ನ್ಯೂಯಾರ್ಕ್: ಮಹಿಳಾ ಹಕ್ಕುಗಳು, ಸಬಲೀಕರಣ ಮತ್ತು ಸಾಮಾಜಿಕ ಸ್ಥಾನಮಾನದ ಕುರಿತಾದ “ಮಹಿಳೆಯರ ಸ್ಥಿತಿಗತಿ ಆಯೋಗ” ದ ಸಭೆಯು ಮಾರ್ಚ್ 10 ರಿಂದ 21 ರವರೆಗೆ ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆಯಿತು.
ವಿವಿಧ ದೇಶಗಳ ಮಹಿಳಾ ಕಾರ್ಯಕರ್ತರೊಂದಿಗೆ ಮಹಿಳಾ ಸಬಲೀಕರಣ, ಲಿಂಗ ಸಮಾನತೆ ಮತ್ತು ಮಹಿಳಾ ಸುಸ್ಥಿರತೆಯ ಕುರಿತು ವಿಸ್ತೃತ ಚರ್ಚೆಗಳು ನಡೆದವು.10 ದಿನಗಳ ಸಮ್ಮೇಳನದಲ್ಲಿ ಭಾರತದ ನಿಯೋಗ ಪಾಲ್ಗೊಂಡಿತ್ತು. ಈ ಸಭೆಯಲ್ಲಿ “ಮಹಿಳಾ ಸಬಲೀಕರಣ ಮತ್ತು ಬೀಜಿಂಗ್ ಘೋಷಣೆ ಮತ್ತು ಕ್ರಿಯೆಗಾಗಿ ವೇದಿಕೆ ” ಅನುಷ್ಠಾನದ ಕುರಿತು ಚರ್ಚೆಗಳು ಮತ್ತು ವಿಮರ್ಶೆಗಳು ಸಹ ನಡೆದವು.
ಭಾರತೀಯ ಮಹಿಳಾ ನಿಯೋಗ ,ಐಸಿಸಿಡಿಆರ್ ಮತ್ತು ಅಮೆರಿಕಾ ಪ್ರತಿನಿಧಿಗಳು ಭಾಗವಹಿಸಿದ್ದರು. ಭಾರತದ ನಿಯೋಗದ ನೇತೃತ್ವವನ್ನು ಕನ್ನಡತಿ ಹಾಗೂ ಬೆಂಗಳೂರಿನ ಪ್ರತಿಷ್ಠಿತ ಗ್ರೀನ್ ಈಡನ್ ಪಬ್ಲಿಕ್ ಸ್ಕೂಲ್ ನ ಸಂಸ್ಥಾಪಕ ಪ್ರಾಂಶುಪಾಲರಾದ ಡಾ. ವೇದಾವತಿ ದಿನೇಶ್ ಅವರು ವಹಿಸಿದ್ದರು. ಅಂತರರಾಷ್ಟ್ರೀಯ ಸಂಸ್ಕೃತಿ ಮತ್ತು ರಾಜತಾಂತ್ರಿಕ ಸಂಬಂಧಗಳ ಆಯೋಗದ ಪ್ರತಿನಿಧಿಯಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಡಾ. ಸುನೀತಾ ಎಲುರಿ,ಶ್ರೀಮತಿ ವಿನೀಲಾ, ಸೈಯದ್ ಅಶ್ರಫ್, ಐಸಿಸಿಡಿಆರ್‌ನ ಪ್ರಧಾನ ಕಾರ್ಯದರ್ಶಿ ಡಾ. ಶ್ರೀನಿವಾಸ್ ರಾವ್ ಎಲುರಿ ಸೇರಿದಂತೆ ಹಲವು ಪ್ರಮುಖರು ಭಾರತದ ನಿಯೋಗದಲ್ಲಿ ಇದ್ದರು. ಈ ಸಭೆಯು ಮಹಿಳಾ ಸಮಸ್ಯೆಗಳ ಕುರಿತು ಚರ್ಚೆಗಳಿಗೆ ಜಾಗತಿಕ ವೇದಿಕೆಯನ್ನು ಒದಗಿಸಿದೆ. ಮಹಿಳಾ ಸಬಲೀಕರಣ ಮತ್ತು ಸಮಾನತೆಯ ಕುರಿತು ಮಾರ್ಗಸೂಚಿಗಳನ್ನು ಅಭಿವೃದ್ಧಿಪಡಿಸಲು ಗೊತ್ತುವಳಿ ಮಂಡಿಸಲಾಯಿತು.