ನಾನು ಲೋಕಸಭಾ ಚುನಾವಣೆಯ (Loksabha Election 2024) ಟಿಕೆಟ್ ಆಕಾಂಕ್ಷಿ ಎಂದು ನಿವೃತ್ತ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು ಭಾಸ್ಕರ್ ರಾವ್ (Bhaskar Rao) ಹೇಳಿದ್ದಾರೆ. ಮೈಸೂರು-ಕೊಡಗು (Mysuru-Kodagu) ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧೆ ಮಾಡಲು ನಾನು ಆಕಾಂಕ್ಷಿಯಾಗಿದ್ದೇನೆ. ಕೊಡಗು ಜಿಲ್ಲೆಯಲ್ಲಿ ನಾನು ಎಸ್ಪಿಯಾಗಿ ಕೆಲಸ ಮಾಡಿದ್ದೇನೆ. ಹಾಗಾಗಿ ಕೊಡಗು ಚೆನ್ನಾಗಿ ಪರಿಚಯವಿದೆ, ಎಲ್ಲಾ ಮುಖಂಡರ ರಾಜಕೀಯ ವ್ಯಕ್ತಿಗಳ (Political Leaders) ಪರಿಚಯವಿದೆ ಎಂದು ಹೇಳುವ ಮೂಲಕ ಹಾಲಿ ಸಂಸದ ಪ್ರತಾಪ್ ಸಿಂಹನಿಗೆ ಟಕ್ಕರ್ ಕೊಟ್ಟಿದ್ದಾರೆ.
ಈ ಕುರಿತು ಮಡಿಕೇರಿಯಲ್ಲಿ ಮಾತನಾಡಿದ ಅವರು, ನಾನು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕಳಲೆ ನಿವಾಸಿ. ಮೈಸೂರು ಚೆನ್ನಾಗಿ ಗೊತ್ತಿದೆ, ಮೈಸೂರು ನಗರದಲ್ಲಿ ಸಂಬಂಧಿಕರು ಇದ್ದಾರೆ. ಹುಣಸೂರುನಲ್ಲಿ ಕೆಲಸ ಮಾಡಿದ್ದೇನೆ. ಮೈಸೂರು ಭಾಗ ಪರಚಯವಿದೆ. ಹಾಗಾಗಿ ಈ ಭಾಗದಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಸಮರ್ಥನಿದ್ದೇನೆ ಎಂದು ಹೇಳುವ ಮೂಲಕ ಪ್ರತಾಪ್ ಸಿಂಹ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ.
ರಾಜ್ಯದ ಹಾಗೂ ಜಿಲ್ಲೆಯ ವರಿಷ್ಠರೊಂದಿಗೆ ಮಾತುಕತೆ ನಡೆಸಿದ್ದೇನೆ. ವರಿಷ್ಠರ ತೀರ್ಮಾನಕ್ಕೆ ನಾನು ಬದ್ಧನಿದ್ದೇನೆ. ಬಿಜೆಪಿಯಿಂದ ಟಿಕೆಟ್ ಯಾರಿಗೆ ಕೊಟ್ಟರು ಸ್ವೀಕಾರ ಮಾಡುತ್ತೇನೆ ಎಂದು ಹೇಳಿದರು.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬ್ರಾಹ್ಮಣರ ಬೆಂಬಲ ಕೋರಿದ ಭಾಸ್ಕರ್ ರಾವ್
ಮೈಸೂರು ವಿಪ್ರ ಬಳಗ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ 2.6 ಲಕ್ಷ ಮತಗಳನ್ನು ಹೊಂದಿರುವ ಬ್ರಾಹ್ಮಣ ಸಮುದಾಯದ ಬೆಂಬಲ ಬೇಕು. ಜೈನರು ಮತ್ತು ಸಿಖ್ಖರು ತಮ್ಮ ಸಮುದಾಯಗಳಿಗಾಗಿ ಯಾವುದೇ ಹಂತಕ್ಕೆ ಹೋಗುತ್ತಾರೆ, ಬ್ರಾಹ್ಮಣರು ಸಹ ಇದೇ ರೀತಿಯ ಬದ್ಧತೆಯನ್ನು ಪ್ರದರ್ಶಿಸಬೇಕು ಎಂದು ರಾವ್ ತಮ್ಮ ಸಮುದಾಯವನ್ನು ಮನವಿ ಮಾಡಿದ್ದಾರೆ,