ಬರು ಏಂಜೆಲ್ ಹೂಡಿಕೆದಾರರು. ಏಂಜೆಲ್ ಹೂಡಿಕೆದಾರರು ಶ್ರೀಮಂತ ವ್ಯಕ್ತಿಗಳಾಗಿದ್ದು, ಇಕ್ವಿಟಿಗೆ ಪ್ರತಿಯಾಗಿ ಬೆಳವಣಿಗೆಯ ಹಂತದ ಸ್ಟಾರ್ಟ್‌ಅಪ್‌ಗಳಲ್ಲಿ ದೊಡ್ಡ ಮೊತ್ತವನ್ನು ಹೂಡಿಕೆ ಮಾಡುತ್ತಾರೆ. ಏಂಜೆಲ್ ಫಂಡ್‌ಗಳನ್ನು ಸ್ವೀಕರಿಸುವ ಕಂಪನಿಗಳು ಏಂಜೆಲ್ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಈಗ ಆ ತೆರಿಗೆಯನ್ನು ರದ್ದು ಪಡಿಸಲಾಗಿದೆ.

More articles

Latest article