ನವದೆಹಲಿ: ದೆಹಲಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕಾಂಗ್ರೆಸ್ ಪಕ್ಷದ ಪ್ರಧಾನ ಕಚೇರಿಯನ್ನು ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜತೆಯಾಗಿ ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ,, ಉಪ ಮುಖ್ಯಮಂತ್ರಿ ಡಿ.ಕೆ. ಶಿಕುಮಾರ್ ಪ್ರಿಯಾಂಕಾ ಗಾಂಧಿ, ಕೆ.ಸಿ. ವೇಣುಗೋಪಾಲ್ ಮತ್ತು ಪಕ್ಷದ ಹಲವಾರು ಪ್ರಮುಖ ನಾಯಕರು ಉಪಸ್ಥಿತರಿದ್ದರು. ಈ ಕಚೇರಿಗೆ ಇಂದಿರಾ ಭವನ ಎಂದು ಹೆಸರಿಡಲಾಗಿದೆ. ದೆಹಲಿಯ ಕೋಟ್ಲಾ ರಸ್ತೆಯಲ್ಲಿ ನೂತನ ಕಚೇರಿ ಇದೆ. ಪಕ್ಷದ ಧವಜವನ್ನು ಹಾರಿಸಿ ವಂದೇ ಮಾತರಂ ಹಾಡುವ ಮೂಲಕ ಕಚೇರಿಯನ್ನು ಉದ್ಘಾಟಿಸಲಾಯಿತು.
ಈ ಮೊದಲು ಅಕ್ಬರ್ ರಸ್ತೆಯಲ್ಲಿ ಪ್ರಧಾನ ಕಚೇರಿ ಇದ್ದು, 47 ವರ್ಷಗಳ ಕಾಲ ಪಕ್ಷವನ್ನು ಇಲ್ಲಿಂದಲೇ ಮುನ್ನೆಡೆಸಲಾಗಿತ್ತು.
ಪ್ರಧಾನ ಕಚೇರಿಗೆ ದಿವಂಗತ ಪ್ರಧಾನಿ ಇಂದಿರಾ ಗಾಂಧಿಯವರ ಪರಂಪರೆ ಮತ್ತು ರಾಷ್ಟ್ರ ಮತ್ತು ಪಕ್ಷಕ್ಕೆ ನೀಡಿದ ಕೊಡುಗೆಗಳಿಗೆ ಗೌರವಾರ್ಥವಾಗಿ ಈ ಹೆಸರು ಇಡಲಾಗಿದೆ. ಸುಮಾರು ಒಂದೂವರೆ ದಶಕದ ಅವಧಿಯಲ್ಲಿ ಹೊಸ ಕಚೇರಿಯನ್ನು ನಿರ್ಮಿಸಲಾಗಿದೆ. ಕೇಂದ್ರದಲ್ಲಿ ಸರ್ಕಾರವನ್ನು ಕಳೆದುಕೊಂಡಾಗಿನಿಂದ ಹೊಸ ಕಚೇರಿಯ ನಿರ್ಮಾಣಕ್ಕೆ ಹಣಕಾಸಿನ ಅಡಚಣೆ ಸೇರಿದಂತೆ ಹಲವು ಅಡ್ಡಿಆತಂಕಗಳು ಎದುರಾಗಿದ್ದವು. ಇಂದಿರಾ ಭವನ’ ವನ್ನು ಪಕ್ಷದ ಅಗತ್ಯಗಳು, ಆಡಳಿತಾತ್ಮಕ, ಸಾಂಸ್ಥಿಕ ಮತ್ತು ಕಾರ್ಯತಂತ್ರದ ಕಾರ್ಯಗಳನ್ನು ಬೆಂಬಲಿಸುವ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ.