ಕಮೋಡ್‌ ಒಳಗೆ ನವಜಾತ ಶಿಶು; ಹಾರೋಹಳ್ಳಿಯಲ್ಲಿ ತಲೆತಗ್ಗಿಸುವ ಕೃತ್ಯ

ರಾಮನಗರ: ಇಡೀ ಮಾನವ ಜನಾಂಗವೇ ಬೆಚ್ಚಿಬೀಳುವಂತಹ ಸ್ಫೋಟಕ ಕೃತ್ಯವೊಂದು ರಾಮನಗರ ಜಿಲ್ಲೆಯ ಹಾರೋಹಳ್ಳಿಯ ಆಸ್ಪತ್ರೆಯಲ್ಲಿ ನಡೆದಿದೆ. ನವಜಾತ ಶಿಶುವೊಂದನ್ನು ಶೌಚಾಲಯದ ಕಮೋಡ್‌ ಒಳಗೆ ಹಾಕಿ ಫ್ಲಶ್ ಮಾಡಲಾಗಿದೆ. ಬುಧವಾರ ರಾತ್ರಿ ನಡೆದ ಈ ಅಮಾನವೀಯ ವಿದ್ಯಮಾನ ಇಂದು ಬೆಳಗ್ಗೆ ಬೆಳಕಿಗೆ ಬಂದಿದ್ದು, ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬುಧವಾರ ರಾತ್ರಿ 10.30 ರ‌ ಸಮಯದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಆಸ್ಪತ್ರೆಯ ನೆಲಮಹಡಿಯ ಟಾಯ್ಲೆಟ್​ಗೆ ತೆರಳಿದ್ದ ವೈದ್ಯಕೀಯ ಸಿಬ್ಬಂದಿಗೆ ಮಹಿಳೆಯರ ಶೌಚಾಲಯದಲ್ಲಿ ನೀರು ನಿಂತಿರುವುದು ಕಂಡು ಬಂದಿದೆ. ಈ ನೀರನ್ನು ಸ್ವಚ್ಚಗೊಳಿಸಲು‌ ವೈದ್ಯಕೀಯ ಸಿಬ್ಬಂದಿ ಕೆಲಸಗಾರರಿಗೆ ಸೂಚನೆ ನೀಡಿದ್ದರು. ಕೆಲಸಗಾರರು  ವ್ಯಾಕ್ಯೂಮ್‌ ಕ್ಲೀನರ್‌ ನಿಂದ ಕ್ಲೀನ್ ಮಾಡುವಾಗ ಯಾವುದೋ ಒಂದು ವಸ್ತು ಅಡ್ಡ ಇರುವುದು ಪತ್ತೆಯಾಗಿದೆ. ಆರಂಭದಲ್ಲಿ, ಬಟ್ಟೆ ಅಥವಾ ಗಟ್ಟಿ ವಸ್ತು ಇರಬಹುದು ಎಂದು ಅವರು ಶಂಕಿಸಿದ್ದಾರೆ. ಒಳಗೆ ಸಿಕ್ಕಿಹಾಕಿಕೊಂಡಿದ್ದ ವಸ್ತುವನ್ನು ಹೊರ ತೆಗೆದಾಗ ಕೆಲಸಗಾರರು ಆಘಾತಕ್ಕೊಳಗಾಗಿದ್ದರು. ಏಕೆಂದರೆ ಅದು ನವಜಾತ ಶಿಶುವಿನ ದೇಹವಾಗಿತ್ತು. ಶಿಶು ಜನಿಸಿ ಒಂದೆರಡು ದಿನ ಆಗಿರಬಹುದು ಎಂದು ವೈದ್ಯಕೀಯ ಸಿಬ್ಬಂದಿ ತಿಳಿಸಿದ್ದಾರೆ.

ಕಮೋಡ್‌ ಒಳಗೆ ನವಜಾತ ಶಿಶು ಹೇಗೆ ಬಂದಿರಬಹುದು ಎಂದು ತಿಳಿದು ಬಂದಿಲ್ಲ.  ಅದೇ‌ ಆಸ್ಪತ್ರೆಯಲ್ಲಿ ಶಿಶುವಿನ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.ಪ್ರಕರಣ ಕುರಿತು ತನಿಖೆ ನಡೆಸಲಾಗುತ್ತಿದೆ. ಆಸ್ಪತ್ರೆಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆಗೆ ಒಳಪಡಿಸಲಾಗುತ್ತಿದೆ. ತನಿಖೆಯಿಂದ ಮಾತ್ರ ಸತ್ಯ ಹೊರಬರಲು ಸಾಧ್ಯವಾಗುತ್ತದೆ.

More articles

Latest article

Most read