ಮತ್ತೆ ಚಿನ್ನ ತರುವರೇ ನೀರಜ್ ಚೋಪ್ರಾ? ಫೈನಲ್ ಎಷ್ಟೊತ್ತಿಗೆ ಗೊತ್ತೆ?

Most read

ನೀರಜ್‌ ಚೋಪ್ರಾ, ಟೋಕಿಯೋ ಬಳಿಕ ಪ್ಯಾರಿಸ್‌ನಲ್ಲೂ ಹೊಸ ಚರಿತ್ರೆ ಸೃಷ್ಟಿಸುವ ಕಾತರದಲ್ಲಿದ್ದಾರೆ. ಗುರುವಾರ ಅವರು ಪ್ಯಾರಿಸ್‌ ಒಲಿಂಪಿಕ್ಸ್‌ನ ಪುರುಷರ ಜಾವೆಲಿನ್‌ ಎಸೆತದ ಫೈನಲ್‌ನಲ್ಲಿ ಸ್ಪರ್ಧಿಸಲಿದ್ದು, ಸತತ 2ನೇ ಚಿನ್ನದ ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.

ಮಂಗಳವಾರ 26 ವರ್ಷದ ನೀರಜ್‌ ಅರ್ಹತಾ ಸುತ್ತಿನಲ್ಲಿ 89.34 ಮೀಟರ್‌ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ಫೈನಲ್‌ ಪ್ರವೇಶಿಸಿದ್ದರು. ಒಟ್ಟು 32 ಸ್ಪರ್ಧಿಗಳಿದ್ದ ಅರ್ಹತಾ ಸುತ್ತಿನಲ್ಲಿ 84 ಮೀ. ದೂರ ದಾಖಲಿಸಿದರೆ ಫೈನಲ್‌ಗೇರಬಹುದಿತ್ತು. ನೀರಜ್‌ ಮೊದಲ ಪ್ರಯತ್ನದಲ್ಲೇ ಗುರಿ ತಲುಪಿ ಪದಕ ಸುತ್ತು ಪ್ರವೇಶಿಸಿದ್ದರು.

ಇಂದು ರಾತ್ರಿ 11.55 ಗಂಟೆಯಿಂದ ಪುರುಷರ ಜಾವೆಲಿನ್ ಥ್ರೋ ಫೈನಲ್‌ ಪಂದ್ಯವು ಆರಂಭವಾಗಲಿದೆ. ಒಂದು ವೇಳೆ ಅವರು ಚಿನ್ನ ಗೆದ್ದರೆ, ಒಲಿಂಪಿಕ್ಸ್‌ನ ಪುರುಷರ ಜಾವೆಲಿನ್‌ ಎಸೆತದಲ್ಲಿ ಸತತ 2 ಬಾರಿ ಚಾಂಪಿಯನ್‌ ಆದ ವಿಶ್ವದ 5ನೇ ಅಥ್ಲೀಟ್‌ ಎನಿಸಿಕೊಳ್ಳಲಿದ್ದಾರೆ.

ಜಾವೆಲಿನ್‌ನಲ್ಲಿ ಎರಿಕ್ ಲೆಮ್ಮಿಂಗ್ (ಸ್ವೀಡನ್; 1908 ಮತ್ತು 1912), ಜೊನ್ನಿ ಮೈಯ್ರಾ (ಫಿನ್ಲ್ಯಾಂಡ್; 1920 ಮತ್ತು 1924), ಚೋಪ್ರಾ ಅವರ ಆರಾಧ್ಯ ದೈವವಾದ ಜಾನ್ ಝೆಲೆಜ್ನಿ (ಜೆಕ್ ರಿಪಬ್ಲಿಕ್; 1992, 1996 ಮತ್ತು 2000) ಮತ್ತು ಆಂಡ್ರಿಯಾಸ್ ಥೋರ್ಕಿಲ್ಡ್ಸೆನ್ (ನಾರ್ವೆ) 2004 ಮತ್ತು 2008 ರಲ್ಲಿ ಒಲಿಂಪಿಕ್ ಚಾಂಪಿಯನ್ ಆಗಿದ್ದಾರೆ. ಇವರೆಲ್ಲರೂ ಎರಡು ಪದಕ ಪಡೆದ  ಅಥ್ಲೀಟ್‌ಗಳಾಗಿದ್ದಾರೆ.

More articles

Latest article